ಮದ್ದೂರು: ಭಾರತೀಯ ಕ್ರಿಪ್ಕೊ ಸಂಸ್ಥೆಗೆ ಹಾಸನ ವಿಭಾಗದಿಂದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾದ ಜಿ.ಬಿ.ಕಿಟ್ಟಿ ಅವರನ್ನು ಮಂಗಳವಾರ ಪಟ್ಟಣದ ಮದ್ದೂರು ಕ್ರೀಡಾ ಬಳಗದಲ್ಲಿ ಅಭಿನಂದಿಸಲಾಯಿತು.
ಗ್ರಾಪಂ ಮಾಜಿ ಅಧ್ಯಕ್ಷ ಆಬಲವಾಡಿ ಸುರೇಶ್ ಮಾತನಾಡಿ, ಜಿ.ಬಿ.ಕಿಟ್ಟಿ ಅವರು ಬೆಂಗಳೂರಿನಲ್ಲಿರುವ ಭಾರತೀಯ ಕ್ರಿಪ್ಕೊ ಸಂಸ್ಥೆಗೆ ನಿರ್ದೇಶಕರಾಗಿ ಆಯ್ಕೆಯಾಗಿರುವುದು ಸಂತೋಷ ತಂದಿದೆ. ಸಂಸ್ಥೆಯಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಲಿ ಎಂದು ಹಾರೈಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಆಬಲವಾಡಿ ಸುರೇಶ್, ಪುರಸಭಾ ಮಾಜಿ ಅಧ್ಯಕ್ಷ ಎಂ.ಪಿ.ಅಮರ್‌ಬಾಬು, ಮನ್‌ಮುಲ್ ಮಾಜಿ ನಿರ್ದೇಶಕ ಬಸವೇಗೌಡ್ರು, ಮುಖಂಡರಾದ ಗರಕಹಳ್ಳಿ ಶಿವಣ್ಣ, ಹುಸ್ಕೂರು ನಾಗಣ್ಣ, ಮಹೇಶ್, ಬಸವಣ್ಣ, ಬಸವೇಗೌಡ ಇದ್ದರು.