ಬಾಗಲಕೋಟೆ: ಲೋಕಸಭಾ ಚುನಾವಣೆ-೨೦೨೪ರ ನೀತಿ ಸಂಹಿತೆ ಉಲ್ಲಂಘನೆಯಡಿ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯ ಜಾಲಿಹಾಳ ಕ್ರಾಸ್ ಚೆಕ್‌ಪೋಸ್ಟನಲ್ಲಿ ಅನುಮಾನಾಸ್ಪದ ಹಾಗೂ ದಾಖಲೆ ಇಲ್ಲದ ಪ್ರತ್ಯೇಕ ೬ ಪ್ರಕರಣಗಳಡಿ ಒಟ್ಟು ೫.೫೫ ಲಕ್ಷ ರೂ.ಗಳ ಹಣವನ್ನು ಜಪ್ತ ಮಾಡಿ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.
ಬುಧವಾರ ಜಾಲಿಹಾಳ ಕ್ರಾಸ್ ಚೆಕ್‌ಪೋಸ್ಟನಲ್ಲಿ ಎಚ್.ಬಿ.ಪೂಜಾರ ನೇತೃತ್ವದ ಸ್ಟಾö್ಯಟಿಕ್ ಸರ್ವೆಲೆನ್ಸ್ ತಂಡ ಗದಗ ಜಿಲ್ಲೆಯ ಲಕ್ಕುಂಡಿಯಿAದ ಆಗಮಿಸಿದ ಗೂಡ್ಸ ವಾಹನದಲ್ಲಿ ೧.೬೬ ಲಕ್ಷ ರೂ, ಚಿಕ್ಕೋಡಿ ಜಿಲ್ಲೆಯ ಪಚ್ಚಾಪೂರದಿಂದ ಆಗಮಿಸಿದ ಗೂಡ್ಸ್ ವಾಹನದಲ್ಲಿ ೧.೨೦ ಲಕ್ಷ ರೂ, ಕೆರೂರಿನಿಂದ ಬರುತ್ತಿರುವ ಎರಡು ಗೂಡ್ಸ್ ವಾಹಗಳಲ್ಲಿ ಕ್ರಮವಾಗಿ ೭೭ ಸಾವಿರ ರೂ, ೬೯ ಸಾವಿರ ರೂ., ಲಕ್ಷೇಶ್ವರದಿಂದ ಬಂದ ವಾಹನದಲ್ಲಿ ೫೪ ಸಾವಿರ ರೂ. ಹಾಗೂ ರೋಣದಿಂದ ಆಗಮಿಸಿದ ಗೂಡ್ಸ ವಾಹನದಲ್ಲಿ ೬೯ ಸಾವಿರ ರೂ.ಗಳ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.