ವಿಜಯಪುರ: ಜಿಲ್ಲೆಯಲ್ಲಿ ಪ್ರತಿ ಜಾನುವಾರು ಮಾಲೀಕರು ಕಾಲು-ಬಾಯಿ ಬೇನೆ ರೋಗ ನಿರೋಧಕ ಲಸಿಕೆ ಹಾಕಿಸಿ ತಮ್ಮ ಜಾನುವಾರುಗಳನ್ನು ಆರೋಗ್ಯವಾಗಿ ಇರಿಸಿಕೊಳ್ಳಬೇಕು ಎಂದು ಡಿಸಿ ಪಿ. ಸುನಿಲಕುಮಾರ್ ಹೇಳಿದರು. ವಿಜಯಪುರ ನಗರದಲ್ಲಿರುವ ಡಿಸಿ ಕಚೇರಿ ಆವರಣದಲ್ಲಿ ಕಾಲುಬಾಯಿ ಬೇನೆ ರೋಗ ನಿರೋಧಕ ಲಸಿಕೆ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮೂರು ಲಕ್ಷಕ್ಕೂ ಹೆಚ್ಚಿನ ಜಾನುವಾರುಗಳಿವೆ ಎಂದು ವಾಸ್ತವಿಕ ಸಮೀಕ್ಷೆಯಿಂದ ತಿಳಿದು ಬಂದಿದೆ. ಹಾಗಾಗಿ ಮನೆಬಾಗಿಲಿಗೆ ಹೋಗಿ ಆ ಜಾನುವಾರುಗಳಿಗೆ ಕಿವಿಯೋಲೆ ಹಾಕಿಸಿ ಲಸಿಕೆ ಹಾಕಿಸುವ ಅಭಿಯಾನವನ್ನು ಡಿಸೆಂಬರ್ 13 ರಿಂದ ಆರಂಭಿಸಲಾಗಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಅಭಿಯಾನದಲ್ಲಿ ಒಂದು ತಿಂಗಳ ಕಾಲ ಜಿಲ್ಲೆಯಲ್ಲಿ ಜಾರಿಯಲ್ಲಿರುತ್ತದೆ ಎಂದರು.
ಪಶುಪಾಲನೆ ಇಲಾಖೆಯ ಹಾಗೂ ಇತರೆ ಲಸಿಕೆದಾರರು ಸೇರಿ 327 ಪ್ರತಿ ಗ್ರಾಮ ಹಾಗೂ ನಗರವನ್ನು 100 ಜಾನುವಾರುಗಳಿಗೆ ಒಂದು ಬ್ಲಾಕ್ ಎಂದು ವರ್ಗೀಕರಿಸಿ ಲಸಿಕೆ ಹಾಕಲಿದ್ದಾರೆ. ಲಸಿಕೆದಾರರಿಗೆ ತರಬೇತಿ ನೀಡಿದ್ದು, ಪ್ರತಿ ಜಾನುವಾರಿಗೆ ಒಂದರಂತೆ ಸಿರಿಂಜ್ ಉಪಯೋಗಿಸಿ ಲಸಿಕೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಅದರಂತೆ ಕಾಲುಬಾಯಿ ರೋಗವು ಮಾರಕವಾಗಿದ್ದು ಇದರಿಂದ ಹೆಣ್ಣು ದನಗಳಲ್ಲಿ ಉತ್ಪಾದನೆ ಕುಂಠಿತ ಹಾಗೂ ಗಂಡು ದಿನಗಳಲ್ಲಿ ಶಕ್ತಿ-ಸಾಮಥ್ರ್ಯ ಕುಂಠಿತವಾಗಿ ರೈತಾಪಿ ಜನರಿಗೆ ಹೆಚ್ಚಿನ ಆರ್ಥಿಕ ಹೊಡೆತ ಉಂಟಾಗುತ್ತದೆ. ಕಾರಣ ಪ್ರತಿಯೊಬ್ಬ ಜಾನುವಾರು ಮಾಲಿಕರು ಯಾವುದೇ ರೀತಿಯ ಹಿಂಜರಿಕೆಯಿಲ್ಲದೆ ತಮ್ಮ ಜಾನುವಾರುಗಳಿಗೆ ಲಸಿಕೆ ಹಾಕಿಸಿ, ತಮ್ಮ ಪ್ರತಿಯೊಂದು ಜಾನುವಾರನ್ನು ರೋಗದಿಂದ ರಕ್ಷಿಸಿಕೊಳ್ಳಬೇಕು ಎಂದು ತಿಳಿಸಿದರು.
ಜಾನುವಾರುಗಳು ರೈತನ ಆಸ್ತಿ ಅವುಗಳ ರಕ್ಷಣೆಗೆ ಸರಕಾರವು ಕಾಲಕಾಲಕ್ಕೆ ಇಂತಹ ಲಸಿಕೆ ಹಾಕಿಸುವ ಮೂಲಕ ರೋಗಪೀಡಿತ ಜಾನುವಾರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳುತ್ತದೆ ಲಸಿಕಾ ಕಾರ್ಯಕ್ರಮ ಯಶಸ್ವಿಯಾಗಲು ರೈತರು ರೈತರ ಸಹಕಾರ ಅಗತ್ಯ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಪ್ರಾಣೇಶ್ ಜಾಗಿರದಾರ್ ಅವರು ಜಿಲ್ಲೆಯಲ್ಲಿ ಸಿಬ್ಬಂದಿಯ ಕೊರತೆ ತೀವ್ರವಾಗಿದ್ದು, ಪ್ರತಿದಿನ ಬೆಳಗ್ಗೆ ಲಸಿಕಾ ಕಾರ್ಯಕ್ರಮಕ್ಕೆ ಸಿಬ್ಬಂದಿಯವರು ಚಿಕಿತ್ಸೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ವ್ಯತ್ಯಯ ಉಂಟಾಗಬಹುದು ಕಾರಣ ಎಲ್ಲರೂ ಸಹಕರಿಸಬೇಕೆಂದು ವಿನಂತಿ ಮಾಡಿದ್ರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ ಅರಿಸಿದ್ಧಿ, ಪಶುಪಾಲನಾ ಇಲಾಖೆಯ ಪಾಲಿಕ್ಲಿನಿಕ್ ಉಪನಿರ್ದೇಶಕರಾದ ಡಾ. ಎಸ್ ಪಿ ಕುಂಬಾರ್ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.