ಜಾನಪದ ಕಲಾವಿದರನ್ನು ನೋಡುವ ದೃಷ್ಟಿ ಬದಲಾಗಬೇಕು
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಇಂದು ಜನರು ಜಾನಪದ ಕಲಾವಿರರನ್ನು ಕೀಳಾಗಿ ನೋಡುತ್ತಿದ್ದು,ಇದರಿಂದ ಜಾನಪದ ಕಲೆ ಕಡಿಮೆಯಾಗುತ್ತಿದೆ.ಜನರು ಜಾನಪದ ಕಲಾವಿದರನ್ನು ನೋಡುವ ದೃಷ್ಟಿ ಬದಲಾಗಬೇಕು ಎಂದು ಜಾನಪದ ಸಾಹಿತಿ ಡಾ.ಸಿ.ಕೆ.ನಾವಲಗಿ ಅಭಿಪ್ರಾಯ ಪಟ್ಟರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಮಂಗಳವಾರ ಜರುಗಿದ 98ನೇ ನಾಡ ಹಬ್ಬ ಉತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದರ ಹಾಡು ಪಾಡು ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.
ಜಾನಪದ ಕಲಾವಿರರನ್ನು ಗೌರವದಿಂದ ಕಾಣಬೇಕು.ಅವರಿಗೆ ಸ್ಥಾನಮಾನ ನೀಡುವುದರಿಂದ ಅಳಿವಿನಂಚಿನಲ್ಲಿರುವ ಜಾನಪದ ಕಲೆ ಉಳಿಯಲು ಬೆಳೆಯಲು ಸಾಧ್ಯ ಎಂದರು.
ಇತ್ತೀಚಿನ ಜಾನಪದ ಕಲಾವಿದರು ಕೆವಲ ಹಣದ ಬೆನ್ನು ಬಿದ್ದು,ಪಾರಂಪರಿಕವಾಗಿ ಬಂದಿರುವ ಕಲೆಗಳ ಕಡೆ ಗಮನ ನೀಡುತ್ತಿಲ್ಲ ಎಂದು ಬೇಸರ ವ್ಯಕ್ತ ಪಡೆಸಿದರು.
ಸಾನಿದ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಮಾತನಾಡಿ ಜಾನಪದ ಕಲಾವಿದರಿಗೆ ಮಠಗಳು,ಸಂಘ ಸಂಸ್ಥೆಗಳು ಮಹತ್ವ ನೀಡಬೇಕು,ವಿದೇಶಿಯರು ನೀಡುವಷ್ಟು ಗೌರವವನ್ನು ದೇಶಿಯರು ನೀಡುವುದಿಲ್ಲ.ಸರ್ಕಾರ ಜಾನಪದ ಕಲಾವಿದರಿಗೆ ಪ್ರಶಸ್ತಿ ಹಾಗು ಸನ್ಮಾನ ನೀಡಿವುದರಿಂದ ಕಲಾವಿದರ ಬೆಲೆ ಜನ ಸಾಮಾನ್ಯರಿಗೂ ಅರ್ಥವಾಗುತ್ತದೆ ಎಂದರು.
ಜಾನಪದ ವಿದ್ವಾಂಸಕ ಡಾ.ಬಸವರಾಜ ಜಗಜಂಪಿ ಅಧ್ಯಕ್ಷತೆ ವಹಿಸಿದ್ದರು.
ಗುರುಗೌಡ ಪಾಟೀಲ, ಡಾ.ಉಮೇಶ ಪಾಟೀಲ, ರಾಜು ಪದ್ಮನ್ನವರ,ಜಯಶ್ರೀ ಮಾಳಗಿ,ಸಿ.ಎಂ ನರಸಣ್ಣವರ ಇದ್ದರು.ಅನ್ನಪೂರ್ಣ ಹಿರೇಮಠ ನಿರೂಪಿಸಿದರು.ಸುಮಾ ಕಿತ್ತೂರ ವಂದಿಸಿದರು.