ಕಲಬುರಗಿ: ಶರಣಬಸವೇಶ್ವರರ ಜಾತ್ರೆಯ ರಥೋತ್ಸವ ವೇಳೆ ಜನಸಂದಣಿಯಲ್ಲಿ ಐವರಿಂದ 1.82 ಲ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಟನೆ ನಡೆದಿದೆ. ಮಾದೇವಪ್ಪ ಸಿದ್ದಣ್ಣ ಅವರ ಕೊರಳಲ್ಲಿದ್ದ 45 ಸಾವಿರ ರೂ. ಮೌಲ್ಯದ ಚಿನ್ನದ ಸರ, ಡಾ.ಉಮೇಶಚಂದ್ರ ಗುರುಗುಂಟಿ ಅವರ 75 ಸೌವಿರ ರೂ. ಮೌಲ್ಯದ ಚೈನ್, ನಾಗಮ್ಮ ಅವರ ತಾಳಿ ಸೇರಿ 20 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಸೌಭಾಗ್ಯ ಅವರ ಕೊರಳಿನ 10 ಗ್ರಾಂ ಚಿನ್ನದ ತಾಳಿ, ವಿಠಲ್ ಬಿರಾದಾರ ಅವರ 22 ಸಾವಿರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.