ರಾಮದುರ್ಗದ ವಿಠ್ಠಲ ಹರಿಮಂದಿರದಲ್ಲಿ ಶ್ರೀ ಬನ್ನಿಮಹಾಂಕಾಳಿ ಜಾನಪದ ಕಲಾ ಸಂಘ ಹಮ್ಮಿಕೊಂಡ ಜಾನಪದ ಸಂಪ್ರದಾಯ ಪದಗಳ ಸಂಭ್ರಮ ಕಾರ್ಯಕ್ರಮವನ್ನು ಮುಖಂಡ ಮಲ್ಲಣ್ಣ ಯಾದವಾಡ ಉದ್ಘಾಟಿಸಿದರು. ಎಸ್.ವಿ. ಕಲ್ಯಾಣಶೆಟ್ಟಿ, ಪಾರ್ವತೆವ್ವ ರಾವಳ, ಶಂಕರ ಬೆನ್ನೂರ, ನಾರಾಯಣಪ್ಪ ಬೆನ್ನೂರ, ಶ್ರೀನಿವಾಸ ಕುರುಡಗಿ, ರತ್ನಾ ಯಾದವಾಡ ಇತರರಿದ್ದರು. 
ಜಿಲ್ಲೆ

ಜಾನಪದ ಕಲೆ ಉಳಿವಿಗಾಗಿ ಸರ್ವರೂ ಶ್ರಮಿಸಿ

ರಾಮದುರ್ಗ: ಜಾನಪದ ಕಲೆಯಲ್ಲಿ ಗ್ರಾಮೀಣ ಪ್ರದೇಶದ ಸಂಸ್ಕೃತಿ, ಕಾಯಕ ಅಡಗಿದೆ. ಜಾನಪದ ಕಲಾವಿದರಲ್ಲಿ ಬಡವ ಬಲ್ಲಿದ, ವರ್ಗಗಳಿಲ್ಲ. ನಾಗರಿಕ ಸಮಾಜ ಜಾನಪದ ಕಲೆ ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ತೆಗೆದುಕೊಳ್ಳಬೇಕು. ಜಾನಪದ ಕಲೆಯ ಉಳಿವಿಗೆ ಸರ್ವರೂ ಶ್ರಮಿಸಬೇಕು ಎಂದು ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು.

ಪಟ್ಟಣದ ನಾರಾಯಣ ಪೇಟೆಯ ವಿಠ್ಠಲ ಹರಿಮಂದಿರದಲ್ಲಿ ಶ್ರೀ ಬನ್ನಿಮಹಾಂಕಾಳಿ ಜಾನಪದ ಕಲಾ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡ ಜಾನಪದ ಸಂಪ್ರದಾಯ ಪದಗಳ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗೆ ಜಾನಪದದ ಸೊಗಡನ್ನು ಕಲಿಸುವ ಜತೆಗೆ ಪ್ರಾಚೀನ ಜಾನಪದ ಕಲೆ ಉಳಿಸಿ ಬೆಳೆಸಬೇಕೆಂದರು.

ಎಸ್.ವಿ. ಕಲ್ಯಾಣಶೆಟ್ಟಿ ಉಪನ್ಯಾಸ ನೀಡಿ, ಜಾನಪದ ಕಲೆಯು ಉತ್ತರ ಕರ್ನಾಟಕದಲ್ಲಿ ಹೆಚ್ಚು ಪ್ರಸಿದ್ಧಿ ಇದ್ದರೂ ರಾಮದುರ್ಗದ ನೇಕಾರ ಪೇಟೆಯ ಪ್ರತಿ ಮನೆ ಮನೆಯಲ್ಲಿ ವ್ಯಾಪಿಸಿದೆ. ಜಾನಪದವನ್ನು ಇತ್ತೀಚಿನ ದಿಗಳಲ್ಲಿ ಮರೆಯುತ್ತಿರುವುದರಿಂದ ಹಬ್ಬ ಹರಿದಿನಗಳನ್ನು ಮರೆಯಲಾಗುತ್ತಿದೆ ಎಂದು ವಿಷಾಸಿದರು.

ಬನ್ನಿಮಹಾಂಕಾಳಿ ಜಾನಪದ ಕಲಾ ಸಂಘದ ಅಧ್ಯಕ್ಷೆ ಪಾರ್ವತೆವ್ವ ರಾವಳ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ, ಬನಶಂಕರಿ ದೇವಾಂಗ ಸಮಾಜದ ಅಧ್ಯಕ್ಷ ನಾರಾಯಣಪ್ಪ ಬೆನ್ನೂರ, ನ್ಯಾಯವಾದಿ ಶ್ರೀನಿವಾಸ ಕುರುಡಗಿ, ಪ್ರಕಾಶ ಸೂಳಿಭಾವಿ, ಮಧು ಕೌಜಲಗಿ, ರತ್ನಾ ಯಾದವಾಡ, ಎಸ್.ಎಂ. ಕಲ್ಲೂರ, ಮೀನಾಕ್ಷಿ ದೇವಾಂಗಮಠ, ಶ್ರೀಗಂಧಮಾಲಾ ಯಲಿಗೋಡ, ರುಕ್ಮಿಣಿ ಶ್ಯಾಗಾಂವಿ ಇತರರಿದ್ದರು.

ಸುನ್ನಾಳ ವರದಿ: ಸಂಗೀತಕ್ಕೆ ಕೊಡುಗೆ ನೀಡಿದ ಮಹಾನ್ ಜ್ಞಾನಿಗಳ ಆದರ್ಶವನ್ನು ಸಂಗೀತದ ಮೂಲಕ ತಿಳಿಯಪಡಿಸುತ್ತಿರುವ ಸಂಗೀತ ಶಿಕ್ಷಕರ ಕಾರ್ಯ ಶ್ಲಾಘನೀಯ ಎಂದು ಧನಲಕ್ಷ್ಮೀ ಸಹಕಾರಿ ಸಕ್ಕರೆ ಅಧ್ಯಕ್ಷ ಮಲ್ಲಣ್ಣ ಯಾದವಾಡ ಹೇಳಿದರು. ಪಟ್ಟಣದ ಮಾಹಾಂತೇಶ ನಗರದಲ್ಲಿನ ಶಿವಲಿಂಗ ಹಾಗೂ ನಾಗದೇವತೆ ದೇವಸ್ಥಾನದಲ್ಲಿ ಸುನ್ನಾಳದ ಪಂಡಿತ್ ಪುಟ್ಟರಾಜ ಸಂಗೀತ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸಕ್ರತಿ ಇಲಾಖೆ ಆಶ್ರಯದಲ್ಲಿ ನಡೆದ ಶಾಸೀಯ ಸಂಗೀತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಅಧ್ಯಕ್ಷತೆ ವಹಿಸಿದ್ದ ಆರ್.ಎಂ. ಪಾಟೀಲ, ಸುರೇಶ ಗುದಗನವರ, ಡಾ. ಉಮೇಶ ಗೋಲಣ್ಣವರ, ಎಸ್.ಎ. ಗುರುಮಠ ಇದ್ದರು.