ಬಾಗಲಕೋಟೆ: ಪಂಚಮಸಾಲಿ ಸಮಾಜದ ೨ಎ ಮೀಸಲಾತಿ ನೀಡುವ ಕುರಿತು ಹೋರಾಟಕ್ಕೆ ಸಚಿವ ಶಿವಾನಂದ ಪಾಟೀಲ ಕೊಡುಗೆ ಶೂನ್ಯವಾಗಿದೆ. ಕೂಡಲಸಂಗಮ ಶ್ರೀಗಳು ೭೫೦ ದಿನಗಳ ಪಾದಯಾತ್ರೆ ಕೈಗೊಂಡಾಗ ಭಾಗವಹಿಸಲಿಲ್ಲ. ತನು, ಮನದಿಂದಲು ಕೈ ಜೋಡಿಸಲಿಲ್ಲ. ಮೂಲತಃ ಸಂಯುಕ್ತ ಪಾಟೀಲ ಪಂಚಮಸಾಲಿ ಸಮಾಜಕ್ಕೆ ಸೇರಿದವರಲ್ಲ. ಬಣಜಿಗ ಸಮಾಜದವರು…!!
ಹೀಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಂಚಮಸಾಲಿ ಸಮುದಾಯದ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿ.ಸಿ.ಪಾಟೀಲ, ಸಿದ್ದು ಸವದಿ ಸಚಿವ ಶಿವಾನಂದ ಪಾಟೀಲ, ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾಜದ ಮಕ್ಕಳ ಶಿಕ್ಷಣಕ್ಕಾಗಿ ಪಂಚಮಸಾಲಿ ಸಮಾಜ ಮೀಸಲಾತಿ ಕೇಳಿತ್ತು. ಆದರೇ ಒಂದು ದಿನವು ಹೋರಾಟಕ್ಕೆ ಬರಲಿಲ್ಲ. ಶ್ರೀಗಳನ್ನು ಭೇಟಿ ಮಾಡಲಿಲ್ಲ. ಇದೀಗ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಮತ ಕೇಳುತ್ತಿದ್ದಾರೆ. ಜಾತಿ ಅಸö ಪ್ರಯೋಗಿಸುತ್ತಿದ್ದಾರೆ. ಪಂಚಮಸಾಲಿ ಸಮಾಜದವರು ಇದಕ್ಕೆ ಕಿವಿಗೊಡಬಾರದು. ಬಿಜೆಪಿಗೆ ಮತ ಚಲಾಯಿಸುವ ಮೂಲಕ ಮೋದಿ ಅವರ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ನಾನು ಈ ಹಿಂದಿನ ಸರ್ಕಾರ ಕೆಎಚ್‌ಡಿಸಿ ಅಧ್ಯಕ್ಷನಾಗಿದ್ದೆ. ಪ್ರಮಾಣಿಕವಾಗಿ ನೇಕಾರರಿಗೆ ಅನುಕೂಲ ಮಾಡಿದ್ದೇನೆ. ಆದರೇ ಸಚಿವ ಶಿವಾನಂದ ಪಾಟೀಲ ಈಚೆಗೆ ತೇರದಾಳ ಮತಕ್ಷೇತ್ರಕ್ಕೆ ಪ್ರಚಾರಕ್ಕೆ ಆಗಮಿಸಿದ ವೇಳೆ ವೈಯಕ್ತಿಕ ತೇಜೋವದೆ ಮಾಡಿದ್ದಾರೆ. ಸಂಸ್ಥೆಗೆ ೪೦ ಕೋಟಿ ರೂ. ಲಾಭ ಮಾಡಿದ್ದ ನನ್ನ ಹಾಗೂ ಐಎಎಸ್ ಅಽಕಾರಿ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸಾಕ್ಷಿ ಸಮೇತ ಆರೋಪ ಸಾಬೀತು ಮಾಡಬೇಕು. ಬಹಿರಂಗವಾಗಿ ಇದಕ್ಕೆ ಶಿವಾನಂದ ಪಾಟೀಲ ಸ್ಪಷ್ಟ ಪಡಿಸಬೇಕು. ತಾವೇ ಜವಳಿ ಸಚಿವರಾಗಿದ್ದು ಶಾಲಾ ಮಕ್ಕಳಿಗೆ ಸಮವಸö