ಕೆ.ಎಂ.ದೊಡ್ಡಿ: ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ನಾಡು-ನುಡಿ, ನೆಲ-ಜಲ ರಕ್ಷಣೆಗಾಗಿ ಹೋರಾಟ ನಡೆಸುವುದರ ಜತೆಗೆ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಿ ಭವಿಷ್ಯ ಉತ್ತಮಗೊಳಿಸಿದ ವಾಜಿ ಸಂಸದ ದಿ.ಜಿ.ವಾದೇಗೌಡ ಅವರಿಗೆ ಕರ್ನಾಟ ರತ್ನ ಪ್ರಶಸ್ತಿ ನೀಡಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಒತ್ತಾಯಿಸಿದರು.
ಇಲ್ಲಿನ ಭಾರತೀ ವಿದ್ಯಾಸಂಸ್ಥೆ ವತಿಯಿಂದ ಕಾಲೇಜು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಭಾರತೀ ಉತ್ಸವ ಕಾರ್ಯಕ್ರಮದಲ್ಲಿ ವಾತನಾಡಿದ ಅವರು, ವಾಜಿ ಸಂಸದ ದಿವಂಗತ ಜಿ.ವಾದೇಗೌಡರು ತಮ್ಮ ಉಸಿರು ಇರುವ ತನಕವೂ ಹೋರಾಟದ ಮುಂಚೂಣಿ ನಾಯಕರಾಗಿದ್ದರು. ಜಿಲ್ಲೆಯ ಕಾವೇರಿ ಹೋರಾಟದ ಶಕ್ತಿ, ಚೈತನ್ಯವಾಗಿದ್ದರು. ಬಡ ಮಕ್ಕಳಿಗೂ ಶಿಕ್ಷಣ ನೀಡಬೇಕೆಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ ಫಲದಿಂದಾಗಿ ದೇಶದ ವಿವಿಧೆಡೆಯಿಂದ ಶಿಕ್ಷಣ ಪಡೆಯಲು ಭಾರತೀನಗರಕ್ಕೆ ಬರುವ ರೀತಿಯಲ್ಲಿ ಅಡಿಪಾಯ ಹಾಕಿಕೊಟ್ಟು, ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕಾಗಿದ್ದಾರೆ. ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಪಾಲಕರು ಕಷ್ಟ ಪಟ್ಟು ಶಾಲೆ, ಕಾಲೇಜಿಗೆ ಕಳುಹಿಸುತ್ತಾರೆ. ಗುರಿ ಮುಟ್ಟುವ ತನಕ ಓದಿ ಉನ್ನತ ಹುದ್ದೆಯನ್ನು ಆಲಂಕರಿಸಬೇಕು. ಮಕ್ಕಳಿಗಾಗಿ ತ್ಯಾಗ ವಾಡಿದ ತಂದೆ ತಾಯಿಗಳಿಗೆ ದೇವಸ್ಥಾನ ಕಟ್ಟಿಸದಿದ್ದರೂ ಪರವಾಗಿಲ್ಲ ಆದರೆ, ದೇವಸ್ಥಾನದ ಮುಂದೆ ಕೂರಿಸದೇ ಋಣ ತೀರಿಸಿ ಎಂದು ಹೇಳಿದರು.
