ಚಾಮರಾಜನಗರ: ಜಾತಿ ಗಣತಿ ಕಾಲಂನಲ್ಲಿ ಗಾಣಿಗ ಸಮುದಾಯದವರು ಗಾಣಿಗ ಎಂದು ಬರೆಸಿ ಎಂದು ಅಖಿಲ ಕರ್ನಾಟಕ ಗಾಣಿಗರ ಸಂಘದ ಉಪಾಧ್ಯಕ್ಷ ಜಿ.ಅಂಕಶೆಟ್ಟಿ ಮನವಿ ಮಾಡಿದರು. ಗಾಣಿಗ ಸಮುದಾಯ ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಲು ಈ ಸಮೀಕ್ಷೆ ಬಹಳ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಮಾಹಿತಿಯನ್ನು ಸಮುದಾಯದವರು ನೀಡಬೇಕೆಂದು ತಿಳಿಸಿದರು. ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮಶೆಟ್ಟಿ, ಸಮೀಕ್ಷೆ ವೇಳೆ ಕೇಳುವ ದಾಖಲೆಗಳನ್ನು ಒದಗಿಸಿ ಸೂಕ್ತ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಕೋರಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಸಿದ್ದರಾಜು, ವಾಣಿಯರ್ ಸಮುದಾಯದ ಸಿ.ಎನ್.ರಾಜು, ಷಣ್ಮುಗಂ, ದುಂಡಯ್ಯ ಇದ್ದರು.