ಚಿತ್ರದುರ್ಗ: ಅಕ್ರಮಗಳಲ್ಲಿ ಭಾಗಿಯಾಗಿರುವ ಜಿಲ್ಲೆಯ ಕೆಲ ಗ್ರಾಪಂಗಳ ಪಿಡಿಒಗಳನ್ನು ರಕ್ಷಿಸಲಾಗುತ್ತಿದೆ ಎಂದು ಆರೋಪಿಸಿ ಜಿಪಂ ಅಧಿಕಾರಿಗಳ ವಿರುದ್ಧ ಲಂಬಾಣಿ ಬಂಜಾರ ಸಮಾಜದ ಸದಸ್ಯರು ಜಿಪಂ ಬಳಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಸಿಇಒ ಉತ್ತಮ ಹಾಗೂ ಪಾರದರ್ಶಕ ಆಡಳಿತ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಆದರೆ, ಅವರು ಸಾರ್ವಜನಿಕರ ದೂರವಾಣಿ ಕರೆ ಸ್ವೀಕರಿಸುತ್ತಿಲ್ಲ ಎಂದು ಸಮಾಜದ ಜಿಲ್ಲಾಧ್ಯಕ್ಷ ಎಂ. ಸತೀಶ್‌ಕುಮಾರ್ ದೂರಿದರು.
ಉಪ ಕಾರ್ಯದರ್ಶಿ, ಮುಖ್ಯಲೆಕ್ಕಾಧಿಕಾರಿ ವಿರುದ್ಧವೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಾರ್ಗಸೂಚಿ ಉಲ್ಲಂಘಿಸಿ ಕೆಲಸ ಮಾಡುತ್ತಿರುವವರ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸಿ ಸಂಸದ ಗೋವಿಂದ ಎಂ.ಕಾರಜೋಳ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು.
ಪ್ರವೀಣ್ ನಾಯ್ಕ, ಕರಿಯ ನಾಯ್ಕ, ತಿಪ್ಪೇಸ್ವಾಮಿ ನಾಯ್ಕ, ಸೋಮೇನಹಳ್ಳಿ ಪ್ರಶಾಂತ್, ಪರಶುರಾಮ್, ಚಿನ್ಮಯ್, ಗೋವಿಂದ ನಾಯ್ಕ, ಕೊಟ್ರೇಶ್ ಇತರರು ಇದ್ದರು.