ಜಿಲ್ಲೆ

ಜಾತ್ರೆಗಳಿಂದ ಸಾಮರಸ್ಯ ನಿರ್ಮಾಣ

ಹುಕ್ಕೇರಿ: ಸಾಮರಸ್ಯ ಸಾಽಸಲು ಜಾತ್ರಾ ಮಹೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಸಹಕಾರಿ ಆಗಿದ್ದು, ಹಿರಿಯರು ಬೆಳೆಸಿಕೊಂಡು ಬಂದ ಪರಂಪರೆ ಮುಂದುವರಿಸೋಣ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ಕತ್ತಿ ಹೇಳಿದರು.

ತಾಲೂಕಿನ ಶಿರಹಟ್ಟಿ ಬಿಕೆ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಉತ್ತಮ ಆಚಾರ ವಿಚಾರಗಳ ಸಂಸ್ಕಾರ ಬೆಳೆಯಲು ಇವು ಸಹಕಾರಿಯಾಗಿವೆ. ಕುಸ್ತಿ, ಸೈಕಲ್ ಮತ್ತು ಓಟದಂತಹ ಸ್ಪರ್ಧೆಗಳಿಂದ ಯುವ ಜನಾಂಗಕ್ಕೆ ಆರೋಗ್ಯ ಪಾಠ ಹೇಳಿಕೊಟ್ಟಂತಾಗುತ್ತದೆ. ಜಾನುವಾರು ಪ್ರದರ್ಶನ ದೇಸಿ ಸಂಸ್ಕೃತಿಗೆ ನಿದರ್ಶನ ಎಂದರು.

ಜಾತ್ರಾ ಮಹೋತ್ಸವ ಸಮಿತಿ ಪವನ ಕತ್ತಿ ಅವರನ್ನು ಸತ್ಕರಿಸಿತು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ ಬ್ಯಾಳಿ, ಅರಿಹಂತ ಸೌಹಾರ್ದ ಸಹಕಾರಿ ನಿರ್ದೇಶಕ ರಾಮಣ್ಣ ಗೋಟುರೆ, ಮುಖಂಡರಾದ ಅಣ್ಣಪ್ಪ ಬ್ಯಾಳಿ, ಆನಂದ ದಪ್ಪಾದೂಳಿ, ಉದಯ ಬ್ಯಾಳಿ, ಶಿವಾನಂದ ಢಂಗ, ಮುರಗಯ್ಯ ಹಿರೇಮಠ, ಸಂಜೀವ ಹತ್ತರವಾಟ, ಸಿದ್ರಾಮ ಖೋತ, ರಾಜು ಹಂಚಿನಾಳ, ಕಲ್ಲಪ್ಪ ನಾಯಿಕ ಇತರರಿದ್ದರು.