ಅರಸೀಕೆರೆ: ತಾಲೂಕಿನ ಜಾವಗಲ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಮಮತಾ ಶ್ರೀನಿವಾಸ್ ಆಯ್ಕೆಯಾದರು.
23 ಸದಸ್ಯ ಬಲದ ಗ್ರಾ.ಪಂ.ನಲ್ಲಿ ಯಶೋದಮ್ಮ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಮಮತಾ ಶ್ರೀನಿವಾಸ್ ಹಾಗೂ ರೇಷ್ಮಾಬಾನು ಉಮೇದುವಾರಿಕೆ ಸಲ್ಲಿಸಿದ್ದರು. ನಂತರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಮಮತಾ ಶ್ರೀನಿವಾಸ್ 14 ಮತ ಗಳಿಸಿ ಗೆಲುವಿನ ನಗೆ ಬೀರಿದರೆ, ರೇಷ್ಮಾಬಾನು 9 ಮತ ಪಡೆದು ಸೋಲು ಅನುಭವಿಸಿದರು.
ಚುನಾವಣಾಧಿಕಾರಿಯಾಗಿ ತಾಪಂ ಇಒ ನಾಗರಾಜ್ ಕಾರ್ಯ ನಿರ್ವಹಿಸಿದರು. ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಹೊರಗೆ ನೆರದಿದ್ದ ಬೆಂಬಲಿಗರು ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಪಿಡಿಒ ರವಿ, ಕಾರ್ಯದರ್ಶಿ ನಂದಿನಿ, ಗ್ರಾಪಂ ಸದಸ್ಯರಾದ ಲಕ್ಷ್ಮೀ ರವಿಶಂಕರ್,ಶ್ರೀಕಂಠಿ, ಶಿವಣ್ಣ, ದೊರೆಸ್ವಾಮಿ, ಫ್ರಭಾಕರ್, ಅಶೋಕ್, ಪರಮೇಶ್ ಇತರರು ಇದ್ದರು.