ಜಿಲ್ಲೆ

ಜಿಡ್ಡುಗಟ್ಟಿದ ವ್ಯವಸ್ಥೆ ವಿರುದ್ಧ ಶರಣರ ಹೋರಾಟ

ಕಲಬುರಗಿ: ಬಸವಾದಿ ಶರಣರು ೧೨ನೇ ಶತಮಾನದಲ್ಲಿ ಜಿಡ್ಡುಗಟ್ಟಿದ ಸಂಪ್ರದಾಯವಾದಿಗಳು ಮತ್ತು ವ್ಯವಸ್ಥೆ ವಿರುದ್ಧ ಹೋರಾಡಿದವರು. ಕ್ರಾಂತಿಕಾರಿ ವಚನಗಳ ರಚಿಸಿ ಸಮಾಜ ಸುಧಾರಣೆಗೆ ಶ್ರಮಿಸಿದರು ಎಂದು ಕೂಡಲಸಂಗಮ ಬಸವ ರ‍್ಮ ಪೀಠದ ಜಗದ್ಗುರು ಶ್ರೀ ಡಾ.ಗಂಗಾದೇವಿ ಮಾತಾಜಿ ಹೇಳಿದರು.

ಕೆಕೆಸಿಸಿಐ ಸಭಾಂಗಣದಲ್ಲಿ ಬಸವ ಪ್ರಕಾಶನದ ಸಂಸ್ಥಾಪಕಿ ಲಿಂ.ಬಸಮ್ಮ ಬಿ.ಕೊನೇಕರವರ ಸ್ಮರಣರ‍್ಥ ನೀಡುವ ರಾಜ್ಯಮಟ್ಟದ ಬಸವ ಸಿರಿ ಪ್ರಶಸ್ತಿ ಪ್ರದಾನ, ಕಾಯಕ ದಿನಾಚರಣೆಯಲ್ಲಿ ಮಾತನಾಡಿ, ಬಸವಾದಿ ಶರಣರ ಶ್ರೇಷ್ಠವಾದ ವಚನ ಸಾಹಿತ್ಯ ಸುಟ್ಟು ಹಾಕುವ ಹುನ್ನಾರ ಎಲ್ಲೆಡೆ ನಡೆದಿತ್ತು. ಆದರೆ ಶರಣರು ಪ್ರಾಣ ಪಣಕ್ಕೆ ಇಟ್ಟು ವಚನ ಸಾಹಿತ್ಯ ಉಳಿಸಿದರು. ಆದ್ದರಿಂದಲೇ ಇಂದಿಗೂ ಶರಣರು ವಚನಗಳ ರೂಪದಲ್ಲಿ ನಮ್ಮ ಮಧ್ಯೆ ಜೀವಿಸುತ್ತಿದ್ದಾರೆ ಎಂದರು.

ಬಹುದೊಡ್ಡ ಕ್ರಾಂತಿಯಾಗಿ ಎಲ್ಲ ಶರಣರು ಐಕ್ಯರಾದರೂ ವಚನಗಳಲ್ಲಿ ನಮ್ಮೆದುರು ಜೀವಂತವಾಗಿದ್ದಾರೆ. ಬಸವಣ್ಣನ ವಚನಗಳಲ್ಲಿ ಪೂಜಾ ವೈಭವಗಳು ದೊರೆಯುವುದಿಲ್ಲ. ಬದಲಾಗಿ ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವ ಸಂದೇಶವಿದೆ ಎಂದರು.

