ನವನಗರದ ಖಾಸಗಿ ಹೊಟೇಲನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಒಳ ಮೀಸಲಾತಿ ಜಾತಿ ಜನಗಣತಿ ಕುರಿತು ಬಲಗೈ ಸಂಬAಽತ ಜಾತಿಗಳ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಮುಖಂಡರ ಸಮಾಲೋಚನಾ ಸಭೆಯಲ್ಲಿ ನ್ಯಾಯವಾದಿ ಬಸವರಾಜ ಬದಾಮಿ ಮಾತನಾಡಿದರು. ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಸಂಗಿ, ಡಾ.ಎಂ.ಎಚ್.ಚಲವಾದಿ, ಯಲ್ಲಪ್ಪ ನಾರಾಯಣಿ, ಎನ್.ಬಿ.ಗಸ್ತಿ ಇತರರು ಇದ್ದರು.  
ಜಿಲ್ಲೆ

ಜಾತಿ ಸಮೀಕ್ಷೆಗೆ ನಿಖರ ಮಾಹಿತಿ ನೀಡಿ

ಬಾಗಲಕೋಟೆ: ಪರಿಶಿಷ್ಠ ಜಾತಿಯಲ್ಲಿರುವ ೧೦೧ ಜಾತಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಒಳ ಮೀಸಲಾತಿ ಪ್ರಮಾಣ ಹಂಚಿಕೆಗಾಗಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಆಯೋಗ ಪರಿಶಿಷ್ಟ ಜಾತಿಗಳ ಸಮೀಕ್ಷೆ ನಡೆಸಲಿದೆ. ಈ ಸಂದರ್ಭದಲ್ಲಿ ಬಲಗೈಗೆ ಸಂಬAಽಸಿದ ೩೭ ಉಪ ಜಾತಿಗಳಿಗೆ ಸೇರಿದವರು ತಮ್ಮ ಉಪಜಾತಿ ಎದುರು ಕಡ್ಡಾಯವಾಗಿ ಛಲವಾದಿ ಅಥವಾ ಹೊಲೆಯರ ಯಾವುದಾದರೂ ಒಂದನ್ನು ನಮೂದಿಸಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾದ ಜಿಲ್ಲಾಧ್ಯಕ್ಷ ಪ್ರೇಮನಾಥ ಗರಸಂಗಿ ಮನವಿ ಮಾಡಿದರು.

ನವನಗರದ ಖಾಸಗಿ ಹೊಟೇಲನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಒಳ ಮೀಸಲಾತಿ ಜಾತಿ ಜನಗಣತಿ ಕುರಿತು ಬಲಗೈ ಸಂಬAಽತ ಜಾತಿಗಳ ಜಿಲ್ಲೆಯ ಎಲ್ಲ ತಾಲ್ಲೂಕುಗಳ ಮುಖಂಡರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗ ಹಾಗೂ ಜೆ.ಸಿ. ಮಾಧುಸ್ವಾಮಿ ಸಮಿತಿಯ ವರದಿಗಳಲ್ಲಿ ಇರುವ ನ್ಯೂನತೆಗಳನ್ನು ಸರಿಪಡಿಸಿ ವೈಜ್ಞಾನಿಕವಾಗಿ ಮಾಹಿತಿ ಸಂಗ್ರಹಿಸಲು ಸರಿಪಡಿಸಲು ಸರ್ಕಾರ ನಾಗಮೋಹನ್ ದಾಸ್ ಆಯೋಗ ರಚಿಸಿದೆ. ಸಮೀಕ್ಷೆ ಸಂದರ್ಭದಲ್ಲಿ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಬೇಕು ಎಂದರು.

