ಜಿಲ್ಲೆ

ಜಿಎಸ್ ಟಿ ವಿರುದ್ಧ ಆಕ್ರೋಶ

ಬಾಗಲಕೋಟೆ: ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಡಿ ವಿಧಿಸಿರುವುದು ಖಂಡಿಸಿ ಹಾಗೂ ದಿನ ಬಳಕೆ ವಸ್ತುಗಳ ಬೆಲೆ ಕಡಿತಗೊಳಿಸಬೇಕು ಎಂದು ಆಗ್ರಹಿಸಿ ಆಮ್ ಆದ್ಮಿ ಪಕ್ಷದ ಜಿಲ್ಲಾ ಘಟಕ ನೇತೃತ್ವದಲ್ಲಿ ಕಾರ್ಯಕರ್ತರು ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದ ಎಎಪಿ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿ ಸುನೀಲಕುಮಾರ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿದರು.
ಕೇಂದ್ರ ಸರ್ಕಾರ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಽಸಿ ಬಡ, ಶ್ರಮಿಕರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕುತ್ತಿದೆ. ಸರಕು-ಸೇವಾ ತೆರಿಗೆ ಇದು ವರೆಗೆ ವಿನಾಯಿತಿ ನೀಡಲಾಗಿತ್ತು. ಹಾಲು, ಮೊಸರು, ಮಜ್ಜಿಗೆ ಸ್ಥಳೀಯ ಪದಾರ್ಥಗಳ ಮೇಲೆ ತೆರಿಗೆ ಹಾಕುವ ಮೂಲಕ ಜನ ಸಾಮಾನ್ಯ ಜೀವನ ಮೇಲೆ ಬರೆ ಎಳೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನ ಸಾಮಾನ್ಯರ ನಿತ್ಯ ಬಳಸುವ ಗ್ಯಾಸ, ಅಡುಗೆ ಏಣ್ಣೆ, ಬೆಳೆ ಕಾಳು ಹೀಗೆ ಎಲ್ಲವನ್ನು ದುಬಾರಿ ಮಾಡಿ ಕೇಂದ್ರ ಸರ್ಕಾರ ಮೋಜು ನೋಡುತ್ತಿದೆ. ದೇಶದ ಸಂಪತ್ತು ಲೂಟಿ ಹೊಡೆದಿರುವ ವಿಜಯ ಮಲ್ಯ, ನೀರವ ಮೋದಿ, ಲಲಿತ ಮೋದಿ ಕ್ರಮ ತೆಗೆದುಕೊಂಡು ವಸೂಲಿ ಮಾಡದೆ ಜನ ಸಾಮನ್ಯರ ಬದುಕಿನ ಮೇಲೆ ಆರ್ಥಿಕ ಹೊರೆ ಹೆಚ್ಚಿಸುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಅಡುಗೆ ಎಣ್ಣೆಯ ಬೆಲೆ, ಕಡಲೆ ಬೆಳೆ, ಅಡುಗೆ ಅನೀಲ, ಮಡಿಕೆ ಕಾಳು ಸೇರಿದಂತೆ ಅಗತ್ಯ ವಸ್ತುಗಳ ಮೇಲಿನ ತೆರಿಗೆ ಇಳಿಸಬೇಕು. ಬೆಲೆ ತಗ್ಗಿಸಬೇಕು ಎಂದು ಒತ್ತಾಯಿಸಿದರು. ಎಎಪಿ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಉಪಾಧ್ಯಕ್ಷ ಕೆ.ಎಂ.ಕಲಾದಗಿ, ಕಾರ್ಯದರ್ಶಿ ಮುತ್ತಪ್ಪ ಕೋಮಾರ, ಮುಖಂಡರಾದ ವಿರೇಶ ಬಣಗಾರ, ಪೂರ್ಣಿಮಾ ಜುಮನಾಳ, ಸಂಜು ಲಮಾಣಿ, ಭಾಗ್ಯ ಬೆಟಗೇರಿ, ಸ್ನೇಹಾ ಹವಾಲ್ದಾರ, ಶಿಲ್ಪಾ ಕಾಳೆ ಇತರರು ಇದ್ದರು.