ಬೆಳಗಾವಿ: ಶಾಲಾ ಶಿಕ್ಷಣ ಇಲಾಖೆಯು ಪಿಎಸ್ಟಿ ಶಿಕ್ಷಕರ ಸೇವಾ ಅರ್ಹತೆಯನ್ನು 1 ರಿಂದ 5ನೇ ತರಗತಿಗಷ್ಟೇ ನಿಗದಿಪಡಿಸಿದೆ. ಹಾಗಾಗಿ, 6ನೇ ತರಗತಿಯ ಬೋಧನೆ ಹಾಗೂ ಪರೀಕ್ಷೆಯ ಮೌಲ್ಯಮಾಪನ ಮಾಡುವುದಿಲ್ಲ. ನಮ್ಮ ಸೇವೆ ಆ ತರಗತಿಗಳಿಗೂ ಅಗತ್ಯ ಎನಿಸಿದರೆ ಜಿಪಿಟಿ ಶಿಕ್ಷಕರ ಹುದ್ದೆಗಳಿಗೆ ಉನ್ನತಿಗೊಳಿಸಬೇಕು ಎಂದು ಪಿಎಸ್ಟಿ ಸ್ವಾಭಿಮಾನ ಶಿಕ್ಷಕರ ಬಳಗದಿಂದ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಬೆಳಗಾವಿ ನಗರದಲ್ಲಿರುವ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ದಾಸಪ್ಪನವರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದ ಅವರು, ಈಹಿಂದೆ 1ರಿಂದ 7ನೇ ತರಗತಿ ಪಾಠಬೋಧನೆಗಾಗಿ ನೇಮಕಗೊಂಡ ಪಿಎಸ್ಟಿ ಶಿಕ್ಷಕರನ್ನು 1ರಿಂದ 5ನೇ ತರಗತಿಗಳಿಗೆ ಹಿಂಬಡ್ತಿ ಮಾಡಿ ನಿಗದಿಗೊಳಿಸಲಾಗಿದೆ. ಇದರಿಂದ ದಶಕಗಳ ಕಾಲ ಪಾಠಬೋಧನೆ ಮಾಡಿದ ಹಿರಿಯ ಶಿಕ್ಷಕರ ಸೇವಾನುಭವಕ್ಕೆ ಅನ್ಯಾಯವಾಗಿದ್ದು, ಜಿಪಿಟಿ ಹುದ್ದೆಗೆ ಸರಿಸಮಾನವಾಗಿ ಸೇವಾನುಭವ ಪರಿಗಣಿಸಿ ಮುಂಬಡ್ತಿ ನೀಡುವ ಮೂಲಕ ಶಿಕ್ಷಕರಿಗೆ ಆತ್ಮಸ್ಥೆರ್ಯ ತುಂಬಬೇಕು ಎಂದು ಒತ್ತಾಯಿಸಿದರು.
ಶಿಕ್ಷಕರಾದ ಐ.ಜಿ.ಗೂಳಪ್ಪನವರ, ಗಿರೀಶ್ ರುದ್ರಪುರೆ, ರಾಚಪ್ಪ ಕಮ್ಮಾರ, ಅಜೀತ ಜಕ್ಕನ್ನವರ, ಅನ್ವರ್ ಲಂಗೋಟಿ, ಶೇಖರ ಕರಂಬಳಕರ, ಆನಂದಗೌಡ ಕಾದ್ರೋಳ್ಳಿ. ಬಸವರಾಜಸುಣಗಾರ .ವಿ.ಎಂ.ಮುಳ್ಳೂರ, ಇ.ಎ.ಬೆವಿನಕೊಪ್ಪ.ಎಸ್.ಜೆ.ಪಾಲ್ಗುಣ, ಸಿದ್ದಲಿಂಗ ಗಾಣಗಿ, ಬಸವರಾಜ ತಾಳೇಕರ ಹಾಗೂ ಸುರೇಶ ಕೋಲ್ಕಾರ್ ಸೇರಿದಂತೆ ಇತರರಿದ್ದರು.