ಹನೂರು: ತಾಲೂಕಿನ ಅಜ್ಜೀಪುರ ಗ್ರಾಮದ ಮನೆಯೊಂದರಲ್ಲಿ ಭಾನುವಾರ ರಾತ್ರಿ ಜಿಂಕೆ ಮಾಂಸದ ಅಡುಗೆ ತಯಾರಿಸಿದ್ದವನನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.
ತಾಲೂಕಿನ ಅಜ್ಜೀಪುರ ಗ್ರಾಮದ ನಾಗರಾಜು (50) ಬಂಧಿತ ಆರೋಪಿ. ಈತ ಅರಣ್ಯ ಪ್ರದೇಶದಲ್ಲಿ ಜಿಂಕೆಯನ್ನು ಬೇಟೆಯಾಡಿ ರಾತ್ರಿ ಮನೆಯಲ್ಲಿ ಬಾಡೂಟ ತಯಾರಿಸುತ್ತಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹನೂರು ಬಫರ್ ವಲಯದ ಆರ್‌ಎಫ್‌ಒ ಪ್ರವೀಣ್ ಹಾಗೂ ಸಿಬ್ಬಂದಿ ತಂಡ ಮನೆಯ ಮೇಲೆ ದಾಳಿ ನಡೆಸಿತು. ಜಿಂಕೆ ಮಾಂಸದ ಅಡುಗೆ ಹಾಗೂ ಪರಿಕರವನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನಕ್ಕೆ ನೀಡಿದೆ. ದಾಳಿಯಲ್ಲಿ ಸಿಬ್ಬಂದಿ ವಿನಾಯಕ, ಅನಿಲ್‌ಕುಮಾರ್, ರಾಯಪ್ಪ ಇತರರು ಭಾಗವಹಿಸಿದ್ದರು.