ಹಾಸನ: ಹಾಸನ ನಗರದ ಕಸ್ತೂರ ಬಾ ರಸ್ತೆಯಲ್ಲಿ ನವೀಕರಣಗೊಂಡ ಜಿ.ಎಲ್. ಆಚಾರ್ಯ ಜುವೆಲ್ಲರ್ ಮಳಿಗೆಯನ್ನು ಬುಧವಾರ ನಟಿ ಮಿಲನಾ ನಾಗರಾಜು ಅವರು ಉದ್ಘಾಟಿಸಿದರು.
ಬಳಿಕ ಮಳಿಗೆಯಲ್ಲಿ ಇರುವ ಆಭರಣಗಳ ಸಂಗ್ರಹವನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ಜಿ.ಎಲ್. ಆಚಾರ್ಯ ಜುವೆಲ್ಲರ್ಸ್ ನನ್ನ ಅಚ್ಚುಮೆಚ್ಚಿನ ಆಭರಣ ಅಂಗಡಿಯಾಗಿದೆ. ಏಕೆಂದರೆ ಇಲ್ಲಿರುವ ಕಲೆಕ್ಷನ್ಸ್, ಡಿಸೈನ್ ತುಂಬಾ ಇಷ್ಟವಾಗಿದೆ. ಪ್ರತಿಯೊಬ್ಬರಿಗೂ ಕೂಡ ಚಿನ್ನ ಅಂದರೆ ಅಚ್ಚುಮೆಚ್ಚು. ಅದರಲ್ಲೂ ಹೆಣ್ಣು ಮಕ್ಕಳಿಗೆ ಚಿನ್ನದ ಮೇಲೆ ಸಾಕಷ್ಟು ಪ್ರೀತಿ ಹೊಂದಿದ್ದಾರೆ. ಸಣ್ಣ ಪ್ರಮಾಣದಿಂದ ದೊಡ್ಡ ಆಭರಣಗಳು ಇಲ್ಲಿ ದೊರೆಯುತ್ತವೆ. ಎಲ್ಲ ವರ್ಗದವರು ಬಂದು ಇಲ್ಲಿ ಚಿನ್ನಾಭರಣಗಳನ್ನು ಖರೀದಿ ಮಾಡಬಹುದು ಎಂದು ಹೇಳಿದರು.
ಮಳಿಗೆಯ ವ್ಯವಸ್ಥಾಪಕ ನಿರ್ದೇಶಕರಾದ ಲಕ್ಷ್ಮೀಕಾಂತ ಬಿ ಆಚಾರ್ಯ ಅವರು ಮಾತನಾಡಿ, ಜಿ.ಎಲ್ ಆಚಾರ್ಯ ಜ್ಯುವೆಲರ್ಸ್ ಹಾಸನದ ಕಸ್ತೂರಬಾ ರಸ್ತೆ, ದೇವಿಗೆರೆ ಸರ್ಕಲ್‌ನಲ್ಲಿ ಶಾಖೆಯನ್ನು ಹೊಂದಿದ್ದು, ಜತೆಗೆ ಪುತ್ತೂರು, ಸುಳ್ಯ, ಕುಶಾಲನಗರ ಹಾಗೂ ಮೂಡಬಿದರೆಯಲ್ಲೂ ತಮ್ಮದೇ ಶಾಖೆಗಳನ್ನು ಹೊಂದಿದೆ. ಕಳೆದ 18 ವರ್ಷಗಳಿಂದ ಹಾಸನ ಜಿಲ್ಲೆಯ ಜನತೆಗೆ ವಿಶೇಷ ಚಿನ್ನಾಭರಣಗಳನ್ನು ಉತ್ತಮ ದರದಲ್ಲಿ ನೀಡುವ ಮೂಲಕ ಲಕ್ಷಾಂತರ ಗ್ರಾಹಕರ ಮನಗೆದ್ದಿದ್ದೇವೆ. ನೂತನ ಬೃಹತ್ ಆಭರಣ ಮಳಿಗೆಯಲ್ಲಿ ಎಲ್ಲಾ ಪೀಳಿಗೆಯ ಅಭಿರುಚಿಗೆ ಬೇಕಾದ ಚಿನ್ನದ ಆಭರಣಗಳ ವಿಶಿಷ್ಟ ಕಲೆಕ್ಷನ್ ಇದ್ದು, ಬೆಳ್ಳಿಯ ಆಭರಣ ಹಾಗೂ ಉಡುಗೊರೆಗಳ ಅಮೋಘ ಸಂಗ್ರಹವಿದೆ ಎಂದರು.
