ಜಿಲ್ಲೆ

ಜಾಗತಿಕ ಸವಾಲು ಮೆಟ್ಟಿ ನಿಲ್ಲಲು ಜೀವ ವಿಜ್ಞಾನ ಅರ್ಥೈಸಿಕೊಳ್ಳುವುದು ಅವಶ್ಯಕ

ರಾಜಣ್ಣ

ಕೆ.ಎಂ.ದೊಡ್ಡಿ: ಜಾಗತಿಕ ಸವಾಲುಗಳನ್ನು ಮೆಟ್ಟಿ ನಿಲ್ಲಲು ಜೀವ ವಿಜ್ಞಾನವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಅವಶ್ಯಕ ಎಂದು ಮೈಸೂರಿನ ಲೈಫ್ ಸೈನ್ಸಸ್ ಮತ್ತು ಜೆಎಸ್‌ಎಸ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆ್ಯಂಡ್ ರಿಸರ್ಚ್ ಮುಖ್ಯಸ್ಥ ಪ್ರೊ.ಕೆ.ಎ.ರವೀಶ್ ಅಭಿಪ್ರಾಯಪಟ್ಟರು.

ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಗಂಣದಲ್ಲಿ ಭಾರತಿ ಕಾಲೇಜಿನ(ಸ್ವಾಯತ್ತ) ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ ಸಸ್ಯಶಾಸ್ತ್ರ ಪ್ರಾಣಿಶಾಸ್ತ್ರ, ಜೀವ ರಸಾಯನಶಾಸ್ತ್ರ, ಜೈವಿಕ ತಂತ್ರಜ್ಞಾನ ಮತ್ತು ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ವಿಭಾಗಗಳು ಮತ್ತು ಐಕ್ಯೂಎಸಿ ಸಹಯೋಗದೊಂದಿಗೆ ಇಂಟೆಗ್ರೇಟಿವ್ ಅಪ್ರೂಚೆಸ್ ಇನ್ ಬಯಾಲಾಜಿಕಲ್ ಸೈನ್ಸ್ ಫಾರ್ ಗ್ಲೋಬಲ್ ಚಾಲೆಂಜಸ್‌ಎಂಬ ವಿಷಯ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಸಂಶೋಧನ ವಿದ್ಯಾರ್ಥಿಗಳು ಜೀವ ವಿಜ್ಞಾನದ ಕೊಡುಗೆಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇದ್ದು, ಜಾಗತಿಕ ಸವಾಲುಗಳನ್ನು ನಿವಾರಿಸಲು ಜೀವ ವಿಜ್ಞಾನ ಮತ್ತು ಇತರ ಅನ್ವಯಿಕ ವಿಷಯಗಳೊಂದಿಗೆ ಅದರ ಏಕೀಕರಣವು ಜಾಗತಿಕ ಸವಾಲುಗಳನ್ನು ಎದುರಿಸುವ ಏಕೈಕ ಮಾರ್ಗವಾಗಿದೆ ಎಂದರು.

ಮಹಾರಾಷ್ಟ್ರದ ಅಹಮದ್‌ನಗರ ಕಾಲೇಜು ಪ್ರಾಣಿಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಡಾ.ಇವಾನ್ ಅರಾನ್ಹಾ ಮಾತನಾಡಿ, ಮಾನವನ ಆರೋಗ್ಯದ ಮೇಲೆ ಮೈಕ್ರೋಪ್ಲಾಸ್ಟಿಕ್‌ಗಳ ಪರಿಣಾಮಗಳು, ಪರಿಸರ ವಿಜ್ಞಾನದಲ್ಲಿ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಚೇರ‌್ಮನ್ ಡಾ.ಟಿ.ಎಸ್.ಹರ್ಷ ಅವರು, ಜಗತ್ತು ಎದುರಿಸುತ್ತಿರುವ ಹವಾಮಾನದಲ್ಲಿನ ಪ್ರಸ್ತುತ ಬದಲಾವಣೆಗಳು, ಏರುತ್ತಿರುವ ಜಾಗತಿಕ ತಾಪಮಾನ ಹಾಗೂ ಅದರಿಂದಾಗುತ್ತಿರುವ ದುಷ್ಪರಿಣಾಮಗಳಿಗೆ ಜನಸಂಖ್ಯಾ ಸ್ಫೋಟವು ಪ್ರಮುಖ ಕಾರಣ ಎಂಬ ವಿಷಯದ ಬಗ್ಗೆ ಮಾತನಾಡಿದರು.

ರಾಜ್ಯದ ಹಾಗೂ ಹೊರ ರಾಜ್ಯದ ವಿವಿದ ವಿಶ್ವವಿದ್ಯಾಲಗಳು ಮತ್ತು ಕಾಲೇಜುಗಳ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸಿ ಸುಮಾರು 50ಕ್ಕೂ ಹೆಚ್ಚು ವಿವಿಧ ವಿಷಯಗಳ ಕುರಿತು ಪ್ರಬಂಧಗಳನ್ನು ಮಂಡಿಸಿದರು.

ಅಧ್ಯಕ್ಷತೆಯನ್ನು ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ವಹಿಸಿದ್ದರು.

ಭಾರತಿ ಕಾಲೇಜಿನ ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ಕೇಂದ್ರದ ಡೀನ್ ಮತ್ತು ನಿರ್ದೇಶಕ ಪ್ರೊ.ಎಸ್.ನಾಗರಾಜು, ಕಾರ್ಯಕ್ರಮದ ಸಂಯೋಜಕ, ಐಕ್ಯುಎಸಿ ಸಂಯೋಜಕ ಮತು ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಂ.ಪಿ.ತೇಜಶ್‌ಕುಮಾರ್, ಕಾರ್ಯಕ್ರಮದ ಸಂಚಾಲಕ ಮತ್ತು ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಪಿ.ಪುನೀತ್ ಮತ್ತು ವಿವಿಧ ವಿಭಾಗಗಳ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.