ಜಿಲ್ಲೆ

ಜಾನಪದ ವಿವಿ ಘಟಿಕೋತ್ಸವಕ್ಕೆ ಅದ್ಧೂರಿ ಚಾಲನೆ

ಹಾವೇರಿ: ಶಿಗ್ಗಾಂವಿ ತಾಲೂಕಿನ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ 6 ಮತ್ತು 7ನೇ ಘಟಿಕೋತ್ಸವದ ಜಾನಪದ ಮೆರವಣಿಗೆಗೆ ಕುಲಪತಿ ಪ್ರೊ.ಟಿ.ಎ.ಭಾಸ್ಕರ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಗೊಂಬೆ ಕುಣಿತ, ಸಿದ್ದಿ ನೃತ್ಯ, ಮತ್ತಿತರ ಜಾನಪದ ನೃತ್ಯ ತಂಡಗಳು ಗಮನ ಸೆಳೆದವು.

ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅದ್ಯಕ್ಷ ಡಾ.ಎಂ.ಮೋಹನ ಆಳ್ವ, ಕುಲಸಚಿವರಾದ ಪ್ರಿ.ಸಿ.ಟಿ.ಗುರುಪ್ರಸಾದ, ಪ್ರೊ.ಎನ್.ಎಂ.ಸಾಲಿ, ಗೌರವ ಡಾಕ್ಟರೇಟ್ ಗೌರವಕ್ಕೆ ಭಾಜನರಾದ ಆರು ಕಲಾವಿದರು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಸದಸ್ಯರು, ವಿದ್ಯಾರ್ಥಿಗಳು, ಇತರರು ಪಾಲ್ಗೊಂಡಿದ್ದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ವಿಡಿಯೋ ಕಾನ್ಫರೆನ್ಸ್ ಮೂಲಕ ಘಟಿಕೋತ್ಸವಕ್ಕೆ ಚಾಲನೆ ನೀಡಿದರು. ಕುಲಪತಿ ಪ್ರೊ.ಟಿ.ಎ.ಭಾಸ್ಕರ ಅವರು ಆರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಿದರು.