ಜಾಗ ವಿವಾದ ಹಿನ್ನಲೆ ಎರಡು ಗುಂಪುಗಳ ಮಧ್ಯೆ ಹೊಡೆದಾಟ
ಬೆಳಗಾವಿ: ಜಾಗದ ವಿಷಯಕ್ಕಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡೆದ ಗಲಾಟೆ ವೇಳೆ ಪರಸ್ಪರ ಕಲ್ಲು ತೂರಿ ಮಾರಕಾಸ್ತ್ರಗಳಿಂ,ಮಹಿಳೆಯರೂ ಸೇರಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ತಾಲೂಕಿನ ಹಳೆ ವಂಟಮೂರಿ ಗ್ರಾಮದಲ್ಲಿ ಬುಧವಾರ ನಡೆದಿದೆ..
ಗಲಾಟೆಯಿಂದ ಓರ್ವ ಮಹಿಳೆ ಸ್ಥಿತಿ ಗಂಭೀರವಾಗಿದೆ.ಮಾರುತಿ ವಣ್ಣೂರೆ ಹಾಗೂ ಪರಸಪ್ಪಾ ಹೋಳಿಕಾರ ಕುಟುಂಬ ಮಧ್ಯೆ ಜಾಗ ವಿವಾದ,ವಾಗ್ವಾದ ತಾರಕಕ್ಕೇರಿ ಮನೆಯ ಛಾವಣಿ ಮೇಲೆ ಹತ್ತಿ ಹೆಂಚು ಹಾಗೂ ಕಲ್ಲು ತೂರಾಟ,ಕುಡಗೋಲಿನಿಂದ ನಿಂಗವ್ವಾ ವಣ್ಣೂರೆ ಮೇಲೆ ಹಲ್ಲೆ ನಡೆದಿದ್ದು,ಗಾಯಾಳು ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಕಾಕತಿ ಪೋಲಿಸರ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.