ಕಡೂರು ಎಸ್.ಎಂ.ಕೃಷ್ಣಬಡಾವಣೆಯಲ್ಲಿ ಸಂಕ್ರಾಂತಿ ಪ್ರಯುಕ್ತ ಪೊಂಗಲ್ ಆಚರಿಸಲಾಯಿತು. ರಮಣಿ, ಗಣೇಶಪ್ಪ, ಪದ್ಮಾ, ಮಂಜುಳಾ, ಮೀನಾ, ಪೂಜಾ ಇತರರಿದ್ದರು.  
ಜಿಲ್ಲೆ

ಜಾನಪದ ಸಂಸ್ಕೃತಿಗೆ ಆದ್ಯತೆ ನೀಡಿ

ಕಡೂರು: ಜಾನಪದ ಸಂಸ್ಕೃತಿಯನ್ನು ಉಳಿಸಲು ಇಂದಿನ ಪೀಳಿಗೆಯ ಮಹಿಳೆಯರು ಹೆಚ್ಚು ಒತ್ತು ನೀಡಬೇಕು ಎಂದು ರಾಜ್ಯ ವನ್ನಿಯಾರ್ ಮಹಿಳಾ ಮಹಾಸಭಾ ಅಧ್ಯಕ್ಷೆ ರಮಣಿ ತಿಳಿಸಿದರು.

ಎಸ್.ಎಂ.ಕೃಷ್ಣ ಬಡಾವಣೆಯಲ್ಲಿ ರಾಜ್ಯ ವನ್ನಿಯರ್ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್ ಮತ್ತು ಕರುನಾಡು ರಾಜ್ಯ ವನ್ನಿಯರ್ ಮಹಿಳಾ ಮಹಾಸಭಾದಿಂದ ಸಂಕ್ರಾಂತಿ ಪ್ರಯುಕ್ತ ಪೊಂಗಲ್ ಆಚರಣೆಯ ಪ್ರಯುಕ್ತ ರಂಗೋಲಿ ಸ್ಪರ್ಧೆಯ ಮಾತನಾಡಿದರು.

ಪಾಶ್ಚಿಮಾತ್ಯ ಕಲೆಗಳತ್ತ ಆಕರ್ಷಿತರಾಗಿ ದೇಶಿ ಸಂಸ್ಕೃತಿ, ಕಲೆಗಳನ್ನು ಕಡೆಗಣಿಸುವಂತಾಗಿದೆ. ನಮ್ಮ ಪೂರ್ವಿಕರು ಪ್ರತಿ ಹಬ್ಬವನ್ನೂ ವೈಜ್ಞಾನಿಕ ಹಿನ್ನೆಲೆಯಲ್ಲಿ ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ ಗ್ರಾಮೀಣಕ್ಕಿಂತ ನಗರ ಪ್ರದೇಶದಲ್ಲಿ ಕೆಲಸದ ಒತ್ತಡದ ನಡುವೆ ನಮ್ಮ ಕಲೆ, ಆಚಾರ, ವಿಚಾರಗಳಿಗೆ ಗಮನ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಮಹಿಳಾ ಘಟಕದಿಂದ ಮಹಿಳೆಯರಿಗಾಗಿ ರಂಗೋಲಿ ಹಾಗೂ ಕೋಲಾಟದಂಥ ದೇಸಿ ಸಂಸ್ಕೃತಿಯ ಸ್ಪರ್ಧೆಯ ಆಯೋಜನೆ ಮೂಲಕ ಉತ್ತೇಜನ ನೀಡಲಾಗುತ್ತಿದೆ ಎಂದರು.

ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆರಿಗೆ ಬಹುಮಾನಗಳನ್ನು ವಿತರಿಸಲಾಯಿತು. 200ಕ್ಕೂ ಹೆಚ್ಚು ಮಹಿಳೆಯರು ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಟ್ರಸ್ಟ್ ಅಧ್ಯಕ್ಷ ಜಿ.ವಿ.ಗಣೇಶಪ್ಪ, ಬಾಗೂರು ಪದ್ಮಾ, ಮಂಜುಳಾ, ಮೀನಾ, ಪೂಜಾ ಕೃಷ್ಣಮೂರ್ತಿ, ಸರಳಾ ಗಣೇಶ್, ವಿ.ಮುರುಗೇಶ್, ಕೃಷ್ಣಮೂರ್ತಿ, ಚಂದ್ರು, ಬಿ.ಸುಬ್ರಮಣಿ, ಷಣ್ಮುಗಪ್ಪ, ಪಿ.ಉಮಾಪತಿ, ಕೆ.ಜಯಣ್ಣ, ಮುರುಗಣ್ಣ, ಪಿ.ರಂಗನಸ್ವಾಮಿ ಇತರರಿದ್ದರು.