ಜಿಲ್ಲೆ

ಜಾಗದ ವಿಚಾರಕ್ಕೆ ಮಹಿಳೆ ಮೇಲೆ ಹಲ್ಲೆ

ಚಾಮರಾಜನಗರ: ಜಾಗದ ವಿಚಾರಕ್ಕೆ ಮಹಿಳೆಯೊಬ್ಬರಿಗೆ ಐವರು ಹಲ್ಲೆ ನಡೆಸಿದ್ದು ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊಳ್ಳೇಗಾಲದ ಮುಳ್ಳೂರು ಗ್ರಾಮದ ಸುಶೀಲ(55) ಹಲ್ಲೆಗೊಳಗಾದ ಮಹಿಳೆ. ಗ್ರಾಮದ ಮಾದೇಶ್, ಭಾಗ್ಯ, ಮಹೇಶ್, ಮಹದೇವಸ್ವಾಮಿ, ರವಿ ಹಲ್ಲೆ ನಡೆಸಿರುವ ಆರೋಪಿಗಳಾಗಿದ್ದಾರೆ.

ಗುರುವಾರ ಬೆಳಗ್ಗೆ‌ 11 ಗಂಟೆಯಲ್ಲಿ ಅರೋಪಿಗಳಾದ ಮಾದೇಶ್, ಭಾಗ್ಯ, ಮಹೇಶ್, ಮಹದೇವಸ್ವಾಮಿ, ರವಿ ದೂರುದಾರೆ ಸುಶೀಲರಿಗೆ ಸೇರಿದ ಜಾಗದಲ್ಲಿ ಅಕ್ರಮವಾಗಿ ಗೋಡೆ ಕಟ್ಟುತ್ತಿದ್ದನ್ನು ತಡೆದ ಸುಶೀಲರಿಗೆ ಅವ್ಯಾಚ ಶಬ್ದದಿಂದ ನಿಂದಿಸಿದಲ್ಲದೆ ಏಕಾಏಕಿ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರಿಗೆ ನೊಂದ ಮಹಿಳೆ ಸುಶೀಲಾ ದೂರು ನೀಡಿದ್ದಾರೆ. ಈ ಸಂಬಂಧ‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.