ಕಲಬುರಗಿ: ಮುಂದಿನ ಕೆಲವೇ ವರ್ಷಗಳಲ್ಲಿ ಶರಣಬಸವ ವಿಶ್ವವಿದ್ಯಾಲಯ ಜಗತ್ ಪ್ರಸಿದ್ಧ ವಿಶ್ವವಿದ್ಯಾಲಗಳ ಪಟ್ಟಿಯಲ್ಲಿ ಸೇರಲಿದೆ ಎಂದು ಶರಣಬಸವ ವಿವಿ ಕುಲಪತಿ ಡಾ.ಅನೀಲಕುಮಾರ ಬಿಡುವೆ ಹೇಳಿದರು. ಶರಣಬಸವೇಶ್ವರ ದೇವಸ್ಥಾನದಲ್ಲಿ ೩೦ ದಿನಗಳ ಸಾಂಸ್ಕೃತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ಶರಣಬಸವ ವಿಶ್ವವಿದ್ಯಾಲಯ ಕುರಿತು ಮಾತನಾಡಿದರು. ಕಲ್ಯಾಣ ಕರ್ನಾಟಕದ ಪ್ರಥಮ ಖಾಸಗಿ ವಿವಿಯನ್ನು ಶ್ರೀ ಡಾ.ಶರಣಬಸವ ಅಪ್ಪ ೨೦೧೭ರಲ್ಲಿ ಸ್ಥಾಪಿಸಿ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿದ್ದಾರೆ. ೬೦ ಕೋರ್ಸ್ಗಳಲ್ಲಿ ೬,೫೦೦ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿದ್ದು, ವಾರ್ಷಿಕ ೫೦ ಕೋಟಿ ರೂ. ಹಣ ಪೂಜ್ಯ ಡಾ.ಅಪ್ಪ, ಡಾ.ದಾಕ್ಷಾಯಿಣಿ ಅಪ್ಪ ನೀಡುತ್ತಿದ್ದಾರೆ. ೧೯೩೪ ರಲ್ಲಿ ದೊಡ್ಪಪ್ಪ ಅಪ್ಪ ಮಹಿಳೆಯರಿಗಾಗಿ ಶಿಕ್ಷಣ ಆರಂಭಿಸಿದ್ದು, ೨೦೧೭ರಲ್ಲಿ ಪೂಜ್ಯ ಡಾ.ಅಪ್ಪ ಖಾಸಗಿ ವಿವಿ ಆರಂಭಿಸಿ ಶೈಕ್ಷಣಿಕವಾಗಿ ಬೆಳೆಯಲು ಕಾರಣರಾಗಿದ್ದಾರೆ. ವಿವಿಯಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಅಧ್ಯಯನ ಮಾಡುತ್ತಿದ್ದು, ಸ್ತಿçà ಸಬಲೀಕರಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಪೂಜ್ಯ ಡಾ.ಅಪ್ಪ ೨೦ ವರ್ಷದ ಹಿಂದೆ ಕಂಡ ಕನಸು ನೆರವೇರಿಸಿದ್ದಾರೆ. ಮಹಾದೇವಿ ಕನ್ಯಾ ಪ್ರಾಥಮಿಕ ಶಾಲೆಯಿಂದ ಶರಣಬಸವ ವಿಶ್ವವಿದ್ಯಾಲಯ ಮಟ್ಟದವರೆಗೆ ಶರಣಬಸವೇಶ್ವರ ಸಂಸ್ಥಾನ ಬೆಳೆಯಲು ಪೂಜ್ಯ ಡಾ.ಅಪ್ಪ ಮಾರ್ಗದರ್ಶನ, ಚಿ.ದೊಡ್ಡಪ್ಪ ಅಪ್ಪ ಆರ್ಶೀವಾದ, ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ, ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ನಿರಂತರ ಕಾರ್ಯವೈಖರಿ ಕಾರಣ ಎಂದರು.