ಕಲಬುರಗಿ: ಜಾತ್ರೆಗೆ ಕಾರ್‌ನಲ್ಲಿ ಬಂದು ಬೆಲ್ಟ್ಗೆ ಕೀ ಸಿಲುಕಿಸಿ ಜನಸಂದಣಿಯಲ್ಲಿ ಹೊರಡುವ ಕಾರ್ ಚಾಲಕರನ್ನು ಗುರಿಯಾಗಿಸಿ, ಕೀ ಕಳ್ಳತನ ಮಾಡಿ ಕಾರ್ ಕದ್ದೊಯ್ದ ಅಂತಾರಾಜ್ಯ ಕಳ್ಳರ ತಂಡವನ್ನು ಪತ್ತೆ ಹಚ್ಚಿದ್ದು, ಓರ್ವನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ತಿಳಿಸಿದರು.
ಮಹಾರಾಷ್ಟçದ ಪುಣೆ ನಗರದ ವಾಘೋಲಿಯ ವಿಠಲ್ ಲಸ್ಕರೆಯನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳಾದ ಏಕನಾಥವಾಡಿಯ ಪ್ರಶಾಂತ ಗಾಯಕವಾಡ, ಸಹದೇವ, ಬೀಡ್‌ನ ಸುನೀಲ, ರಾಜುನ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜ.೩೦ರಂದು ನಾಲವಾರದ ಶ್ರೀ ಕೋರಿಸಿz್ದÉÃಶ್ವರ ಜಾತ್ರೆಗೆ ಬಂದಿದ್ದ ಕಲಬುರಗಿ ನಗರದ ಖಾಜಾ ಕಾಲನಿಯ ದತ್ತು ಗುತ್ತೇದಾರ್ ಅವರ ಕಾರು ಕಳ್ಳತನ ಕುರಿತು ವಾಡಿ ಪೊಲೀಸ್ ಠಾಣೆಗೆ ದೂರು ಬಂದಿತ್ತು. ತಕ್ಷಣ ಎಚ್ಚೆತ್ತ ಪೊಲೀಸ್ ಸಿಬ್ಬಂದಿ ಕಾರ್ ಪ್ರಯಾಣಿಸಿದ ಪ್ರತಿಯೊಂದು ಮಾರ್ಗವನ್ನು ಸೂಕ್ಷö್ಮವಾಗಿ ಪರಿಶೀಲಿಸಿ, ಕಳ್ಳತನ ಮೂಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಶಹಾಬಾದ್ ಉಪ ಅಧೀಕ್ಷಕ ಶಂಕರಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಸಿಪಿಐ ಚಂದ್ರಶೇಖರ ತಿಗಡಿ ನೇತೃತ್ವದಲ್ಲಿ ಪಿಎಸ್‌ಐ ತಿರುಮಲ್ಲೇಶ, ಸಿಬ್ಬಂದಿ ರಮಣಯ್ಯ, ರವೀಂದ್ರ, ಆರೀಫ್, ರಮೇಶ, ಬಲರಾಮ ಮತ್ತು ಸಿಡಿಆರ್ ವಿಭಾಗದ ತಂಡವೂ ಆರೋಪಿಗಳನ್ನು ಪತ್ತೆ ಮಾಡಿ, ಕಾರ್ ವಶಕ್ಕೆ ಪಡೆದಿದ್ದು, ಎಲ್ಲರ ಕಾರ್ಯಕ್ಕೆ ಶ್ಲಾಘಿಸಿದರು. ಕಾರ್‌ನ್ನು ಮಾಲಿಕರಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಸ್ತಾಂತರಿಸಿದರು. ಎಎಸ್‌ಪಿ ಮಹೇಶ ಮೇಘಣ್ಣನವರ್ ಇದ್ದರು.
