ಜಿಬಿಎಸ್ ಕಾಯಿಲೆಗೆ ವ್ಯಕ್ತಿ ಮೃತ ಶಂಕೆ!
ವಿಜಯವಾಣಿ ಸುದ್ದಿ ಜಾಲ ಚಿಕ್ಕೋಡಿ:
ಸಂಶಯಾಸ್ಪದ ಜಿಬಿಎಸ್ (ಗುಯಿಲಿನ್ ಬರೊ ಸಿಂಡೋಮ್) ನರ ಸಂಬಂಧಿ ವ್ಯಾದಿಯಿಂದ ತಾಲೂಕಿನ ವ್ಯಕ್ತಿಯೊರ್ವ ಶನಿವಾರ ಮೃತ ಪಟ್ಟಿರುವುದು ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದೋನವಾಡಿ ಗ್ರಾಮದ ನಿವಾಸಿ ಬಾಳಕುಮಾರ ಪಾಟೀಲ(64) ಮೃತ. ಈತ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದ ವೇಳೆ ಮೃತನಾಗಿದ್ದಾನೆ. ಮೃತನ ಸಾವಿಗೆ ಜಿಬಿಎಸ್ ನರ ಸಂಬಂಧಿ ಕಾಯಿಲೆ ಎಂದು ಶಂಕೆ ವ್ಯಕ್ತವಾಗಿದೆ. ಆದರೆ ಜಿಬಿಎಸ್ ಕಾಯಿಲೆ ಎಂದು ದೃಡ ಪಟ್ಟಿಲ್ಲ, ಎಂದು ತಾಲೂಕು ಆರೋಗ್ಯ ವೈದ್ಯಧಿಕಾರಿ ಡಾ.ಸುಕುಮಾರ ಬಾಗಾಯಿ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿರುವ ಜೆಬಿಎಎಸ್ ಕಾಯಿಲೆ ಬಗ್ಗೆ ಗಡಿ ಭಾಗದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ. ಈಗಾಗಲೇ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆನ್ನಾಡಿ ಗ್ರಾಮದ ವ್ಯಕ್ತಿಯಲ್ಲಿ ಈ ಕಾಯಿಲೆ ಕಂಡು ಬಂದಿದೆ. ರೋಗದ ಲಕ್ಷಣಗಳಲ್ಲಿ ಒಂದಾದ ತೀವ್ರ ಜ್ವರ ಮೂರು ದಿನಕ್ಕಿಂತ ಹೆಚ್ಚಾಗಿ ಕಂಡು ಬಂದರೇ ಕೂಡಲೆ ತಪಾಸಣೆ ಮಾಡಬೇಕು, ಮತ್ತು ಆಹಾರ ಸೇವನೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕೆಂದು ಆರೋಗ್ಯ ಇಲಾಖೆ ಹಿರಿಯ ಅಧಿಕಾರಿ ಮನವಿ ಮಾಡಿದ್ದಾರೆ.