ಡಿ.ಬಿ.ಪಾಟೀಲ ಅವರ ಹೆಸರಲ್ಲಿ ಹಣಕ್ಕೆ ಬೇಡಿಕೆ ಇಟ್ಟು ವಂಚಕರು ಚಾಟ್ ಮಾಡಿರುವುದು. 
ಜಿಲ್ಲೆ

ಜಾಲತಾಣದಲ್ಲಿ ಪೋಸ್ಟ್ ಹಾಕುವಾಗ ಎಚ್ಚರ

ಬೆಳಗಾವಿ: ಫೇಸ್‌ಬುಕ್, ಟ್ವಿಟ್ಟರ್‌ಹಾಗೂ ಟೆಲಿಗ್ರಾಮ್‌ನಂತಹ ಎಲ್ಲ ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವಾಗ ಎಚ್ಚರಿಕೆಯಿಂದಿರಿ ಎಂದು ಪೊಲೀಸ್ ಇಲಾಖೆ ಶನಿವಾರ ಎಚ್ಚರಿಕೆ ನೀಡಿದೆ. ಬೆಳಗಾವಿ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾಬಿಟ್ಟಿ ಪೋಸ್ಟ್ ಮಾಡುವ ಮುನ್ನ ಹುಷಾರಾಗಿರಿ. ಮನಬಂದಂತೆ ಪೋಸ್ಟ್ ಮಾಡಿದರೆ, ಬಂದಿದ್ದನ್ನೆಲ್ಲ ಫಾರ್ವರ್ಡ್ ಮಾಡಿದರೆ ನಗರದಲ್ಲಿ ಸಂಭವಿಸುವ ಅಹಿತಕರ ಘಟನೆಗಳಿಗೆ ಕಾರಣವಾಗಿ ಕಠಿಣ ಶಿಕ್ಷೆಗೆ ಅನುಭವಿಸಬೇಕಾದೀತು ಎಂದು ಖಡಕ್ ಎಚ್ಚರಿಸಲಾಗಿದೆ.

ಎಫ್‌ಬಿ ಖಾತೆ ಹ್ಯಾಕ್ ಮಾಡಿ ವಂಚನೆ: ಬೆಳಗಾವಿಯ ಫೋಟೋಗ್ರಾಫರ್ ಡಿ.ಬಿ.ಪಾಟೀಲ ಅವರ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರದಿರುವ ವಂಚಕರು ಸ್ನೇಹಿತರಿಂದ ಸಾವಿರಾರು ರೂ.ಸುಲಿಗೆ ಮಾಡಿದ್ದಾರೆ. ನಗರದ ಸಿಇಎನ್ ಪೊಲೀಸ್ ಠಾಣೆಗೆ ಪಾಟೀಲ ದೂರು ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮದೇ ಹೆಸರಿನಲ್ಲಿ ಖಾತೆ ತೆರದು, ವಾಟ್ಸ್‌ಆ್ಯಪ್ ಹ್ಯಾಕ್ ಮಾಡಿ ಪರಿಚಯಸ್ಥರ ಬಳಿ ಹಣ ಪಡೆದಿರುವ ಬಗ್ಗೆ ಸ್ನೇಹಿತರು ಗಮನ್ಕಕೆ ತಂದರು. ಹೀಗಾಗಿ ಆರಂಭದಲ್ಲೇ ಈ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಿ, ಮೋಸ ಹೋಗದಂತೆ ಎಚ್ಚರವಹಿಸಿ, ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ ಎಂದು ಪಾಟೀಲ ತಿಳಿಸಿದ್ದಾರೆ.