ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ-ಗುಂಡಾಲ್ ರಸ್ತೆಯಲ್ಲಿ ಜಿಂಕೆ ಚರ್ಮವನ್ನು ಸಾಗಿಸುತ್ತಿದ್ದ ಆರೋಪಿಯನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂಧಿಸಿದ್ದಾರೆ. 
ಜಿಲ್ಲೆ

ಜಿಂಕೆ ಚರ್ಮ ಸಾಗಿಸುತ್ತಿದ್ದವನ ಬಂಧನ

ಕೊಳ್ಳೇಗಾಲ: ತಾಲೂಕಿನ ದೊಡ್ಡಿಂದುವಾಡಿ-ಗುಂಡಾಲ್ ರಸ್ತೆಯಲ್ಲಿ ಜಿಂಕೆ ಚರ್ಮವನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಅರಣ್ಯ ಸಂಚಾರಿ ದಳ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ತಾಲೂಕಿನ ಪಾಳ್ಯ ಗ್ರಾಮದ ಲೇ.ಮಸಣನಾಯಕ ಎಂಬುವರ ಮಗ ಕಾಂತರಾಜು (32) ಬಂಧಿತ. ಮತ್ತೊಬ್ಬ ಆರೋಪಿ ದೊಡ್ಡಿಂದುವಾಡಿ ಗ್ರಾಮದ ಗೂಳಿಶೆಟ್ಟಿ ಮಗ ಮಹದೇವ ಅಲಿಯಾಸ್ ಗೊದ್ಮಿನಿ (52) ತಲೆಮರೆಸಿಕೊಂಡಿದ್ದಾನೆ.

ಇವರು ಚೀಲವೊಂದರಲ್ಲಿ ಜಿಂಕೆ ಚರ್ಮ ಸಾಗಿಸುತ್ತಿದ್ದ ಖಚಿತ ಮಾಹಿತಿ ತಿಳಿದ ಅರಣ್ಯ ಸಂಚಾರಿ ದಳದ ಪಿಎಸ್‌ಐ ವಿಜಯರಾಜು ತಂಡ ದಾಳಿ ನಡೆಸಿತು. ಈ ವೇಳೆ ಕಾಂತರಾಜು ಸಿಕ್ಕಿಬಿದ್ದಿದ್ದು, ಮಹದೇವ ಪರಾರಿಯಾಗಿದ್ದಾನೆ. ಬಂಧಿತನಿಂದ 1 ಮೊಬೈಲ್, 720 ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ಪಟ್ಟಣದ ಅರಣ್ಯ ಸಂಚಾರಿ ದಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಪೊಲೀಸ್ ಅರಣ್ಯ ಸಂಚಾರಿ ದಳದ ಸಿಬ್ಬಂದಿ ತಕ್ಕಿವುಲ್ಲಾ, ರಾಮಚಂದ್ರ, ಬಸವರಾಜು, ಸ್ವಾಮಿ, ಶಂಕರ್, ಚಾಲಕ ಪ್ರಭಾಕರ್ ಇದ್ದರು.