ಕಲಬುರಗಿ: ಪೌಷ್ಠಿಕಾಂಶ, ವಿಶಿಷ್ಟ ಸ್ವಾಧ, ಗುಣಮುಟ್ಟವುಳ್ಳ ಜಿಲ್ಲೆಯಲ್ಲಿ ಬೆಳೆದ ತೊಗರಿಗೆ ಜಿಐ (ಜಾಗತಿಕ ವಿಶೇಷ ಗುರುತಿಸುವಿಕೆ) ಟ್ಯಾಗ್ ದೊರೆತ್ತಿದ್ದು, ಜಿಐ ಟ್ಯಾಗ್ ಪ್ರಮಾಣಿತ ತೊಗರಿಗೆ ಹೆಚ್ಚುವರಿಯಾಗಿ ಶೇ.೨೦ ಎಂಎಸ್‌ಪಿ ನೀಡಬೇಕು ಎಂದು ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ್ ಆಗ್ರಹಿಸಿದರು.
ಅತ್ಯಧಿಕ ಪೌಷ್ಠಿಕಾಂಶ, ಹೆಚ್ಚಿನ ವಿಟಾಮಿನ್ಸ್ ಹೊಂದಿರುವ ಕಲಬುರಗಿ ಜಿಲ್ಲೆಯ ತೊಗರಿಗೆ ೨೦೧೭ರಲ್ಲಿಯೇ ಜಿಐ ಟ್ಯಾಗ್ ದೊರಕಿದೆ. ಇದರಿಂದ ವಿರ್ಶವದೆಲ್ಲೆಡೆ ಮಾರುಕಟ್ಟೆ ದೊರೆಯುವ ನಿರೀಕ್ಷೆ ಇತ್ತು. ಆದರೆ ಅದನ್ನು ಬ್ರ್ಯಾಂಡ್ ಮಾಡಲು ವಿಫಲರಾಗಿದ್ದು, ಗುಣಮಟ್ಟದ ತೊಗರಿ ಬೆಳೆದ ರೈತರಿಗೆ ಯಾವುದೇ ಹೆಚ್ಚುವರಿ ಲಾಭವಾಗುತ್ತಿಲ್ಲ. ಆದ್ದರಿಂದ ಸರ್ಕಾರ ಹೆಚ್ಚಿನ ಬೆಂಬಲ ಬೆಲೆ ನೀಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ೧೪ ರೈತ ಉತ್ಪಾದಕ ಸಂಘಗಳಿಗೆ ಜಿಐ ಟ್ಯಾಗ್ ಪ್ರಮಾಣಿತ ಗುಣಮಟ್ಟದ ತೊಗರಿ ಮಾರಾಟಕ್ಕೆ ಪರವಾನಗಿ ನೀಡಲಾಗಿದೆ. ಅಲ್ಲದೆ ೧,೫೦೦ ರೈತರಿಗೂ ಪರವಾನಗಿ ನೀಡಲಾಗಿದೆ. ಇವರೆಲ್ಲರೂ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಸಹಕಾರದಲ್ಲಿ ಉತ್ತಮ ಮಾರುಕಟ್ಟೆ ಪಡೆಯಬೇಕು. ಆದರೆ ಈ ಪ್ರಯತ್ನಗಳು ಸಫಲವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಜಿಐ ಟ್ಯಾಗ್ ಲಾಭ ದೊರೆಯಲು ಸಾಮಾನ್ಯ ತೊಗರಿ ಮತ್ತು ಜಿಐ ಟ್ಯಾಗ್ ಪ್ರಮಾಣಿತ ತೊಗರಿಗೆ ಪ್ರತ್ಯೇಕ ದರ ನಿಗದಿ ಮಾಡಬೇಕು. ಈ ಬಗ್ಗೆ ಕೇಂದ್ರ ಕೃಷಿ ಬೆಲೆ ಆಯೋಗವು ತೊಗರಿಯನ್ನು ಪ್ರತ್ಯೇಕವಾಗಿಸಿ ದರ ನಿಗದಿ ಮಾಡಬೇಕು, ವಿಶೇಷವಾಗಿ ಬೆಂಬಲ ಬೆಲೆಯನ್ನು ಶೇ.೨೦ ಹೆಚ್ಚುವರಿ ನೀಡಬೇಕು ಎಂದು ಆಗ್ರಹಿಸಿದರು.
ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು, ಆಗ್ರಹಿಸಲಾಗಿದೆ. ಕೇಂದ್ರ ಸರ್ಕಾರ ಗಮನ ಹರಿಸಿ, ಕೃಷಿ ಬೆಲೆ ಆಯೋಗಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಬೀಜ ಬೆಳೆಗಾರರ ಸಂಘದ ಅಧ್ಯಕ್ಷ ಚಂದ್ರಶೇಖರ ಹರಸೂರ, ರಾಜೇಂದ್ರ ಕರೆಕಲ್, ಬಸವರಾಜ ಪಾಟೀಲ್, ಮಲ್ಲಿಕಾರ್ಜುನ, ಧನಂಜಯ ಕುಲ್ಕರ್ಣಿ ಟೆಂಗಳಿ ಇತರರಿದ್ದರು.
ಬಾಕ್ಸ್
ದ್ವಿದಳ ಧಾನ್ಯ ಮಂಡಳಿ ವಿಫಲ
ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯಿAದ ಜಿಐ ತೊಗರಿಗೆ ಹೆಚ್ಚುವರಿ ಬೆಲೆ, ಮಾರುಕಟ್ಟೆ ದೊರಕಿಸಲು ರಾಜ್ಯ ಸರ್ಕಾರ ಹಣ ಮೀಸಲಿಟ್ಟರೂ, ಸಮರ್ಪಕ ಪ್ರಯತ್ನವಾಗುತ್ತಿಲ್ಲ. ಸರ್ಕಾರದ ಅತಿಯಾದ ಕಟ್ಟುಪಾಡು, ನಿಯಮಗಳ ಕಾರಣಕ್ಕೆ ಮಂಡಳಿಯ ಅಧಿಕಾರಿಗಳು ಜಿಐ ಟ್ಯಾಗ್ ಗುಣಮಟ್ಟದ ತೊಗರಿ ಮಾರುಕಟ್ಟೆಗೆ ಮುಂದೆ ಬರುತ್ತಿಲ್ಲ. ಭೀಮಾ ಪಲ್ಸ್ ಬ್ರಾÈಂಡ್ ಮಾಡಿದ್ದರೂ ಸಹ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸಗಳೇ ಆಗುತ್ತಿಲ್ಲ. ಕಳೆದ ನಾಲ್ಕೆÊದು ವರ್ಷದಲ್ಲಿ ಕೇವಲ ೨೫ ಲಕ್ಷ ರೂ. ವ್ಯವಹಾರ ಮಾಡಲಾಗಿದೆ ಎಂದು ಬಸವರಾಜ ಇಂಗಿನ್ ಬೇಸರ ವ್ಯಕ್ತಪಡಿಸಿದರು.