ಯರಗೋಳ: ಗ್ರಾಮದಲ್ಲಿ ಶನಿವಾರ ಸಂಜಿಭೀಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಭಕ್ತರಿಂದ ಅದ್ದೂರಿ ಹಾಲೋಕುಳಿ ಕಂಬರೋಹಣ ನಡೆಯಿತು. ಸುರಿಯುತ್ತಿರುವ ತುಂತುರು ಮಳೆ ಲೆಕ್ಕಿಸದೆ ಸಾವಿರಾರು ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿದ್ದು ವಿಶೇಷ. ಬೆಳಗ್ಗೆ ಮಂದಿರದ ಅರ್ಚಕ ಅಮೃತ್ ಹೂಗಾರ ಮನೆಯಿಂದ ಹೊರಟ ಪಲ್ಲಕ್ಕಿ ಮಧ್ಯಾಹ್ನದ ಹೊತ್ತಿಗೆ ಕೆರೆ ಅಂಗಳದಲ್ಲಿರುವ ಸಂಜಿಭೀಮೇಶ್ವರ ಮಂದಿರ ತಲುಪಿತು.
ಭಕ್ತರು ನೈವೇದ್ಯ ಅರ್ಪಿಸಿದರು. ನಂತರ ಹಲಗೆ, ಡೊಳ್ಳು, ಕಳಸ ಹೊತ್ತ ಮಹಿಳೆಯರು ಜೋಡು ಕಂಬಗಳಿಗೆ ಪೂಜೆ ನೆರವೇರಿಸಿದರು. ಮಣ್ಣಿನಿಂದ ಸವರಿದ ಕಟ್ಟಿಗೆ ಕಂಬಗಳಿಗೆ, ಮೊಸರು, ಬೆಣ್ಣೆ, ಹಚ್ಚಲಾಯಿತು. ಸಂಪ್ರದಾಯದAತೆ ಹಿರಿಕೇರಿಯ ನಾಯ್ಕೋಡಿ ಮನೆತನದವರು ಮೊದಲ ಕಂಬರೋಹಣ ಮಾಡಿದರು.
೨ನೇ ಕಂಬರೋಣವನ್ನು ಗ್ರಾಮಸ್ಥರು ಒಗ್ಗಟ್ಟಿನಿಂದ ಮಾಡಿದರು. ತುಂಬಿದ ದೊಡ್ಡ ಕೆರೆಯಲ್ಲಿ ಪುಣ್ಯ ಸ್ನಾನ ಮುಗಿಸಿದ ಭಕ್ತರು ಜೈ ಸಂಜಿಭೀಮೇಶ್ವರ ಮಹಾರಾಜಕಿ ಜೈ ಎಂಬ ಘೋಷವಾಕ್ಯ ಮೊಳಗಿದವು. ಗ್ರಾಮದ ಪೊಲೀಸ್ ಗೌಡ, ಮಾಲಿಗೌಡ, ಕುಲಕರ್ಣಿ, ದಳಪತಿ, ಸಾಹುಕಾರ, ಮಾನೆಗಾರ, ಕೋಲ್ಕಾರ್, ಚಡಬೋ, ಗೋಡೆಕಾರ, ಬಾನರ್, ಜನಬೋ, ಮುಸ್ಲಿಂ ಸಮುದಾಯದ ಪ್ರಮುಖರು, ಗ್ರಾಪಂ ಅಧ್ಯP್ಷÀರು, ಸದಸ್ಯರು, ಪೊಲೀಸ್‌ಸಿಬ್ಬಂದಿ ಭಾಗವಹಿಸಿದ್ದರು. ಜಾತ್ರೆಗೆ ಅಲ್ಲಿಪುರ, ಮಲ್ಲಕಪ್ಪನಹಳ್ಳಿ, ದಂಡಗುAಡ, ಸಂಕನೂರ, ಅಲ್ಲೂರ, ಹತ್ತಿಕುಣಿ, ಭೀಮನಹಳ್ಳಿ, ವಡ್ನಳ್ಳಿ ಗ್ರಾಮದ ನೂರಾರು ಸಂಖ್ಯೆ ಭಕ್ತರು ವೀP್ಷÀಣೆಗೆ ಆಗಮಿಸಿದ್ದರು.