ಶೃಂಗೇರಿಯಲ್ಲಿ ಕರ್ನಾಟಕ ಜಾನಪದ ಪರಿಷತ್ ಮಹಿಳಾ ಘಟಕವನ್ನು ನವೋದಯ ಶೈಕ್ಷಣಿಕ ಸಂಸ್ಥೆ ಅಧ್ಯಕ್ಷ ಎಚ್.ಎಲ್.ತ್ಯಾಗರಾಜ್ ಉದ್ಘಾಟಿಸಿದರು. ಐ.ಬಿ.ಸುರೇಶ್, ಪುಷ್ಪಾ, ಸುಮಂಗಲಿ ಆನಂದಸ್ವಾಮಿ ಇತರರಿದ್ದರು. 
ಜಿಲ್ಲೆ

ಜಾನಪದ ಕಲೆ ಬೆಳೆಸಿ

ಎಸ್.ಎನ್.ರವೀಂದ್ರ

ಶೃಂಗೇರಿ: ಜಾನಪದ ಸಾಹಿತ್ಯ, ಸಂಗೀತ ಕಲೆ ಸಂಸ್ಕೃತಿ ಮುಂದಿನ ಪೀಳಿಗೆಗೆ ವರ್ಗಾವಣೆಯಾಗಬೇಕಾದರೆ ಇಂದಿನ ಯುವಜನರ ಪಾತ್ರ ಮುಖ್ಯವಾಗಿದೆ ಎಂದು ನವೋದಯ ಶೈಕ್ಷಣಿಕ ಸಂಸ್ಥೆ ಅಧ್ಯಕ್ಷ ಎಚ್.ಎಲ್.ತ್ಯಾಗರಾಜ್ ಹೇಳಿದರು.

ಕರ್ನಾಟಕ ಜಾನಪದ ಪರಿಷತ್ ಶನಿವಾರ ಏರ್ಪಡಿಸಿದ್ದ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿ, ಜಾನಪದ ಸಾಹಿತ್ಯ, ಸಂಗೀತಕ್ಕೆ ಮಾನವನಲ್ಲಿ ಸುಸಂಸ್ಕೃತ ವ್ಯಕ್ತಿತ್ವ ರೂಪಿಸುವ ಶಕ್ತಿ ಇದೆ. ಯುವಜನರು ಜಾನಪದ ಹಾಡುಗಳನ್ನು ಕಲಿತು ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು ಎಂದರು.

ಕಜಾಪ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಸ್ವಾಸ್ಥ್ಯಸಮಾಜದ ನಿರ್ಮಾಣದ ಶಕ್ತಿ ಜಾನಪದಕ್ಕಿದೆ. ಶಿಷ್ಟ, ದಾಸ, ವಚನ, ದಲಿತ ಹಾಗೂ ಬಂಡಾಯ ಸಾಹಿತ್ಯ ಎಲ್ಲ ಸಾಹಿತ್ಯದ ಮೂಲ ಬೇರು ಜಾನಪದವೇ ಆಗಿದೆ. ಭಾರತೀಯ ಸಂಸ್ಕೃತಿ, ಕಲೆ, ಆಹಾರ ಪದ್ಧತಿ, ಸಾಹಿತ್ಯ, ಸಂಗೀತ, ಆಚಾರ, ವಿಚಾರ, ಉಡುಗೆ-ತೊಡುಗೆ, ಕೃಷಿ ಜೀವನ ಶೈಲಿ, ಸಾಮಾಜಿಕ ಮತ್ತು ಆರ್ಥಿಕ, ವೈಜ್ಞಾನಿಕ ನೆಲಗಟ್ಟಿನ ಮೂಲ ಬೇರು ಜಾನಪದವೇ ಆಗಿದೆ ಎಂದರು.

ಜಾನಪದ ಕಲಾವಿದರದ ಪದ್ಮಾವತಮ್ಮ, ಪುಷ್ಪಾ ಪ್ರಕಾಶ್, ರೋಟರಿ ಮಾಜಿ ಕಾರ್ಯದರ್ಶಿ ಸುರೇಶ್, ಸಾಹಿತಿ ಸುನೀತಾ ನವೀನಗೌಡ, ಶೂನ್ಯ ರಮೇಶ್, ವಿಜಯವಾಣಿ ವಿತರಕ ಆನಂದಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ಮಹಿಳಾ ಘಟಕದ ಅಧ್ಯಕ್ಷೆಯಾಗಿ ರೇಣುಕಾರಾಮಪ್ಪ ನೇಮಕವಾದರು. ತಾಲೂಕು ಕಜಾಪ ಅಧ್ಯಕ್ಷ ಅಂಗುರ್ಡಿ ದಿನೇಶ್, ಸಾಹಿತಿ ಬಿ.ಶಿವಶಂಕರ್, ಪಪಂ ಅಧ್ಯಕ್ಷ ಎಚ್.ಎಸ್.ವೇಣುಗೋಪಾಲ್, ಉದ್ಯಮಿ ಕೆ.ಎಸ್.ರಮೇಶ್, ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ, ನಿವೃತ್ತ ಶಿಕ್ಷಕ ಯೋಗಪ್ಪ ಇದ್ದರು.