ಜಾತ್ರೆಗಳೇ ಟಾರ್ಗೆಟ್: ಮಹಾರಾಷ್ಟçದ ಕಳ್ಳರ ತಂಡ ಇದಾಗಿದ್ದು, ಕರ್ನಾಟಕ, ಮಹಾರಾಷ್ಟç, ತೆಲಂಗಾಣ ಸೇರಿ ವಿವಿಧೆಡೆ ನಡೆಯುವ ಬೃಹತ್ ಜಾತ್ರೆಗಳಿಗೆ ಬರುವ ಕಾರ್‌ಗಳನ್ನು ಕದಿಯುವವರು ಇವರಾಗಿದ್ದು, ಜಾತ್ರೆಗಳ ಪಟ್ಟಿ ಮಾಡಿಕೊಂಡು, ಮಧ್ಯಾಹ್ನ ೩ಗಂಟೆ ಸುಮಾರಿಗೆ ಜಾತ್ರೆಯ ಪಾರ್ಕಿಂಗ್ ಸ್ಥಳಕ್ಕೆ ಬರುತ್ತಾರೆ. ಕಾರ್ ಪಾರ್ಕ್ ಮಾಡಿ, ಕೀಯನ್ನು ಬೆಲ್ಟ್ ಲೂಪ್‌ಗೆ ಹಾಕಿಕೊಂಡವರನ್ನು ಗುರುತಿಸಿ, ಅವರನ್ನು ಹಿಂಬಾಲಿಸಿ, ಜನಸಂದಣಿಯಲ್ಲಿ ಕೀ ಕದ್ದು, ಕಾರ್‌ನ್ನು ಕಳ್ಳತನ ಮಾಡುತ್ತಾರೆ. ಬಂಧಿತ ಆರೋಪಿಯ ತಂಡವರು ಹಿಂದೆ ಬದಾಮಿಯ ಬನಶಂಕರಿ ದೇವಿ ಜಾತ್ರೆಯಲ್ಲಿ ಮತ್ತು ತೆಲಂಗಾಣದ ಎಮ್ಮಿಗನೂರ ವೀರಭದ್ರೇಶ್ವರ ಜಾತ್ರೆಯಲ್ಲಿ ಕಾರ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಎಸ್‌ಪಿ ಅಡ್ಡೂರು ಶ್ರೀನಿವಾಸಲು ತಿಳಿಸಿದರು.
ಒಂಬತ್ತು ದಿನದ ಸತತ ಕಾರ್ಯಾಚರಣೆ: ನಾಲವಾರದಲ್ಲಿ ಶ್ರೀ ಕೋರಿಸಿz್ದÉÃಶ್ವರ ಜಾತ್ರೆಯಲ್ಲಿ ಕಾರ್ ಕಳ್ಳತನ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಕರಣದ ಬೆನ್ನತ್ತಿದ್ದು, ಸುಮಾರು ಒಂಬತ್ತು ದಿನ ಮೂರು ರಾಜ್ಯಗಳಲ್ಲಿ ಬೆನ್ನತ್ತಿ ತನಿಖೆ ನಡೆಸಿದ್ದರಿಂದ ಕಳ್ಳನ ಬಂಧನ ಸಾಧ್ಯವಾಗಿದೆ. ಕಳ್ಳರು ನಾಲವಾರ ಸಮೀಪದ ಯಾದಗಿರಿ ಕ್ರಾಸ್ ಬಳಿ ಕಾರ್‌ನ ನಂಬರ್ ಪ್ಲೇಟ್ ಬದಲಾಯಿಸಿದ್ದು, ಆ ವೇಳೆ ಹಿಂದೆ ಇನ್ನೊಂದು ಸಣ್ಣ ಕಾರ್ ನಿಂತ್ತಿರುವ ಬಗ್ಗೆ ಪೊಲೀಸರಿಗೆ ಸುಳಿವು ದೊರಕಿದೆ. ಕಾರ್ ಕಲಬುರಗಿ, ಆಳಂದ, ಉಮರ್ಗಾ ಮಾರ್ಗವಾಗಿ ಬೀಡ್ ಜಿಲ್ಲೆ, ಮಧ್ಯಪ್ರದೇಶದ ಗಡಿಯಲ್ಲೂ ಸುತ್ತಾಡಿದೆ. ಕಾರ್ ಮಾರ್ಗವನ್ನು ವೈಜ್ಞಾನಿಕವಾಗಿ ಬೆನ್ನತ್ತಿದ್ದ ಪೊಲೀಸರು ಅಹ್ಮದ್ ನಗರ ಜಿಲ್ಲೆಯ ಏಕನಾಥವಾಡಿಯ ಗೋಡಾನ್‌ಲ್ಲಿದ್ದ ಕಾರ್‌ನ್ನು, ಪುಣೆಯ ವಾಘೋಲಿಯಲ್ಲಿದ್ದ ವಿಠಲ್‌ನ್ನನು ಬಂಧಿಸಲಾಗಿದೆ. ವೈಜ್ಞಾನಿಕ ಆಧಾರಗಳನ್ನು ಬಳಸಿ, ಮೂರು ರಾಜ್ಯ ಸುತ್ತಾಡಿ ಆರೋಪಿಯನ್ನು ಬಂಧಿಸಿ, ಕಾರ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.