ಚಿಕ್ಕಮಗಳೂರು: ಜಾತಿ ವ್ಯವಸ್ಥೆಯನ್ನು ಜೀವಂತವಾಗಿರಿಸಲು ಪ್ರಜ್ಞಾಪೂರ್ವಕವಾಗಿ ಷಡ್ಯಂತ್ರಗಳನ್ನು ರೂಪಿಸಲಾಗುತ್ತಿದೆ ಈ ಬಗ್ಗೆ ದಲಿತ ಸಮುದಾಯ ಜಾಗೃತರಾಗಬೇಕಿದೆ ಎಂದು ಸಂಸದ ಶಶಿಕಾಂತ್ ಸೆಂಥಿಲ್ ತಿಳಿಸಿದರು.
ದಲಿತ ಸಂಘಟನೆಗಳ ಒಕ್ಕೂಟದಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಆಯೋಜಿಸಿದ್ದ ೨೦೭ ಕೊರೆಂಗಾವ್ ವಿಜಯೋತ್ಸವ ಕಾರ್ಯಕ್ರಮವನ್ನುz್ದೆÃಶಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಎಂಬುದು ಹೊರಬರಲು ಸಾಧ್ಯವಾಗದ ದೊಡ್ಡ ಕೂಪವಾಗಿದೆ. ಇದರಿಂದ ಜನ್ಮಪೂರ್ತಿ ಹೊರಬರಲು ಸಾಧ್ಯವಾಗದಿರುವಂತೆ ಷಡ್ಯಂತ್ರ ರೂಪಿಸಲಾಗಿದೆ ಎಂದು ಹೇಳಿದರು.
ಜೊತೆಯಲ್ಲಿಯೇ ಜೀವಿಸುವ ಮೇಲ್ಮರ್ಗದವರು ಅಂತರ್ಜಾತಿ ವಿವಾಹಕ್ಕೆ ಇಂದಿಗೂ ಒಪ್ಪುತ್ತಿಲ್ಲ. ಇವರ ನಿರ್ಬಂಧಗಳನ್ನು ಮೀರಿ ಅಂತರ್ಜಾತಿ ವಿವಾಹಕ್ಕೆ ಮುಂದಾದ ಕಾರಣಕ್ಕೆ ಕೊಲೆಗಳನ್ನು ಮಾಡುವ, ಇನ್ನು ಮುಂದೆAದೂ ಅಂತರ್ಜಾತಿ ವಿವಾಹಗಳಾಗದಂತೆ ಸಂದೇಶ ರವಾನಿಸುವ ದುಷ್ಟ ಪ್ರವೃತ್ತಿ ಬೆಳೆಯುತ್ತಿದೆ ಎಂದರು.
ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಆರಾಧಿಸುವುದರೊಂದಿಗೆ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಕೆಳ ವರ್ಗದ ಸಮುದಾಯ ಜಾತಿ ವ್ಯವಸ್ಥೆಯನ್ನು ಅಮೂಲಾಗ್ರವಾಗಿ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಜಾತಿ ವ್ಯವಸ್ಥೆಯಲ್ಲಿ ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ವಿದ್ಯಾವಂತರೆನಿಸಿಕೊAಡ ದಲಿತರು ಪ್ರತಿರೋಧಿಸದಿದ್ದರೆ ಮುಂದಿನ ಪೀಳಿಗೆಯ ಮೇಲಿನ ದೌರ್ಜನ್ಯಕ್ಕೆ ನೀವೇ ಕಾರಣರಾಗುತ್ತೀರಿ. ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.
ದೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಚಿಸಿರುವ ಸಂವಿಧಾನವನ್ನು ಅಳಿಸಿ ಹಾಕುವ ಷಡ್ಯಂತ್ರ ವ್ಯಾಪಕವಾಗಿ ನಡೆಯುತ್ತಿದೆ. ಈ ಬಗ್ಗೆ ದೇಶದ ತಳ ಸಮುದಾಯದ ಜನತೆ ಜಾಗೃತರಾಗದಿದ್ದರೆ ಮತ್ತೆ ಗತ ಇತಿಹಾಸ ಮರುಕಳಿಸುವುದರಲ್ಲಿ ಸಂದೇಹವಿಲ್ಲ ಎಂದು ಹೇಳಿದರು.
ಜಾತಿ ವ್ಯವಸ್ಥೆಯನ್ನು ತೊಡೆದು ಹಾಕಲು ಜೈ ಭೀಮ್ ಉದ್ಘೋಷವೊಂದೇ ಮೂಲ ಮಂತ್ರ. ಅಂಬೇಡ್ಕರ್ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದೊಂದೇ ಅಸಮಾನತೆಯನ್ನು ತೊಡೆದು ಹಾಕುವ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು.
