ಜಿಲ್ಲೆ

ಜಿಟಿಟಿಸಿ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶ

ಚಿತ್ರದುರ್ಗ: ಚಿತ್ರದುರ್ಗ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ)ದಲ್ಲಿ ಪ್ರಸಕ್ತ ಸಾಲಿನ ಶೈಕ್ಷಣಿಕ ಸಾಲಿಗೆ ಮೊದಲು ಬಂದ ವರಿಗೆ ಆದ್ಯತೆಯೊಂದಿಗೆ ಪ್ರವೇಶ ನೀಡಲಾಗುತ್ತದೆ. ಡಿಪ್ಲೊಮಾ ಇನ್ ಟೂಲ್ ಆ್ಯಂಡ್ ಡೈ ಮೇಕಿಂಗ್,ಡಿಪ್ಲೊಮಾ ಇನ್ ಮೆಕಾಟ್ರಾನಿಕ್ಸ್ ಮತ್ತು ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್ ಪ್ರವೇಶಕ್ಕೆ ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನದ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪ್ರತಿ ಕೋರ್ಸ್‌ಗೆ 60 ಸೀಟುಗಳಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆನ್‌ಲೈನ್ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಪೂರ್ಣ ಗೊಳಿಸಿದೆ. ಉಳಿದ ಸೀಟುಗಳನ್ನು ಮೊದಲು ಬಂದವರಿಗೆ ಆದ್ಯತೆ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ. ಅಂತಿಮ ವರ್ಷದಲ್ಲಿ ಕಡ್ಡಾಯವಾಗಿ ಕೈಗಾರಿಕಾ ತರಬೇತಿಯೊಂದಿಗೆ 4 ವರ್ಷಗಳ ಕೋರ್ಸ್ ಇದಾಗಿದೆ.
ತರಬೇತಿ ಸಮಯದಲ್ಲಿ ವಿದ್ಯಾರ್ಥಿಗಳಿಗೆ 15ಸಾವಿರ ರೂ.ಗಳಿಂದ 25 ಸಾವಿರ ರೂ.ನಡುವೆ ಮಾಸಿಕ ವಿದ್ಯಾರ್ಥಿ ವೇತನ ನೀಡಲಾ ಗುವುದು. ಎಲ್ಲ ಕೋರ್ಸ್‌ಗಳಿಗೆ ವಾರ್ಷಿಕ 34ಸಾವಿ ರೂ.ಶುಲ್ಕವನ್ನು ರಾಜ್ಯಸರ್ಕಾರ ವಿದ್ಯಾರ್ಥಿಗಳಿಗೆ ಮರುಪಾವತಿಸುತ್ತದೆ. ಶುಲ್ಕ ಮರುಪಾವತಿಗಾಗಿ ರಾಜ್ಯವಿದ್ಯಾರ್ಥಿವೇತನ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 9738465834/ 9481866855/9945616114ನ್ನು ಸಂಪರ್ಕಿಸ ಬಹುದೆಂದು ಕೇಂದ್ರದ ಪ್ರಾಂಶುಪಾಲ ಬಿ.ಎಸ್.ಸುಹಾಸ್ ತಿಳಿಸಿದ್ದಾರೆ.