ಮಹಾರಾಷ್ಟ್ರದ ನವಿ ಮುಂಬೈನ ಕೆಎಲ್‌ಇ ಕಾನೂನು ಕಾಲೇಜಿನ 4ನೇ ರಾಷ್ಟ್ರೀಯ ಕಾನೂನು ಉತ್ಸವ ಜರುಗಿತು. ನ್ಯಾಯಾಧೀಶರಾದ ಅಭಯ್ ಎಸ್. ಓಕಾ, ರಾಜೇಶ್ ಎಸ್. ಪಾಟೀಲ್, ವಿಜಯಕುಮಾರ್ ಪಾಟೀಲ್, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಹಾಂತೇಶ ಕೌಜಲಗಿ ಇತರರಿದ್ದರು. 
ಜಿಲ್ಲೆ

ಜಾಗತಿಕವಾಗಿ ವಿಸ್ತರಿಸಿದೆ ಕೆಎಲ್‌ಇ ಸಂಸ್ಥೆ

ಬೆಳಗಾವಿ: ಮಹಾರಾಷ್ಟ್ರದ ನವಿ ಮುಂಬೈನ ಕೆಎಲ್‌ಇ ಕಾನೂನು ಕಾಲೇಜಿನ 4ನೇ ರಾಷ್ಟ್ರೀಯ ಕಾನೂನು ಉತ್ಸವ-ಸ್ಪಾರ್ಕಲ್4.0ರ ಸಮಾರೋಪ ಸಮಾರಂಭ ಈಚೆಗೆ ಜರುಗಿತು. ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ಮಾತನಾಡಿ, ಸಪ್ತಋಷಿಗಳಿಂದ ಆರಂಭವಾದ ಕೆಎಲ್‌ಇ ಸಂಸ್ಥೆ ಇಂದು ಜಾಗತಿಕವಾಗಿ ವಿಸ್ತರಿಸಿದೆ. ಶಿಕ್ಷಣದ ಎಲ್ಲ ಬೇಕುಬೇಡಿಕೆಗಳನ್ನು ಪೂರೈಸಿದೆ. ಯುಎಸ್‌ಎನಲ್ಲಿನ ಅತ್ಯಂತ ಹಳೆಯ ವೈದ್ಯಕೀಯ ವಿಶ್ವವಿದ್ಯಾಲಯ, ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದಂತಹ ಖ್ಯಾತನಾಮ ವಿವಿಗಳೊಂದಿಗೆ ಒಡಂಬಡಿಕೆ ಮಾಡಿಕೊಂಡು ಸಂಶೋಧನೆಯತ್ತ ಹೆಜ್ಜೆಇಟ್ಟಿದೆ ಎಂದರು.

ನ್ಯಾಯಾಧೀಶ ಅಭಯ್ ಎಸ್. ಓಕಾ ಮಾತನಾಡಿ, ಯುವ ಪ್ರತಿಭಾ ಸಂಪನ್ನ ನ್ಯಾಯವಾದಿಗಳಿಗೆ ಸಾಕಷ್ಟು ಅವಕಾಶಗಳಿದ್ದು ಕಾನೂನಿನ ಪ್ರತಿ ಸೂಕ್ಷ್ಮತೆ ಅರಿತುಕೊಳ್ಳಬೇಕು. ಹೆಚ್ಚೆಚ್ಚು ಅಧ್ಯಯನ ನಮ್ಮನ್ನು ಜ್ಞಾನವಂತರನ್ನಾಗಿ ಮಾಡುತ್ತದೆ ಎಂದರು. ರಾಷ್ಟ್ರೀಯ ಮೂಟ್ ಕೋರ್ಟ್ ಸ್ಪರ್ಧೆಯ ವಿಜೇತರಾಗಿ ಮುಂಬೈನ ರಿಜ್ವಿ ಕಾನೂನು ಕಾಲೇಜು ಹಾಗೂ ರನ್ನರ್ ಅಪ್ ಕ್ರೈಸ್ಟ್ ಯೂನಿವರ್ಸಿಟಿ ಲವಾಸಾ ಕಾಲೇಜು ಪ್ರಶಸ್ತಿ ಪಡೆದವು. ರಾಷ್ಟ್ರೀಯ ಕ್ಲೈಂಟ್ ಕೌನ್ಸೆಲಿಂಗ್ ಸ್ಪರ್ಧೆಯ ವಿಜೇತರಾಗಿ ಮುಂಬೈನ ಎನ್‌ಎಂಐಎಂಎಸ್ ಕಿರಿತ್ ಪಿ. ಮೆಹ್ತಾ ಸ್ಕೂಲ್ ಆಫ್ ಲಾ, ಚಂಡೀಗಢದ ಯುಐಎಲ್‌ಎಸ್ ಕಾನೂನು ಕಾಲೇಜು ರನ್ನರ್ ಅಪ್ ಆಗಿ ಹೊರಹೊಮ್ಮಿದವು. ಕೆಎಲ್‌ಇ ಸಂಸ್ಥೆಯ ಹಿರಿಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಮಾಜಿ ಎಂಎಲ್‌ಸಿ ಮಹಾಂತೇಶ ಕವಟಗಿಮಠ, ಬೆಂಗಳೂರು ಕಾನೂನು ಕಾಲೇಜಿನ ಪ್ರಾಚಾರ್ಯ ಡಾ.ಮಲ್ಲಿಕಾರ್ಜುನಯ್ಯ, ಬಾಂಬೆ ಹೈಕೋರ್ಟ್ ನ್ಯಾಯಾಧೀಶ ರಾಜೇಶ್ ಎಸ್. ಪಾಟೀಲ್, ಕರ್ನಾಟಕ ಹೈಕೋರ್ಟ್ ನ್ಯಾಯಾಧೀಶ ವಿಜಯಕುಮಾರ್ ಪಾಟೀಲ್, ಮುಂಬೈ ಅಮಿಟೆ ವಿಶ್ವವಿದ್ಯಾಲಯ ಅಮಿಟೆ ಕಾನೂನು ಕಾಲೇಜಿನ ಮಾಜಿ ನಿರ್ದೇಶಕ ಪ್ರೊ.ಡಾ.ಕುಶಾಲ ವಿಭೂತೆ ಇತರರಿದ್ದರು.