ಸಮೀಕ್ಷೆ ಮುಗಿಯುವವರಿಗೆ ನಾವು ಕಾವಲಗಾರರಂತೆ ಕೆಲಸ ಮಾಡಬೇಕು. ರಾಜ್ಯದಲ್ಲಿರುವ ಪರಿಶಿಷ್ಠ ಜಾತಿಗಳಲ್ಲಿ ಬಲಗೈನವರೇ ಹೆಚ್ಚಾಗಿದ್ದಾರೆ. ಸಮೀಕ್ಷೆಯಲ್ಲಿ ನಮ್ಮ ಸಂಖ್ಯೆ ನಿಖರವಾಗಿ ಗೊತ್ತಾಗಬೇಕಾದರೆ ಎಲ್ಲರೂ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ನ್ಯಾಯವಾದಿ ಬಸವರಾಜ ಬದಾಮಿ ಮಾತನಾಡಿ, ಇದು ಜಾತಿ ಸಮೀಕ್ಷೆಯೇ ಹೊರತು ಧರ್ಮ ಸಮೀಕ್ಷೆಯಲ್ಲ. ಇಲ್ಲಿ ಧರ್ಮದ ಕಾಲಂ ಇರುವುದಿಲ್ಲ. ಹಾಗಾಗಿ, ಪರಿಶಿಷ್ಟ್ಟ ಜಾತಿಯವರು ತಮ್ಮ ಧರ್ಮದ ವಿಷಯಕ್ಕೆ ಮಹತ್ವ ನೀಡುವ ಅಗತ್ಯವಿಲ್ಲ. ಸಾರ್ವತ್ರಿಕ ಜನಗಣತಿಯಲ್ಲಿ ಧರ್ಮದ ಕಾಲಂನಲ್ಲಿ ಕೆಲವರು ಬೌದ್ಧ ಧರ್ಮ ಎಂದು ನಮೂದಿಸಿದರೆ, ಜಾತಿ ಕಲಂನಲ್ಲಿ ಪರಿಶಿಷ್ಟ ಜಾತಿಯ ಉಪ ಜಾತಿ ಹೆಸರು ನಮೂದಿಸಲೇಬೇಕು. ಧರ್ಮ ನಮೂದಿಸಿ ಉಪ ಜಾತಿ ನಮೂದಿಸದಿದ್ದರೆ ಅಂತವರನ್ನು ಅಲ್ಪಸಂಖ್ಯಾತರ ಗುಂಪಿಗೆ ಈ ಬಗ್ಗೆ ಎಚ್ಚರಿಕೆ ಇರಲಿ ಎಂಬ ಕಿವಿಮಾತು ಹೇಳಿದರು.

ಸಮೀಕ್ಷೆ ಸಂದರ್ಭದಲ್ಲಿ ಉಪ ಜಾತಿಗಳ ಎದುರು ಬಲಗೈ ಛಲವಾದಿ ಅಥವಾ ಹೊಲೆಯ ಎಂದು ಯಾವುದಾದರೂ ಒಂದನ್ನು ನಮೂದಿಸದಿದ್ದರೆ ಈ ಜಾತಿಗಳಿಗೆ ಸೇರಿದವರ ಸಂಖ್ಯೆಯಲ್ಲಿ ಏರುಪೇರಾಗಲಿದೆ. ಆಗ ಸರ್ಕಾರದಿಂದ ಸಿಗುವ ರಾಜಕೀಯ ಪ್ರಾತಿನಿಧ್ಯ ಶಿಕ್ಷಣ ಉದ್ಯೋಗ ಸೇರಿದಂತೆ ಸರ್ಕಾರಕ್ಕೆ ಸಂಬAಽಸಿದ ಎಲ್ಲಾ ಯೋಜನೆಗಳು ಹಾಗೂ ಸೌಲಭ್ಯಗಳ ಮೀಸಲಾತಿಯಿಂದ ಶಾಶ್ವತವಾಗಿ ವಂಚಿತರಾಗಬೇಕಾಗುತ್ತದೆ. ಹಾಗಾಗಿ ಸಮೀಕ್ಷೆ ಕುರಿತು ಜಾಗೃತರಾಗಿ ಎಚ್ಚರಿಕೆಯಿಂದ ಜಾತಿ ಮತ್ತು ಉಪ ಜಾತಿಯನ್ನು ನಮೂದಿಸಬೇಕು ಹೇಳಿದರು.

