ಚಿತ್ರದುರ್ಗ: ಜೀವವೈವಿಧ್ಯದಿಂದ ಕೂಡಿರುವ ನಿಸರ್ಗವನ್ನು ಉಳಿಸಿ, ಬೆಳೆಸಬೇಕಿದೆ ಎಂದು ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ಹೇಳಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆ, ಪದ್ಮಾವತಿ ಕಾಲೇಜ್ ಆಫ್ ನರ್ಸಿಂಗ್ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಎಲ್.ಗೌಡ ಲೇಔಟ್ ಉದ್ಯಾನದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ಪರಿಸರ ಸಂರಕ್ಷಣೆ ವಿಷಯದಲ್ಲಿ ನಮ್ಮ ಜವಾಬ್ದಾರಿ ಹೆಚ್ಚಬೇಕಿದೆ ಎಂದರು.
ರೋಟರಿಯನ್ ಎಂ.ಕೆ.ರವೀಂದ್ರ ಕಾರ‌್ಯಕ್ರಮ ಉದ್ಘಾಟಿಸಿದರು. ನಗರಸಭೆ ಸದಸ್ಯೆ ಸುನಿತಾ ರಘು, ರೆಡ್‌ಕ್ರಾಸ್ ಸಂಸ್ಥೆಯ ಕೆ.ಮಧುಪ್ರಸಾದ್, ಗಾಯತ್ರಿ ಶಿವರಾಮ್, ಅರುಣ್‌ಕುಮಾರ್, ಶಿವರಾಮ್, ಮಜಹರ್ ಉಲ್ಲಾ, ಗುರುಮೂರ್ತಿ, ವೀಣಾ ಜಯರಾಮ್, ಮಂಜುನಾಥ್ ಭಾಗವತ್, ಪ್ರಾಚಾರ್ಯ ವೆಂಕಟೇಶ್‌ರೆಡ್ಡಿ, ಪ್ರಕೃತಿ ಶಾಲಾ ಆಡಳಿತ ಮಂಡಳಿ ಉಪಾಧ್ಯಕ್ಷ ಉಮೇಶ್ ವಿ.ತುಪ್ಪದ, ಶ್ವೇತಾ ಕಾರ್ತಿಕ್ ಮತ್ತಿತರರು ಇದ್ದರು. ಎಂ.ಕಾರ್ತಿಕ್ ನಿರೂಪಿಸಿದರು.