ಸರಗೂರು ಪಟ್ಟಣದ ನಾಮದಾರಿ ಗೌಡರ ಸಮುದಾಯ ಭವನದಲ್ಲಿ ನಾಮಧಾರಿ ಗೌಡರು ಬಿಜೆಪಿ ಪಕ್ಷ ಬೆಂಬಲಿಗರ ಸಭೆಯನ್ನು ಸಮಾಜದ ಹಿರಿಯರು ಉದ್ಘಾಟಿಸಿದರು. 
ಜಿಲ್ಲೆ

ಜಾತ್ಯತೀತವಾಗಿ ಸಮಾಜ ಸೇವೆ ಮಾಡುತ್ತಿರುವೆ

ಎಚ್.ಡಿ.ಕೋಟೆ/ಸರಗೂರು: ಹತ್ತು ವರ್ಷಗಳಿಂದ ತಾಲೂಕಿನಲ್ಲಿ ಯಾವುದೇ ಜಾತಿ, ಧರ್ಮ ನೋಡದೆ ಜಾತ್ಯತೀತವಾಗಿ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇನೆ. ಹಾಗಾಗಿ ನನಗೆ ಒಂದು ಬಾರಿ ಆಯ್ಕೆ ಆಗಲು ಅವಕಾಶ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಮನವಿ ಮಾಡಿದರು.

ಸರಗೂರು ಪಟ್ಟಣದ ನಾಮಧಾರಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ನಾಮಧಾರಿ ಸಮಾಜ ಸಭೆಯಲ್ಲಿ ಮಾತನಾಡಿ, ಒಂದೇ ಜನಾಂಗ ಚುನಾವಣಾ ನಿರ್ಧಾರ ಮಾಡಲು ಸಾಧ್ಯವಿಲ್ಲ. ನಾಮಧಾರಿಗೌಡ ಸಮಾಜ ತಾಲೂಕಿನಲ್ಲಿ ತನ್ನದೆ ಆದ ಗೌರವ ಉಳಿಸಿಕೊಂಡು ಬಂದಿದೆ. ಎಲ್ಲ ಸಮಾಜವನ್ನು ತನ್ನ ತೆಕ್ಕೆಯಲ್ಲಿ ಹಾಕಿಕೊಂಡು ಚುನಾವಣಾ ಹೆದರಿಸಬೇಕು. ಕಳೆದ ಮೂರು ಚುನಾವಣೆಯಂತೆ ಈ ಚುನಾವಣೆ ಆಗದಂತೆ ನಡೆದುಕೊಳ್ಳಿ. ನನಗೆ ಪ್ರಚಾರದಲ್ಲಿ ಹೆಚ್ಚು ಆಸಕ್ತಿ ಇಲ್ಲ್ಲ, ಕೆಲಸದ ಮೂಲಕ ನಾನು ಪ್ರಚಾರಕ್ಕೆ ಬರುವ ಗುರಿ ಇಟ್ಟುಕೊಂಡಿದ್ದೇನೆ ಎಂದರು.

ನಾನು ಯಾರನ್ನೂ ಟೀಕೆ ಮಾಡುವುದಿಲ್ಲ. ನಾನು ಯಾವುದೇ ಸಮಾಜವನ್ನು ಎತ್ತಿಕಟ್ಟುವ ಕೆಲಸವನ್ನು ಕೂಡ ಮಾಡಿಲ್ಲ. ತಾಲೂಕಿನಲ್ಲಿ ಶಾಂತಿ ಲಭಿಸಲು ಕಾಂಗ್ರೆಸ್ ಪಕ್ಷ ಬೆಂಬಲಿಸಲು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಎನ್.ಜಗದೀಶ್ ಮಾತನಾಡಿದರು. ಜೆಡಿಎಸ್ ಪಕ್ಷ ತೊರೆದು ಹಲವು ಜನಾಂಗದ ಮುಖಂಡರು ಬಿಜೆಪಿ ಪಕ್ಷ ಸೇರಿದರು. ಕಾರ್ಯಕ್ರಮಕ್ಕೂ ಮುನ್ನ ಸಾರಿಗೆ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಸಂತೇಮಾಳದ ಸಂತೆ ಮಾಸ್ತಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.

ಮಹಾದೇವು, ವೈ.ಪಿ.ನಾಗರಾಜು, ಜಯಣ್ಣ, ಮಲ್ಲಿಕಾರ್ಜುನ, ಬಸವರಾಜು, ಪುಟ್ಟಸ್ವಾಮಪ್ಪ, ಮಹಾದೇವಪ್ಪ, ಚಂದ್ರಶೇಖರ್, ಸುಬ್ರಹ್ಮಣ್ಯ, ಸುಬ್ಬಾಲಮ್ಮ, ನಾಗರಾಜು ಇತರರಿದ್ದರು.