ನೀಡುವಲ್ಲಿ ಅನ್ಯ ಕಂಪನಿಗೆ ಟೆಂಡರ್ ಯಾಕೇ ಕೊಟ್ಟಿದ್ದೀರಿ? ಸುಳ್ಳು ಆರೋಪ ಮಾಡುವದರಿಂದ ಯಾರಿಗೂ ಶೋಭೆ ತರುವದಿಲ್ಲ ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಎಲ್ಲ ಸಮಾಜಕ್ಕೆ ಮೀಸಲಾತಿ ಕೇಳಿದ್ದೇವು. ಅದೇ ರೀತಿ ಪಂಚಮಸಾಲಿ ಸಮಾಜವು ಹೋರಾಟ ಮಾಡಿತ್ತು. ಸಚಿವ ಶಿವಾನಂದ ಪಾಟೀಲ ಹೋರಾಟಕ್ಕೆ ಕೈ ಜೋಡಿಸಲಿಲ್ಲ. ಕೂಡಲಸಂಗಮ ಶ್ರೀಗಳು ಧನ ಸಹಾಯಕ್ಕೆ ಮನವಿ ಮಾಡಿದರೇ ಮಗಳ ಮದುವೇ ಇದೇ. ಸಾಲ ಮಾಡಿಕೊಂಡಿದ್ದೇನೆ. ನನ್ನ ಬಳಿ ಹಣವಿಲ್ಲ ಎಂದರು. ಇದೀಗ ಪಂಚಮಸಾಲಿ ಸಮಾಜದ ಮತ ಕೇಳುವ ನೈತಿಕತೆ ಅವರಿಗೆ ಇಲ್ಲ. ಸಂಯುಕ್ತ ಪಾಟೀಲ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಲ್ಲ.ಬಣಜಿಗ ಸಮಾಜದವರು. ಪಂಚಮಸಾಲಿ ಸಮಾಜಕ್ಕೆ ಸಾಕಷ್ಟು ಭವಿಷ್ಯವಿದೆ. ಸಾಕಷ್ಟು ಜನ ಶಾಸಕರು ಆಗಿದ್ದಾರೆ. ರಾಜಕೀಯ ಪ್ರಾತಿನಿಧ್ಯ ಸಿಕ್ಕಿದೆ. ಸಚಿವ ಶಿವಾನಂದ ಪಾಟೀಲ ಮಾತಿಗೆ ಬಲಿಯಾಗಬಾರದು. ಇದು ಜಾತಿ ಚುನಾವಣೆ ಅಲ್ಲ. ದೇಶದ ಚುನಾವಣೆ ಎಂದು ಮನವಿ ಮಾಡಿದ ಅವರು, ಧಮ್ ಇದ್ದರೇ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡುತ್ತೇವೆ ಅಂತ ಸಿಎಂ ಸಿದ್ದರಾಮಯ್ಯ ಅವರಿಂದ ೧೫ ದಿನಗಳಲ್ಲಿ ಘೋಷಣೆ ಮಾಡಿಸಿ ಸವಾಲ್ ಹಾಕಿದರು.
ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ಸಮಾಜಕ್ಕೆ ಏನು ಕೊಡುಗೆ ನೀಡಿದವರ ಬಗ್ಗೆ ಕಾಳಜಿ ಅಗತ್ಯವಿಲ್ಲ. ಇಷ್ಟಕ್ಕೂ ಕಾಂಗ್ರೆಸ್ ಈ ಚುನಾವಣೆಯಲ್ಲಿ ಕೇವಲ ೨೨೦ ಕ್ಷೇತ್ರಗಳಿಗೆ ಮಾತ್ರ ಸ್ಪರ್ಧೆ ಮಾಡಿದರೇ. ಕೇಂದ್ರದಲ್ಲಿ ಅಽಕಾರಕ್ಕೆ ಬರುವ ಕನಸು ನನಸಾಗಲು ಸಾಧ್ಯವಿಲ್ಲ. ಈ ಸಾರಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಽಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.
ಮುಖಂಡರಾದ ಡಾ.ಮಹಾಂತೇಶ ಕಡಪಟ್ಟಿ, ರುದ್ರಗೌಡ ಪಿ., ಡಾ.ಬಿ.ಎಸ್.ಪಾಟೀಲ(ನಾಗರಾಳ),