ಮಡಿಕೇರಿ: ಜಿಂಕೆ ಚರ್ಮವನ್ನು ಮಾರಾಟ ಮಾಡಲು ಯತ್ನಿಸಿದ ಆರೋಪಿಯನ್ನು ಸಿಐಡಿ ಪೊಲೀಸ್ ಅರಣ್ಯ ಘಟಕದ ಸಿಬ್ಬಂದಿ ಬಂಧಿಸಿದ್ದಾರೆ. ಮೈಸೂರು ಜಿಲ್ಲೆ ನಂಜನಗೂಡು ನಿವಾಸಿ ವೆಂಕ ಟೇಶ್ ಬಂಧಿತ ಆರೋಪಿ.
ಮಡಿಕೇರಿ ನಗರ ಸುದ ರ್ಶನ ವೃತ್ತದ ಹತ್ತಿರ ಸಿದ್ದಾ ಪುರ ಕಡೆಗೆ ಹೋಗುವ ರಸ್ತೆಯ ಬಸ್ ನಿಲ್ದಾಣದ ಬಳಿ ವೆಂಕಟೇಶ್ ಅಕ್ರಮ ವಾಗಿ ಜಿಂಕೆಯ ಚರ್ಮ ಮಾರಾಟ ಮಾಡಲು ಪ್ರಯತ್ನಿ ಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಗುರುವಾರ ದಾಳಿ ನಡೆಸಿದರು. ಜಿಂಕೆ ಚರ್ಮ ಹಾಗೂ ಆರೋಪಿಯನ್ನು ಕಾರ್ಯಾಚರಣೆ ತಂಡ ವಶಕ್ಕೆ ಪಡೆದಿದೆ. ಕಾರ್ಯಾಚರಣೆಯಲ್ಲಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕೆ.ವಿ.ಶರತ್‌ಚಂದ್ರ ನಿರ್ದೇಶನದ ಮೇರೆಗೆ ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕ ಕೆ.ಬಿ.ವಿಶ್ವನಾಥ್ ಮಾರ್ಗದರ್ಶನದಲ್ಲಿ ಮಡಿಕೇರಿ ಅರಣ್ಯ ಸಂಚಾರ ದಳದ ಪಿಎಸ್‌ಐ ಸಿ.ಯು.ಸವಿ, ಹೆಡ್ ಕಾನ್‌ಸ್ಟೆಬಲ್‌ಗಳಾದ ಶೇಖರ್, ರಾಜೇಶ್, ರಾಘವೇಂದ್ರ, ಯೋಗೇಶ್ ಪಾಲ್ಗೊಂಡಿದ್ದರು.