ಜೇವರ್ಗಿ ಶಂಕರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿ, ಶೌರ್ಯ, ಪೌರುಷ, ಸಾಹಸ ಗುಣಗಳಿದ್ದರೂ ದಲಿತ ಸಮುದಾಯ ಇಂದಿಗೂ ಗುಲಾಮರಂತೆ ಬದುಕುತ್ತಿರುವುದು ದುರ್ದೈವದ ಸಂಗತಿ. ಈ ಬಗ್ಗೆ ದಲಿತ ಸಮುದಾಯ ಎಚ್ಚರಗೊಳ್ಳಬೇಕಿದೆ ಎಂದು ಹೇಳಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭೀಮ ಕೋರೆಗಾವ್ ಯುದ್ದದ ಬಗ್ಗೆ ಸಂಶೋಧನೆ ಮಾಡಿ ಇತಿಹಾಸವನ್ನು ಜಗತ್ತಿಗೆ ತಿಳಿಸದೆ ಇದ್ದಿದ್ದರೆ ದಲಿತ ಸಮುದಾಯದಲ್ಲಿ ಸ್ವಾಭಿಮಾನ ಹುಟ್ಟುತ್ತಿರಲಿಲ. ಈ ಸ್ವಾಭಿಮಾನವನ್ನು ಹುಟ್ಟುಹಾಕಿದವರು ಅಂಬೇಡ್ಕರ್ ಎಂದರು.
ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ರಾಜಕೀಯ ವ್ಯಕ್ತಿಯನ್ನಾಗಿಸಿ ಹಂಚಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ರಾಜಕಾರಣ ಮಾಡಿದರೂ ಸಹ ಬುದ್ಧ,ಬಸವರ ಸನ್ಮಾರ್ಗದಲ್ಲಿ ರಾಜಕಾರಣ ಮಾಡಿದ್ದಾರೆ ಎಂದು ಹೇಳಿದರು.
ಪ್ರತಿದಿನ ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆ. ಆದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂಬ ಸೂರ್ಯ ಹುಟ್ಟಿದ ಮೇಲೆ ಮುಳುಗದೆ ಇರುವ ಏಕೈಕ ವ್ಯಕ್ತಿ ಎಂದು ಕೊಂಡಾಡಿದರು
ವಕೀಲ ಅನಿಲ್ ಕುಮಾರ್ ಮಾತನಾಡಿ, ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರವು ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿಯೂ ನಿರ್ಣಾಯಕ ಸಂಖ್ಯೆಯಲ್ಲಿರುವ ದಲಿತರು ಮತ ಚಲಾಯಿಸುವುದಷ್ಟೇ ಅಲ್ಲದೆ ಜನಪ್ರತಿನಿಧಿಗಳ ಆಯ್ಕೆಯಲ್ಲಿಯೂ ಜಾಗೃತೆ ವಹಿಸುವ ಅಗತ್ಯವಿದೆ ಎಂದು ಹೇಳಿದರು.
ಅಸಮಾನತೆ ಅನುಭವಿಸಿ ಸಂಕಷ್ಟದ ಜೀವನ ನಡೆಸುತ್ತಿದ್ದರು ಸಹ ಜನಪ್ರತಿನಿಧಿಗಳ ಆಯ್ಕೆಯ ಸಂದರ್ಭದಲ್ಲಿ ಮುಖ್ಯ ಪಾತ್ರ ವಹಿಸಿ, ನಮ್ಮಿಂದ ಆಯ್ಕೆಯಾದ ಜನರಿಂದ ನಮಗೆ ದೊರೆಯಬೇಕಾದ ಹಕ್ಕುಗಳಿಗಾಗಿ ಅಂಗಲಾಚುತ್ತಿರುವುದು ದುರ್ದೈವದ ಸಂಗತಿ. ಮುಂದಿನ ದಿನಗಳಲ್ಲಿ ನಮ್ಮ ಪ್ರತಿನಿಧಿಗಳನ್ನು ನಾವೇ ಆಯ್ಕೆ ಮಾಡಿಕೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆಸಬೇಕಿದೆ ಎಂದರು.
ಕೋರೆಗಾವ್ ವಿಜಯೋತ್ಸವ ಎಂಬುದು ನಮ್ಮ ಘನತೆ ಸ್ವಾಭಿಮಾನದ ಪ್ರತೀಕವಾಗಿದೆ. ಈ ವಿಚಾರವನ್ನು ಮುಂದಿಟ್ಟುಕೊAಡು ದಲಿತ ಸಮುದಾಯದ ಸಂಘಟನೆಯಯನ್ನು ಬಲಗೊಳಿಸಲು ಮುಂದಿನ ದಿನಗಳಲ್ಲಿ ಪ್ರಯತ್ನಿಸಲಾಗುವುದು ಎಂದರು.
ಸಾಮಾಜಿಕ ಹೋರಾಟಗಾರ ಜಕ್ಕಪ್ಪ, ಅಂಬೇಡ್ಕರ್ ಅಧ್ಯಯನ ಸಂಸ್ಥೆಯ ಅಧ್ಯಕ್ಷ, ಮಾಜಿ ಸಚಿವ ಬಿ.ಬಿ ನಿಂಗಯ್ಯ, ಬಿಎಸ್‌ಪಿ ಮುಖಂಡ ಕೆ.ಟಿ ರಾಧಾಕೃಷ್ಣ , ದಲಿತ ಮುಖಂಡರಾದ ಉಮೇಶ್, ಕುರವಂಗಿ ವೆಂಕಟೇಶ್, ಭೀಮಯ್ಯ, ಹಿರೇಮಗಳೂರು ರಾಮಚಂದ್ರ ,ಹರೀಶ್ ಮಿತ್ರ ,ಪೂರ್ಣೇಶ್, ಕಠಾರಿ ನವರಾಜ್, ಜವರಪ್ಪ , ಕೆ ಭರತ್, ಮತ್ತಿಕೆರೆ ಧರ್ಮೇಶ್, ನಾಗರತ್ನ ಉಪಸ್ಥಿತರಿದ್ದರು.