ಕಲಬುರಗಿ: ಕೇಂದ್ರ ರ‍್ಕಾರವೂ ಜನಗಣತಿ ಜತೆಯಲ್ಲಿ ಜಾತಿ ಗಣತಿ ಮಾಡಲು ಮುಂದಾಗಿರುವ ನರ‍್ಧಾರ ಐತಿಹಾಸಿಕವಾಗಿದ್ದು, ತಕ್ಷಣವೇ ಗಣತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಬಿಜೆಪಿ ಓಬಿಸಿ ಮರ‍್ಚಾ ರಾಜ್ಯ ಪ್ರಧಾನ ಕರ‍್ಯರ‍್ಶಿ ಅವ್ವಣ್ಣ ಮ್ಯಾಕೇರಿ ಹೇಳಿದರು.
೧೮೮೧, ೧೯೩೧ರಲ್ಲಿ ಕೊನೇ ಬಾರಿಗೆ ೯೪ ರ‍್ಷಗಳ ಹಿಂದೆ ಜಾತಿ ಜನಗಣತಿ ನಡೆದಿತ್ತು. ಇದೀಗ ದೇಶದಲ್ಲಿರುವ ಹಿಂದುಳಿದ ರ‍್ಗಗಳ ಜನಸಂಖ್ಯೆ ನಿಖರ ದತ್ತಾಂಶ ಲಭ್ಯವಿಲ್ಲ. ಇದರಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯವಾಗಿ ಅನ್ಯಾಯವಾಗುತ್ತಿತ್ತು. ಈ ಬಗ್ಗೆ ಡಾ.ಬಿ.ಆರ್.ಅಂಬೇಡ್ಕರ್ ಹಿಂದುಳಿದ ರ‍್ಗಗಳ ಮೀಸಲು ಸಾಧ್ಯವಾಗದೇ ಮಹಿಳೆಯರ ಹಕ್ಕು ಪ್ರಸ್ತಾಪಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಉದಾಹರಣೆ ನಮ್ಮ ಮುಂದೆ ಇದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ವಿ.ಪಿ.ಸಿಂಗ್ ರ‍್ಕಾರ ಸಾಮಾಜಿಕ, ರ‍್ಥಿಕ, ಶೈಕ್ಷಣಿಕ ಅಭಿವೃದ್ಧಿಗೆ ೧೯೭೯ರಲ್ಲಿ ಮಂಡಲ ವರದಿ ಜಾರಿ ಮಾಡಿ ಶೇ.೨೭ ಮೀಸಲು ಅನುಷ್ಠಾನಕ್ಕೆ ತಂದಿದ್ದರು. ಕಾಂಗ್ರೆಸ್ ಮಾತ್ರ ವಿರೋಧಿಸುತ್ತಲೇ ಬಂದಿತ್ತು. ರಾಜ್ಯದಲ್ಲಿ ಎರಡು ಬಾರಿ ಜಾತಿಗಣತಿ ಮಾಡಿದರೂ ನಿಖರ ದತ್ತಾಂಶ ಇಲ್ಲ, ಅವೈಜ್ಞಾನಿಕ ವರದಿ ಜಾರಿಗೊಳಿಸಲು ಹೊರಟಿರುವ ನರ‍್ಧಾರ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಒಬಿಸಿ ಮರ‍್ಚಾ ಮಾಜಿ ಉಪಾಧ್ಯಕ್ಷ ಶರಣಪ್ಪ ತಳವಾರ, ಮರ‍್ಚಾ ಜಿಲ್ಲಾಧ್ಯಕ್ಷ ದೇವಿಂದ್ರ ದೇಸಾಯಿ ಕಲ್ಲೂರ್, ಮುಖಂಡರಾದ ಬಸವರಾಜ ಮದ್ದರಕಿ, ಬಸವರಾಜ ಸಪ್ಪನಗೊಳ, ರಾಕೇಶ ಮಾಡಿಯಾಳ, ಚಂದ್ರಕಾಂತ ಕಿರಸಾವಳಗಿ ಇತರರಿದ್ದರು.
ಅಕ್ರಮ ಮರಳು ಸಮೀೆಗೆ ಬಳ್ಳಾರಿ ತಂಡ : ಭೀಮಾ ಮತ್ತು ಕಾಗಿಣಾ ನದಿ ಸುತ್ತಲಿನ ಅಕ್ರಮ ಮರಳು ಗಣಿಗಾರಿಕೆ ಬಗ್ಗೆ ಕ್ಯೂಬಿಕಲ್ ಸಮೀೆ ಮಾಡಲು ಬಳ್ಳಾರಿ ಜಿಲ್ಲೆಯಿಂದ ತಂಡ ಮೇ ೩ರಂದು ಜಿಲ್ಲೆಗೆ ಭೇಟಿ ನೀಡಲಿದೆ ಎಂದು ಮುಖಂಡ ಅವ್ವಣ್ಣ ಮ್ಯಾಕೇರಿ ಮಾಹಿತಿ ನೀಡಿದರು. ಚಿತ್ತಾಪುರ ತಾಲೂಕಿನ ಬೆಳಗುಂಪಾ ಗ್ರಾಮದಲ್ಲಿ ಯುವಕನ ಸಾವಿನ ಪ್ರಕರಣದಲ್ಲಿ ಕುಟುಂಬಸ್ಥರ ಒಪ್ಪಿಗೆ ಇಲ್ಲದೆ ಯಾವುದೇ ಹೋರಾಟ ಮಾಡುವುದಿಲ್ಲ. ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಾಮಾಣಿಕವಾಗಿ ಹೋರಾಡಿದ್ದೇನೆ ಎಂದು ಹೇಳಿದರು.: