ಚಿಕ್ಕಮಗಳೂರು: ವೀರಶೈವ ಲಿಂಗಾಯತರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಧರ್ಮದ ಕಾಲಂನಲ್ಲಿ ಹಿಂದೂ, ಜಾತಿ ಕಾಲಂನಲ್ಲಿ ವೀರಶೈವ ಲಿ ಂಗಾಯತ ಹಾಗೂ ಉಪಜಾತಿ ಕಾಲಂನಲ್ಲಿ ಅವರವರಿಗೆ ಸೇರಿದ ಉಪಜಾತಿಗಳನ್ನು ಬರೆಸಬೇಕು ಎಂದು ಶ್ರೀ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಬಿ.ಎ.ಶಿವಶಂಕರ್ ತಿಳಿಸಿದರು.
ನಗರದ ವೀರಶೈವ ಲಿಂಗಾಯತ ಸಮುದಾಯದ ಭವನದಲ್ಲಿ ಸೋಮವಾರ ಶ್ರೀ ವೀರಶೈವ ಲಿಂಗಾಯತ ಸಮಾಜದ ೨೦೨೪-೨೫ನೇ ಸಾಲಿನ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯಸರ್ಕಾರ ನಡೆಸುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ವೇಳೆ ವೀರಶೈವ ಲಿಂಗಾಯತ ಸಮಾಜದವರು ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ವೀರಶೈವ ಲಿಂಗಾಯಿತ ಎಂದು ಬರೆಸಬೇಕು. ಆಗ ವೀರಶೈವ ಲಿಂಗಾಯತ ಸರ್ವ ಜನಾಂಗವು ಸಮಾಜದ ಮುಂಚೂಣಿಯಲ್ಲಿರಲು ಸಾಧ್ಯವಾಗಲಿದೆ ಎಂದರು.
ವೀರಶೈವ ಲಿಂಗಾಯತ ಸಮಾಜವನ್ನು ಸ್ವತಂತ್ರö್ಯ ಧರ್ಮವಾಗಿಸಲು ಮಹಾಸಭಾ ಪ್ರಯತ್ನಿಸುತ್ತಿವೆ. ಹೀಗಾಗಿ ಸಮೀಕ್ಷೆಯಲ್ಲಿ ಸಂವಿಧಾನ ಮಾನ್ಯ ಮಾಡಿದ ಧರ್ಮವನ್ನೇ ಉಲ್ಲೇಖಿಸಬೇಕು. ಹೊಸ ಧರ್ಮ ಹುಟ್ಟುಹಾಕುವ ಬದಲು ಇರುವ ಧರ್ಮ ಸುಭದ್ರವಾಗಿಸಬೇಕು ಎಂದು ಹೇಳಿದರು.
ನಾವೆಲ್ಲರೂ ಒಗ್ಗಟ್ಟಾಗಿದ್ದರೆ ಮಾತ್ರ ರಾಜಕೀಯ ಮುಖಂಡರು ಜನಾಂಗದವರ ಮಾತನ್ನು ಕೇಳುತ್ತಾರೆ. ಜನಾಂಗ ಅವರ ಮಾತಿಗೆ ಬೆಲೆಕೊಡದೇ ಒಗ್ಗಟ್ಟನ್ನು ಪ್ರದರ್ಶಿಸಬೇಕು. ರಾಜ್ಯ ಸರ್ಕಾರ ನಡೆಸುತ್ತಿರುವ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜನಗಣತಿಯಲ್ಲಿ ವೀರಶೈವ ಲಿಂಗಾಯತರು ತಮ್ಮ ಧ್ವನಿ ಎತ್ತುವ ನಿರ್ಧಾರ ಕೈಗೊಳ್ಳಬೇಕು ಎಂದರು.
ಸAಘದ ಪ್ರಧಾನ ಕಾರ್ಯದರ್ಶಿ ಎಂ.ಸಿ.ಶಿವಾನAದಸ್ವಾಮಿ ವರದಿ ಮಂಡಿಸಿದರು. ಉಪಾಧ್ಯಕ್ಷರಾದ ಎಚ್.ಎನ್.ನಂಜೇಗೌಡ, ಎಚ್.ಎಂ.ರೇಣುಕಾರಾಧ್ಯ, ಎಂ.ಎಸ್.ನಿರAಜನ್, ಕಾರ್ಯದರ್ಶಿಗಳಾದ ಸಿ.ಬಿ.ನಂದೀಶ್, ಡಿ.ಎಸ್.ಮಮತ, ಖಜಾಂಚಿ ಎಸ್.ದೇವರಾಜ್, ನಿರ್ದೇಶಕರಾದ ಎ.ಎಸ್.ದಿವಾಕರ್, ಯು.ಎಂ.ಬಸವರಾಜು, ಜಿ.ಕೆ.ನಂಜೇಶ್, ಬಿ.ಪಿ.ಜಗದೀಶ್, ಕೆ. ಎಚ್.ಕುಮಾರಸ್ವಾಮಿ ಮತ್ತಿತರರಿದ್ದರು.