ಗಾಮೀಣ ವಿದ್ಯಾರ್ಥಿಗಳು ಸರಿಯಾಗಿ ಇಂಗ್ಲಿಷ್ ಬರುವುದಿಲ್ಲ ಎಂದು ಚಿಂತಿಸಬೇಡಿ. ಇಂಗ್ಲಿಷ್ ಇರೋದೆ ತಪ್ಪು ವಾತನಾಡುವುದಕ್ಕೆ, ಕನ್ನಡ ಇರುವುದೇ ಸತ್ಯ ವಾತಾಡುವುದಕ್ಕೆ. ಕೀಳರಿಮೆ ಬಿಟ್ಟು ಓದಿನ ಕಡೆಗೆ ಮುಖ ವಾಡಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆಭದ್ರತೆ ಕಾಣುತ್ತಿದೆ. ಪದವಿ ಪಡೆದರೂ ಭಯ, ಆತಂಕ ಎದುರಾಗಿದೆ. ತಮ್ಮಲ್ಲಿ ವಿಶೇಷ ಪ್ರತಿಭೆ ಇದ್ದರೆ ಎಲ್ಲಿ ಬೇಕಾದರೂ ಉದ್ಯೋಗ ಪಡೆಯಬಹದು. ನಿಮಗೆ ನೀವೆ ಶಕ್ತಿ ಎಂದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ವಾದೇಗೌಡ ವಾತನಾಡಿ, ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಭಾರತೀ ಎಜುಕೇಷನ್ ಟ್ರಸ್ಟ್ ಕ್ಯಾಂಪಸ್‌ನಲ್ಲಿಯೇ ಎಲ್ಲ ರೀತಿಯ ಕೋರ್ಸ್‌ಗಳನ್ನು ಆರಂಭಿಸಲಾಗಿದೆ. ನಮ್ಮ ತಂದೆಯ ಹಾದಿಯಲ್ಲೇ ಸಾವಾಜಿಕ ಕಳಕಳಿ ಹೊಂದಿ ಸಂಸ್ಥೆಯನ್ನು ಅಭಿವದ್ಧಿಯತ್ತ ಕೊಂಡೊಯುತ್ತೇನೆ. ಪಕ್ಷಾತೀತವಾಗಿ ಬಡವರ ಸೇವೆಗಾಗಿ ಶ್ರಮಿಸುತ್ತೇನೆ ಎಂದು ನುಡಿದರು.
ಶಾಸಕ ಪ್ರದೀಪ್ ಈಶ್ವರ್ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಶಾಸಕರಾದ ರವಿಕುವಾರ್ ಗಣಿಗ, ಪ್ರದೀಶ್ ಈಶ್ವರ್, ಚಿತ್ರನಟಿ ರಾಗಿಣಿ ದ್ವಿವೇದಿ, ಕನ್ನಡ ಅಭಿವದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರನ್ನು ಅಭಿನಂದಿಸಲಾಯಿತು.
ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಬಿಇಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಶಯ್ ಜಿ.ಮಧು, ಕೆ.ಬಿ.ಮಹದೇವಪ್ಪ, ಎಸ್.ಬಸವೇಗೌಡ, ಎಸ್.ಜಯರಾಮು, ಮುದ್ದಯ್ಯ, ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ, ಎಸ್.ನಾಗರಾಜು, ಎಸ್.ರೇವಣ್ಣ. ಹಾಜರಿದ್ದರು.
ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಭಾರತೀನಗರ ಮುಖ್ಯರಸ್ತೆಯಲ್ಲಿ ಜಾನಪದ ಕಲಾ ಮೆರವಣಿಗೆ ನಡೆಯಿತು.
ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳಿವೆ. ತಮ್ಮ ಆಸಕ್ತಿಗೆ ಅನುಸಾರವಾಗಿ ಶಿಕ್ಷಣ ಪಡೆಯುವಂತಾಗಬೇಕು. ಕಾಲೇಜು ಜೀವನ ಉತ್ತಮವಾಗಿದ್ದು, ಪ್ರಯೋಜನ ಪಡೆದುಕೊಳ್ಳಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಯಾರು ಯಾವ ವಿಷಯವನ್ನಾದರೂ ಓದುವ ಅವಕಾಶವಿದೆ. ಸಂಕುಚಿತ ಮನೋಭಾವ ಬಿಟ್ಟು ಸಾಧನೆಯತ್ತ ನಡೆಯಬೇಕು.
ರಾಗಿಣಿ ದ್ವಿವೇದಿ, ಚಲನಚಿತ್ರ ನಟಿ