ವರ‍್ತಾ ಮತ್ತು ಪ್ರಚಾರ ಇಲಾಖೆ ನಿವೃತ್ತ ಜಂಟಿ ನರ‍್ದೇಶಕ ಅಪ್ಪಾರಾವ್​ ಅಕ್ಕೋಣಿ ಮಾತನಾಡಿ, ಜಗತ್ತಿನ ದರ‍್ಶನಿಕರ ತತ್ವಾರ‍್ಶಗಳಲ್ಲಿ ಬಸವಣ್ಣನವರ ಮೂಲ ತತ್ವಗಳು ವಿಭಿನ್ನ, ವಿಶಿಷ್ಟವಾಗಿವೆ. ಕಾಯಕ, ದಾಸೋಹವನ್ನು ಬೋಧಿಸಿದರು. ಕಲ್ಯಾಣ ರ‍್ನಾಟಕ ಭಾಗದಲ್ಲಿ ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನವೂ ಹೆಮ್ಮೆ. ಎಲ್​ಕೆಜಿ, ಯುಕೆಜಿ, ರ‍್ಸರಿ ಮಕ್ಕಳಿಗೆ ಅಕ್ಷರ ಜ್ನಾನಕ್ಕಿಂತ ನೀತಿ ಕಥೆ, ಆಟೋಟಗಳ ಮಾಹಿತಿಯ ಪುಸ್ತಕ ಅವಶ್ಯ ಎಂದರು.

ಕೂಡಲಸಂಗಮದ ಬಸವ ರ‍್ಮ ಪೀಠದ ಜಗದ್ಗುರು ಶ್ರೀ ಡಾ.ಗಂಗಾ ಮಾತಾಜಿ ಅವರಿಗೆ "ಬಸವ ಸಿರಿ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಪರ‍್ವ ಪ್ರಾಥಮಿಕ ಮಕ್ಕಳಿಗಾಗಿ ರಚಿಸಿರುವ ೧೭ ಕೃತಿಗಳನ್ನು ಲೋಕರ‍್ಪಣೆ ಮಾಡಲಾಯಿತು.

ಜ್ಞಾನ ಸಾಗರ ವಿದ್ಯಾಪಿಠದ ಸಂಸ್ಥಾಪಕ ಗಂಗಾಧರ ಎಸ್​.ದೇಸಾಯಿ ಕೃತಿ ಪರಿಚಯಿಸಿದರು. ಸಿದ್ಧಲಿಂಗೇಶ್ವರ ಬುಕ್​ ಡಿಪೋ ಮತ್ತು ಪ್ರಕಾಶನದ ಅಧ್ಯಕ್ಷ ಬಸವರಾಜ ಕೊನೇಕ್​ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಶಿವರಾಜ ಪಾಟೀಲ್​ ಪ್ರಾಸ್ತಾವಿಕವಾಗಿ ಮಾತನಾಡಿದರು.

ಬಿ.ಎಚ್​.ನಿರಗುಡಿ, ಎಸ್​.ಎನ್​.ಪಾಟೀಲ್​, ಸುಜಾತಾ ಜಂಗಮಶೆಟ್ಟಿ, ಡಾ.ಜಯದೇವಿ ಗಾಯಕವಾಡ, ಆರ್​.ಜೆ.ಶೆಟಗಾರ, ಕಾವ್ಯಶ್ರೀ ಮಹಾಗಾಂವಕರ್​, ಶರಣಬಸವ ಕೊನೇಕ್​, ಸಿದ್ದಲಿಂಗ ಕೊನೇಕ್​, ಸರೋಜಾ ಬಿರಾದಾರ, ಪ್ರೀತಿ ಕೋನೆಕ್​, ಈರಣ್ಣ ಕೋನೆಕ್​, ಅಲ್ಲಮಪ್ರಭು ಕೋನೆಕ್​, ಬಿ.ಎ.ಪಾಟೀಲ್​ ಯಾದಗಿರಿ, ವಚನ ಎಸ್​.ಕೊನೇಕ್​, ಶ್ಲೋಕ್​ ಕೊನೇಕ್​, ಬಸಶ್ರೀ ಕೊನೇಕ್​, ಡಾ.ಶೈಲಜಾ ಎಸ್​.ಕೊನೇಕ್​, ರೇವಣಸಿದ್ದಪ್ಪ ಹುಂಡೆಕಾರ ಇತರರಿದ್ದರು. ಡಾ.ಗವಿಸಿದ್ದಪ್ಪ ಪಾಟೀಲ್​ ಸ್ವಾಗತಿಸಿದರು. ಡಾ.ಶರಣಬಸಪ್ಪ ವಡ್ಡನೇಕರಿ ನಿರೂಪಣೆ ಮಾಡಿದರು. ಡಾ.ಚಿ.ಸಿ.ನಿಂಗಣ್ಣ ವಂದಿಸಿದರು.