ಬಾಗಲಕೋಟೆ: ಜಾತಿ ಸಮೀಕ್ಷಾ ವರದಿ, ಒಳ ಮೀಸಲಾತಿ ಸಮೀಕ್ಷೆ ಯಾವುದೇ ಇರಲಿ. ಯಾರೇ ಅಽಕಾರದಲ್ಲಿ ಇದ್ದರು ಜಾತಿ ವಿಚಾರಕ್ಕೆ ಕೈ ಹಾಕಿದರೇ ಜೇನುಗೂಡಿಗೆ ಕೈ ಹಾಕಿದಂತೆ. ಸುಮ್ ಸುಮ್ ಇವೆಲ್ಲ ಮಾಡುವುದು ಸರಿಯಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೇ.೫೦ ಕ್ಕಿಂತ ಹೆಚ್ಚು ಮೀಸಲಾತಿ ಪ್ರಮಾಣ ಇರಬಾರದು ಅಂತ ಸುಪ್ರೀಂಕೋರ್ಟ ಹೇಳಿದೆ. ಯಾವುದೇ ಮೀಸಲಾತಿ ಇರಲಿ ಅದು ಮೀರಬಾರದು ತಿಳಿಸಿದೆ. ಇದೆಲ್ಲ ಒಂದಕ್ಕೊAದು ಜಗಳಕ್ಕೆ ಮೂಲ. ಇವೆಲ್ಲ ನಾಳೆ ಗಂಭೀರ ಚಿಂತನೆಗೆ ಒಳಪಡಿಸುತ್ತವೆ. ಜಾತಿ ಸಮೀಕ್ಷೆ ಮಾಡುವುದು ಅವಶ್ಯಕತೆ ಇರಲಿಲ್ಲ ಅಂತ ನನ್ನ ಅಭಿಪ್ರಾಂiÀಎAದರು.
ಎಲ್ಲಿವರೆಗೂ ಹಣ ಕೊಟ್ಟು ಹಾಗೂ ಪಡೆದು ವೋಟ್ ಪಡೆಯುವ ಪ್ರಕ್ರಿಯೆ ನಡೆಯುತ್ತದೆ. ಅಲ್ಲಿಯ ವರೆಗೂ ಇಂತಹ ಕೆಟ್ಟ ಪರಿಸ್ಥಿತಿ ಬರುತ್ತದೆ. ಪ್ರಜಾಪ್ರಭುತ್ವಗಟ್ಟಿಗೊಳ್ಳಬೇಕು ಎಂದರೇ ಮತದಾನ ನ್ಯಾಯಯುತವಾಗಿ ಆಗಬೇಕು ಎಂದು ಹೇಳಿದರು.
ಎಲ್ಲವರೆಗೆ ದೇಶದಲ್ಲಿ ಪುಕ್ಕಟೆ ಕೊಡೋದು ನಡೆಯುತ್ತದೆ. ಅಲ್ಲಿವರೆಗೆ ಯಾವ ದೇಶ ಯಾವ ರಾಜ್ಯನೂ ಉz್ದÁರ ಆಗೋದಿಲ್ಲ. ಕೆಲಸಕ್ಕೆ ನಮಗೆ ಆಳು ಸಿಗುವದಿಲ್ಲ. ದನಗಳನ್ನು ಮಾರಾಟ ಮಾಡುತ್ತಿದ್ದೇವೆ. ಕೆಲಸಗಾರರಿಗೆ ಏನಮ್ಮ ೫೦ ರೂ ಹೆಚ್ಚು ಮಾಡ್ತಿವಿ ಅಂದರೆ ಬೇಡ ಬಿಡ್ರಿ ನಮ್ಮ ಸಿದ್ದರಾಮಯ್ಯ ರಗಡ ದುಡ್ಡು ಕೊಟ್ಟಾನ ನಿಮ್ಮದ್ಯಾಕ ನಮಗೆ ಅಂತಾರೆ. ಹೀಗೆ ಆದರೇ ಆರ್ಥಿಕ ಪರಿಸ್ಥಿತಿ ಚನ್ನಾಗಿ ಉಳಿಯಲು ಸಾಧ್ಯವೇ ಅಂತ ಪ್ರಶ್ನಿಸಿದರು.
ಸಿ.ಟಿ ರವಿ-ಲಕ್ಷಿ÷್ಮÃ ಹೆಬ್ಬಾಳಕರಗೆ ಅವಾಚ್ಯ ಪದ ಬಳಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಬಸವರಾಜ ಹೊರಟ್ಟಿ, ಆ ಪ್ರಕರಣ ನಮ್ಮ ಅಂಗಳಕ್ಕೆ ಬಂದಾಗ ಇಬ್ಬರನ್ನು ಕರೆದು ಮಾತಾಡಿ ನನ್ನದೇ ಆದ ಡಿಸೀಜನ್ ಕೊಟ್ಡಿದ್ದೇನೆ. ಸಿಟಿ ರವಿ ಆ ಪದ ಬಳಕೆ ಬಗ್ಗೆ ನಮ್ಮಲ್ಲಿ ಯಾವುದೇ ಸಾಕ್ಷಿ ಸಿಕ್ಕಿಲ್ಲ. ನಮ್ಮ ಕ್ಯಾಮರಾಗಳು ಸದನ ಶುರು ಆದಾಗ ಶುರು ಆಗುತ್ತವೆ. ಸದನ ಬಂದ ಆದಾಗ ಅಟೊಮ್ಯಾಟಿಕ್ ಬಂದï ಆಗುತ್ತದೆ. ಇಬ್ಬರು ದೂರು ಕೊಟ್ಟರು ಈಗ ನೀತಿ ನಿರೂಪಣಾ ಕಮೀಟಿಗೆ ಹಸ್ತಾಂತರ ಮಾಡಲಾಗಿದೆ. ನೀತಿ ನಿರೂಪಣಾ ಕಮೀಟಿಯಲ್ಲಿ ಏನು ಆಗುತ್ತೊ ಅವರ ವರದಿ ನನಗೆ ಕೊಡ್ತಾರೆ, ಮುಂದೆ ನೋಡ್ತೀವಿ. ಲಕ್ಷಿ÷್ಮÃ ಹೆಬ್ಬಾಳಕರ ಖಾಸಗಿ ಚಾನಲ್ ವಿಡಿಯೊ ಒಂದನ್ನು ಕೊಟ್ಟಿದ್ದರು. ಅದನ್ನು ಎ-ïಎಸ್‌ಎಲï ಗೆ ಕಳಿಸಲಾಗಿದೆ. ಆ ವರದಿ ಇನ್ನು ಬಂದಿಲ್ಲ ಎಂದು ತಿಳಿಸಿದರು.
ಬಿಟಿಡಿಎ ಅಧ್ಯಕ್ಷ, ಶಾಸಕ ಎಚ್.ವೈ.ಮೇಟಿ, ರೆಡ್ ಕ್ರಾಸ್ ಸಂಸ್ಥೆಯ ಚರ್ಮೇನ್ ಆನಂದ ಜಿಗಜಿನ್ನಿ, ವಿನೋದ ಜಿಗಜಿನ್ನಿ ಇತರರು ಇದ್ದರು.