ಅಮೂಲ್ಯ ವಜ್ರಾಭರಣಗಳ ನೂತನ ಸಂಗ್ರಹದೊಂದಿಗೆ ಪರೀಕ್ಷಿಸಲಾಗಿರುವ ಮತ್ತು ಪ್ರಾಮಾಣಿಕೃತ ವಜ್ರಗಳು ಮತ್ತು ಮದುವೆ ಆಭರಣಗಳ ಹಾಗೂ ಆಂಟಿಕ್ ಚಿನ್ನಾಭರಣಗಳ ಪ್ರತ್ಯೇಕ ವಿಭಾಗವಾದ ಆಂಟಿಕ್ ಜೋನ್ ಇದೆ. ಈ ಹಿನ್ನಲೆಯಲ್ಲಿ ಮಳಿಗೆಯಲ್ಲಿ ವಿಶಿಷ್ಠವಾದ, ವಿನೂತನವಾದ, ಅಪರೂಪದ ವಿವಿಧ ಮಾದರಿಯ ಚಿನ್ನ ಮತ್ತು ಬೆಳ್ಳಿಯ ಅಭರಣಗಳು ಇಲ್ಲಿ ದೊರಕುತ್ತದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಹುದು ಎಂದು ಹೇಳಿದರು.
ಜಿ.ಎಲ್.ಆಚಾರ್ಯ ಜ್ಯುವೆಲರ್ಸ್‌ನಲ್ಲಿ ನವೀಕೃತ ವಿಶಾಲ ಬಹುಮಹಡಿಯ ಆಭರಣ ಮಳಿಗೆಯಲ್ಲಿ ಉತ್ಕೃಷ್ಟ ವಜ್ರಾಭರಣಗಳ ಸಂಗ್ರಹ, ತರಬೇತಾದ ಸಿಬ್ಬಂದಿಯಿಂದ ಪರಿಪೂರ್ಣ ಮಾರ್ಗದರ್ಶನ, ಸಂಪೂರ್ಣ ಪಾರದರ್ಶಕತೆಯ ಬಿಲ್ಲಿಂಗ್, ಖರೀದಿಯ ನಂತರವೂ ವಸ್ತುಗಳ ಮೇಲೆ ಅತ್ಯುತ್ತಮ ಸೇವೆ. ಹಾಗೂ ಜಿಎಲ್ ಸ್ವರ್ಣ ನಿಧಿ ಸ್ಕೀಮ್‌ನ ವಿಶೇಷ ಪ್ರಯೋಜನಗಳನ್ನು ಹಾಸನ ಜಿಲ್ಲೆಯ ಜನತೆ ಉಪಯೋಗವನ್ನು ಪಡೆಯಬಹುದಾಗಿದೆ ಎಂದು ತಿಳಿಸಿದರು.
ಜಿಎಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಜಿ.ಎಲ್. ಬಲರಾಮ್ ಆಚಾರ್ಯ, ವ್ಯವಸ್ಥಾಪಕ ನಿರ್ದೇಶಕ ಸುಧನ್ವ ಬಿ ಆಚಾರ್ಯ ಹಾಗೂ ಕುಟುಂಬ ಸದಸ್ಯರು ಹಾಜರಿದ್ದರು.