filter: 0; fileterIntensity: 0.000000; filterMask: 0; captureOrientation: 0; hdrForward: 0; shaking: 0.043912; highlight: 1; algolist: 0; multi-frame: 1; brp_mask: 8; brp_del_th: 0.0015,0.0032; brp_del_sen: 0.1000,0.1000; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 43; 
ಜಿಲ್ಲೆ

ಜಾತ್ರಾ ಮಹೋತ್ಸವ ಸುಗಮವಾಗಿ ಜರುಗಲಿ

ಸರಗೂರು: ಹಾಲುಗಡ ಹಾಗೂ ಇಟ್ನಾ ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ನಡೆಯುವ ಚಿಕ್ಕದೇವಮ್ಮನ ಜಾತ್ರಾ ಮಹೋತ್ಸವ ಯಾವುದೇ ಗೊಂದವಿಲ್ಲದೆ ನಡೆಯಬೇಕು. ಪ್ರಾಣಿಬಲಿ ನಡೆಯದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು, ಗ್ರಾಮಸ್ಥರು ಮತ್ತು ಟ್ರಸ್ಟ್ ಪದಾಧಿಕಾರಿಗಳಿಗೆ ತಹಸೀಲ್ದಾರ್ ಮೋಹನಕುಮಾರಿ ಸೂಚಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಜಾತ್ರಾ ಮಹೋತ್ಸವ ಸಂಬಂಧ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜಾತ್ರೆಗೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ವ್ಯವಸ್ಥೆ ಮಾಡಬೇಕು. ಟ್ರಸ್ಟ್‌ನವರು ಮಹಿಳಾ ಭಕ್ತರಿಗೆ ಪ್ರತ್ಯೇಕ ಸ್ನಾನ ಮುಡಿ ಮಾಡಲು ಶಾಮಿಯಾನ ವ್ಯವಸ್ಥೆ ಮಾಡಬೇಕು. ಕೋಳಿ, ಕುರಿ ಬಲಿ ಕೊಡಬಾರದು ಎಂದು ತಿಳಿಸಿದರು.

ಇಟ್ನ ಗ್ರಾಮ ಪಂಚಾಯಿತಿ ಸದಸ್ಯ ಜಯರಾಮ ಮಾತನಾಡಿ, ಈವರೆಗೂ ಜಾತ್ರೆ ವೇಳೆ ಯಾವುದೇ ಅಹಿತಕರ ಘಟನೆ ಉಂಟಾಗಿಲ್ಲ. ಬರುವ ಭಕ್ತಾದಿಗಳಿಗೆ ಅನ್ನದಾನ ಹಾಗೂ ವಾಹನಗಳ ವ್ಯವಸ್ಥೆ ಮಾಡಲಾಗಿದೆ. ಚಿಕ್ಕದೇವಮ್ಮ ಬೆಟ್ಟದಿಂದ ಬೆಟ್ಟದ ತಪ್ಪಲಲ್ಲಿರುವ ಕಬಿನಿ ನದಿ ದಂಡೆಯ ಹಾಲುಗಡುವಿಗೆ ಅಮ್ಮನವರನ್ನು ಮೆರವಣಿಗೆ ಮೂಲಕ ತರುವುದರೊಂದಿಗೆ ಜಾತ್ರೆ ಆರಂಭವಾಗುತ್ತದೆ. ನದಿ ಮಧ್ಯ ಭಾಗದಲ್ಲಿರುವ ಜಪದಕಟ್ಟೆಯಲ್ಲಿ ಚಿಕ್ಕದೇವಮ್ಮನವರ ಉತ್ಸವ ಮೂರ್ತಿಯನ್ನು ಇಟ್ಟು ಅಲ್ಲಿ ವಿಶೇಷ ಪೂಜೆ ಮಾಡುವುದು ಸಂಪ್ರದಾಯವಾಗಿದೆ. ಬಳಿಕ ಸಮೀಪದಲ್ಲಿರುವ ಗೂಳಿ ಮಂಟಪದಲ್ಲಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಗುವುದು. ನಮ್ಮ ಗ್ರಾಮಸ್ಥರ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ. ಇಲಾಖೆಗಳ ಅಧಿಕಾರಿಗಳು ಸಹಕಾರ ನೀಡಬೇಕು ಎಂದರು.

ಟ್ರಸ್ಟ್ ಅಧ್ಯಕ್ಷ ದೊಡ್ಡವೀರ ನಾಯಕ ಮಾತನಾಡಿ, ಪ್ರಾಣಿ ಬಲಿ ಮಾಡುತ್ತಿಲ್ಲ. ಕಬಿನಿ ಹೊಳೆ ದಡದಲ್ಲಿ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಹಾಲುಗಡ ಕಬಿನಿ ಜಲಾಶಯದ ಹೊಳೆ ಮಧ್ಯಭಾಗದಲ್ಲಿರುವ ಜಪದಕಟ್ಟೆ ಬಳಿ ಜನರು ದೇವರ ದರ್ಶನ ಪಡೆಯಲು ಮುಂದಾಗುತ್ತಾರೆ. ಪೊಲೀಸರು ಮತ್ತು ಟ್ರಸ್ಟ್ ಪದಾಧಿಕಾರಿಗಳು ಜನರನ್ನು ನಿಯಂತ್ರಿಸಲು ಪೊಲೀಸರ ಜತೆ ಕೈಜೋಡಿಸಬೇಕು ಎಂದು ತಹಸೀಲ್ದಾರ್ ಮೋಹನಕುಮಾರಿ ಸಲಹೆ ನೀಡಿದರು.

ವೃತ್ತ ನಿರೀಕ್ಷಕ ಪ್ರಸನ್ನಕುಮಾರ್, ಚಿಕ್ಕ ದೇವಮ್ಮ ಬೆಟ್ಟದ ಕಾರ್ಯನಿರ್ವಾಹಕ ಅಧಿಕಾರಿ ರಘು, ಟ್ರಸ್ಟ್ ಅಧ್ಯಕ್ಷ ದೊಡ್ಡವೀರನಾಯಕ, ನಿಂಗರಾಜು, ನಾಗರಾಜು, ಬೆಟ್ಟ ನಾಯಕ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎನ್.ಬಸವನಾಯಕ, ಬಿ.ಬಸವರಾಜು, ಐ.ಬಿ.ರವಿಕುಮಾರ, ನಾಗೇಂದ್ರ, ಶೇಷ, ಮಂಚನಾಯಕ, ಇಟ್ನ ರಾಜಣ್ಣ, ಚಿಕ್ಕಣ್ಣ, ಬಿ.ರಾಮನಾಯಕ, ಬೆಟ್ಟನಾಯ್ಕ, ಬೆಟ್ಟದ ಪಾರುತ್ತೇದಾರ ಮಹದೇವಸ್ವಾಮಿ, ಪುರದಕಟ್ಟೆ ಬಸವರಾಜು, ಸರಗೂರು ಕೃಷ್ಣ, ಪಿಡಿಒ ಚಿನ್ನಸ್ವಾಮಿ, ಮನೋಹರ್, ಆರ್‌ಐ ಮುಜೀಬ್, ಶ್ರೀನಿವಾಸ, ಉಷಾ ಹಾಜರಿದ್ದರು.