ಜಿಲ್ಲೆ

‘ಜಾನಪದ ಸಂಭ್ರಮ’ದಲ್ಲಿ ಕಲೆಗಳ ಅನಾವರಣ

ಬೀದರ್: ತಾಲ್ಲೂಕಿನ ಹೊಕ್ರಾಣ (ಬಿ) ಗ್ರಾಮದ ಭೀಮಾಶಂಕರ ಮಠದಲ್ಲಿ ಇರುವ ಕಲ್ಯಾಣ ಮಂಟಪದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಬುದ್ಧ, ಬಸವ, ಅಂಬೇಡ್ಕರ್, ಸಾಂಸ್ಕøತಿಕ, ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ ವತಿಯಿಂದ ನಡೆದ ಜಾನಪದ ಸಂಭ್ರಮ ಕಾರ್ಯಕ್ರಮದಲ್ಲಿ ಜಾನಪದ ಕಲೆಗಳು ಅನಾವರಣಗೊಂಡವು.
ಕಲಾವಿದರು ಡೊಳ್ಳು ಕುಣಿತ, ಕೋಲಾಟ, ಲಂಬಾಣಿ ನೃತ್ಯ, ಜನಪದ ಗೀತೆ, ಸೋಬಾನ ಪದ, ಭಾವಗೀತೆ, ಕ್ರಾಂತಿ ಗೀತೆ, ಮೊಹರಂ ಪದ, ಕುಟ್ಟುವ ಪದ, ದೇಶ ಭಕ್ತಿ ಗೀತೆಗಳ ಮೂಲಕ ಸಭಿಕರ ಮನಸೂರೆಗೊಂಡರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಧನರಾಜ ಮೇತ್ರೆ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಸುಧಾಕರ ರಾಜಗೀರಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ದಿಲೀಪಕುಮಾರ ಭೋಸ್ಲೆ, ಶ್ರೀನಿವಾಸ ಪಾಟೀಲ ಇದ್ದರು. ನಾಗೇಶ ಜಾನಕನೋರ ನಿರೂಪಿಸಿದರು. ಜಾವೀದ್‍ಮಿಯ ಸರ್ದಾರ್ ಅಲಿ ವಂದಿಸಿದರು.