ಜಿಲ್ಲೆ

ಜಾತಿಗಣತಿ ವರದಿ ಬಿಡುಗಡೆಗೆ ಸಚಿವ ಮಲ್ಲಿಕಾರ್ಜುನ್ ಆಗ್ರಹ

ದಾವಣಗೆರೆ: ಜಾತಿ ಗಣತಿಯಲ್ಲಿ ಏನಿದೆ ಎಂಬುದನ್ನು ಬಿಡುಗಡೆಯಾದ ನಂತರದಲ್ಲಿ ನೋಡೋಣ. ಅದರ ಬಗ್ಗೆ ಈಗಲೇ ಅನಗತ್ಯ ಚರ್ಚೆ ಬೇಡ ಎಂದು ತೋಟಗಾರಿಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.

ದಾವಣಗೆರೆಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ ಜಾತಿಗಣತಿ ಬಗ್ಗೆ ಮುಂಚಿತವಾಗಿಯೇ ಮಾತನಾಡುವುದು ಸರಿಯಲ್ಲ. ಮಹಾಸಭಾದ ನಿನ್ನೆಯ ಸಭೆಯಲ್ಲಿ ವಿರೋಧ ವ್ಯಕ್ತವಾಗಿದೆ. ಈಗ ಒಬ್ಬೊಬ್ಬರದೂ ಒಂದೊಂದು ಅಭಿಪ್ರಾಯ ಕೇಳಿಬರುತ್ತಿದೆ . ಮೊದಲು ಜಾತಿ ಗಣತಿ ಬಿಡುಗಡೆಯಾಲಿ ಎಂದು ಆಗ್ರಹಿಸಿದರು.

ಮಾಜಿ ಸಚಿವ ವಿ.ಸೋಮಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಎಸ್ಸೆಸ್ಸೆಂ ‘ಅವರು ಬರಲು ಕಾಂಗ್ರೆಸ್‌ನಲ್ಲಿ ಜಾಗ ಇರಬೇಕಲ್ಲವಾ? ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೋ ನೋಡಬೇಕಿದೆ. ಎಲ್ಲರೂ ಕಾಂಗ್ರೆಸ್‌ಗೆ ಸೇರುತ್ತಿರುವುದರಿಂದ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ ಎಂದರು.

ಶಾಮನೂರು ಅವರನ್ನು ಟೀಕಿಸಿದ ಎಚ್. ವಿಶ್ವನಾಥ್ ಹೇಳಿಕೆಗೆ ಕಿಡಿ ಕಾರಿದ ಮಲ್ಲಿಕಾರ್ಜುನ್ ‘ಅವರೀಗ ಯಾವ ಪಕ್ಷದಲ್ಲಿದ್ದಾರೆ. ವಿಶ್ವನಾಥ್ ಒಬ್ಬ ಸಮಯಸಾಧಕರು. ಎಲ್ಲ ಪಕ್ಷ ಸುತ್ತಾಡಿ ಈಗ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದರು.

---