ಚಾಮರಾಜನಗರ: ನಗರದ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಹಿರಿಯ ಆಡಳಿತ ಅಧಿಕಾರಿ ದಿವಂಗತ ರಾಜಯೋಗಿನಿ ಜಾನಕಿಜೀ ದಾದಿ ಅವರ ಐದನೇ ವರ್ಷದ ಪುಣ್ಯ ಸ್ಮೃತಿ ದಿನಾಚರಣೆಯನ್ನು ಗುರುವಾರ ಆಚರಿಸಲಾಯಿತು.
ದಾದಿಜೀಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಮಾತನಾಡಿ, ದಾದೀಜಿ ತ್ಯಾಗ ತಪಸ್ಸು ಸೇವೆಯ ಮೂಲಕ ಇಡೀ ವಿಶ್ವದ 180 ರಾಷ್ಟ್ರಗಳಲ್ಲಿ ಭಾರತದ ಆಧ್ಯಾತ್ಮಿಕ ಜ್ಞಾನವನ್ನು ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದರು ಎಂದರು. ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶವ ಲಿಂಗಾಯತ ಮಹಾಸಭಾದ ಜಿಲ್ಲಾ ಮಹಿಳಾ ವಿಭಾಗದ ಉಪಾಧ್ಯಕ್ಷೆ ನಾಗುರಮೇಶ್ ಹಾಗೂ ಯುಎಸ್‌ಎ ನಿವಾಸಿ ಮಸಗಾಪುರದ ಶಿವಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಬಿ.ಕೆ.ಆರಾಧ್ಯ, ಗೀತಾ, ಪುಷ್ಪಾ, ಪುಟ್ಟಶೇಖರಮೂರ್ತಿ, ತ್ರಿವೇಣಿ, ಪ್ರಮೀಳಾ, ಶ್ರೀನಿವಾಸ್, ನಾರಾಯಣಶೆಟ್ಟಿ, ಸುಬ್ರಹ್ಮಣ್ಯ, ಪಿ.ಸಿದ್ದರಾಜು, ಸುವರ್ಣ, ಶಿವಕುಮಾರ್, ನಾಗರಾಜ್, ವಿದ್ಯಾ, ಸಿದ್ದಯ್ಯ, ಶೋಭಾ, ನಿರ್ಮಲಾ, ಜಯಲಕ್ಷ್ಮಿ, ಜಗದಂಬ, ನಿರಂಜನ್, ಅರ್ಜುನ್, ಸುಂದರ್, ನಾಗರತ್ನಮ್ಮಹಾಜರಿದ್ದರು.