ಡಾ.ಎಂ.ಎಚ್.ಚಲವಾದಿ ಮಾತನಾಡಿ, ಸಮೀಕ್ಷೆ ಕುರಿತು ಬಲಗೈ ಸಮುದಾಯದವರಿಗೆ ಜಾಗೃತಿ ಮೂಡಿಸಲು ಛಲವಾದಿ ಮಹಾಸಭಾದಿಂದ ಪ್ರತಿ ಊರು ಪಂಚಾಯಿತಿ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಪ್ರತಿನಿಽಗಳನ್ನು ನೇಮಿಸಲು ಉದ್ದೇಶಿಸಲಾಗಿದೆ. ಇದರಲ್ಲಿ ಸಮುದಾಯದ ಸ್ಥಳೀಯ ಮಟ್ಟದಿಂದ ಜಿಲ್ಲಾ ಮಟ್ಟದವರೆಗಿನ ಹಾಲಿ ಮತ್ತು ಮಾಜಿ ಜನಪ್ರತಿನಿಽಗಳು ಇರಲಿದ್ದಾರೆ. ಮೂರು ರೀತಿಯಲ್ಲಿ ಸಮೀಕ್ಷೆ ನಡೆಯಲಿದೆ. ಶಿಕ್ಷಕರು ಮನೆ ಬಾಗಿಲಿಗೆ ಬಂದು ಮಾಹಿತಿ ಸಂಗ್ರಹಿಸಲಿದ್ದಾರೆ. ಅವರು ಮನೆಗೆ ಬಂದಾಗ ಮಾಹಿತಿ ಕೊಡಲು ಸಾಧ್ಯವಾಗದಿದ್ದರೆ ಅಥವಾ ಮನೆಯಲ್ಲಿ ಇಲ್ಲದಿದ್ದರೆ ಸ್ಥಳೀಯವಾಗಿ ವ್ಯವಸ್ಥೆ ಮಾಡಿರುವ ಬೂತ್ ಕಚೇರಿಗೆ ಹೋಗಿ ಮಾಹಿತಿ ಕೊಡಬೇಕು. ವಿದೇಶದಲ್ಲಿರುವವರು ಸೇರಿದಂತೆ ಊರು ಬಿಟ್ಟು ಬೇರೆ ಕಡೆ ಉದ್ಯೋಗಕ್ಕಾಗಿ ನೆಲೆಸಿರುವವರು ಮೊಬೈಲ್ ಆಯಪ್ ಮೂಲಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಮುಧೋಳದ ರವಿ ಕಾಂಬಳೆ, ಬೀಳಗಿಯ ಪಡಿಯಪ್ಪ ಕಳ್ಳಿಮನಿ, ಜಮಖಂಡಿಯ ರವಿ ಬಬಲೇಶ್ವರ, ಶರಣಪ್ಪ ಬೇವೂರ, ನ್ಯಾಯವಾದಿ ಯಮನಪ್ಪ ಶಿರೂರ, ಸಂಗಪ್ಪ ಚಲವಾದಿ, ನಗರಸಭೆಯ ಸಭಾಪತಿ ಯಲ್ಲಪ್ಪ ನಾರಾಯಣಿ, ಗೆಜ್ಜಲಗಟ್ಟಿ, ರಂಗಪ್ಪ ಕೋಟಿ, ನ್ಯಾಯವಾದಿ ಎನ್.ಬಿ.ಗಸ್ತಿ, ಸದಾಶಿವ ಕೊಡಬಾಗಿ, ಮಹೇಶ ಬೀಳಗಿ, ಮನೋಹರ ಗರಸಂಗಿ, ಗುರುಶಾಂತಪ್ಪ ಮದೀನಕರ, ಹುಲಗೆಪ್ಪ ಹೊದ್ಲುರ, ಕಮತಗಿಯ ನಾಟೇಕರ, ಎಚ್.ಡಿ.ಹೊಸಮನಿ, ನರಸಪ್ಪ ಹಿರೇಮನಿ ಇದ್ದರು. ಕಲಾವತಿ ಬನಸೋಡೆ ಪ್ರಾರ್ಥಿಸಿದರು.