ಜಿಲ್ಲೆ

ಜಿ-೯೯  ದಶಮಾನೋತ್ಸವ ಸಮಾರಂಭ ಸೆ.೧೦ ರಂದು


ಕಲಬುರಗಿ : ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಜಿ-೯೯ ಸಂಘಟನೆಯ ದಶಮಾನೋತ್ಸವ ಸಮಾರಂಭ ಹಾಗೂ  ಚಾರಿಟಿ ಸರ್ವಿಂಗ್ ಹ್ಯೂಮ್ಯಾನಿಟಿ  ಶೂವನ್ನು ಸೆ.೧೦ ರಂದು ಮಧ್ಯಾಹ್ನ ೧೨-೩೦ ಗಂಟೆಗೆ ನಗರದ  ಎಸ್.ಎಂ.ಪAಡಿತ ರಂಗಮAದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಕ್ತಂಪುರದ ಗುರುಬ್ರಹ್ಮನ್ಮಠದ ಶಿವಾನಂದ ಮಹಾಸ್ವಾಮೀಜಿ ಹಾಗೂ  ಗದ್ದುಗೆಮಠದ ಪೂಜ್ಯ ಚರಲಿಂಗ ಮಹಾಸ್ವಾಮೀಜಿಗಳ ಸನ್ನಿದಾಣದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರು ಶರಣಬಸವೇಶ್ವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವರು. ಪೊಲೀಸ್ ತರಬೇತಿ  ಮಹಾವಿದ್ಯಾಲಯದ ಪ್ರಾಚಾರ್ಯರಾಗಿರುವ ಎಸ್ಪಿ  ಡಿ.ಕಿಶೋರಬಾಬು ಉದ್ಘಾಟಿಸುವರು.
 ಸಿಸ್ಟರ್ ಸಂಜನಾ ಹಾಗೂ ಉದ್ಯಮಿ ಸತ್ಯನಾಥ ಶೆಟ್ಟಿ ಅವರು ವಿದ್ಯಾರ್ಥಿ ವೇತನ ವಿತರಿಸುವರು. ಕೆಕೆಸಿಸಿಐ ಅಧ್ಯಕ್ಷ ಶಶಿಕಾಂತ ಪಾಟೀಲ್, ರೋಟರಿ ಕ್ಲಬ್ ಅಧ್ಯಕ್ಷ ಗಿರಿಧರ ಮುಕ್ಕಾ ಇತರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು.