ಜಿಲ್ಲೆ

ಜವಾಬ್ದಾರಿ ನಿಭಾಯಿಸದಿದ್ದರೆ ಸೇವೆಗೆ ಅವಕಾಶವಿಲ್ಲ: ಸಚಿವ ಸತೀಶ ಜಾರಕಿಹೊಳಿ ಎಚ್ಚರಿಕೆ

ಜವಾಬ್ದಾರಿ ನಿಭಾಯಿಸದಿದ್ದರೆ ಸೇವೆಗೆ ಅವಕಾಶವಿಲ್ಲ: ಸಚಿವ ಸತೀಶ ಜಾರಕಿಹೊಳಿ ಎಚ್ಚರಿಕೆ

ವಿಜಯವಾಣಿ ಸುದ್ದಿಜಾಲ ಬೆಳಗಾವಿ :

ಬೆಳಗಾವಿ ದೊಡ್ಡ ಜಿಲ್ಲೆಯಾಗಿದೆ.ಅಭಿವೃದ್ಧಿ ಕೆಲಸ ಮಾಡುವುದು,ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು ಅಧಿಕಾರಿಗಳ ಜವಾಬ್ದಾರಿ.ಅಭಿವೃದ್ಧಿ ನಿರ್ಲಕ್ಷ್ಯ ಅಥವಾ ಕಾನೂನು ಸುವ್ಯವಸ್ಥೆ ಸರಿಯಾಗಿ ನಿಭಾಯಿಸದಿದ್ದರೆ ಅಂತಹ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ಇಲ್ಲ ಎಂದು ಲೋಕೋಪಯೋಗಿ ಇಲಾಖೆ,ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸೋಮವಾರ ಸುದ್ದಿಗಾರ ಜತೆ ಮಾತನಾಡಿದರು.ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ನಿರ್ವಹಣೆ ಮಾಡಬೇಕು.ಕರ್ತವ್ಯ ನಿರ್ಲಕ್ಷ್ಯಿಸಿದರೆ ,ಸರ್ಕಾರಕ್ಕೆ ಹಾಗೂ ನಮಗೂ ಕೆಟ್ಟ ಹೆಸರು ಬರುತ್ತದೆ.ಕೆಲ ಘಟನೆಗಳಲ್ಲಿ ಕಾನೂನು ಸುವ್ಯವಸ್ಥಿತೆ ಕಾಪಾಡುವಲ್ಲಿ ವಿಫಲರಾದ ಪೊಲೀಸ್ ನಗರ ಆಯುಕ್ತರನ್ನು ವರ್ಗಾವಣೆಗೊಳಿಸಲಾಯಿತು ಎಂದು ತಿಳಿಸಿದರು.

ಹಿಡಕಲ್ಲ ಜಲಾಶಯದಿಂದ ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ನೀರು ಒಯ್ಯಲು ಈಗಾಗಲೇ ಮೂರು ಇಲಾಖೆ ಅನುಮತಿ ನೀಡಿವೆ.ಕಾಮಗಾರಿ ನಡೆಯುತ್ತಿದೆ.ಎಷ್ಟು ಪ್ರಮಾಣದ ನೀರು ಒಯ್ಯುತ್ತಾರೆ ಎಂಬ ಮಾಹಿತಿ ಇಲ್ಲಾ.ಈ ಬಗ್ಗೆ ಸಭೆ ನಡೆಸಿ ಭವಿಷ್ಯದಲ್ಲಿ ನಮ್ಮ ಜಿಲ್ಲೆಗೆ ಉಂಟಾಗುವ ನೀರಿನ ಅಭಾವದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆಯುತ್ತೆನೆ ಎಂದು ಹೇಳಿದರು.

ಕನ್ನಡ ಭಾಷೆ ಬಗ್ಗೆ ನಟ ಕಮಲ ಹಾಸನ್ ಹೇಳಿಕೆ ಸರಿಯಲ್ಲ.ಕನ್ನಡ ಭಾಷೆಗೆ ಸಾವಿರಾರು ವರ್ಷದ ಇತಿಹಾಸವಿದೆ.ನಟ ಕಮಲ್ ಹಾಸನ್ ಮೊದಲು ಕನ್ನಡಿಗರ ಬಳಿ ಕ್ಷೇಮೆ ಕೇಳಬೇಕು ಎಂದು ಒತ್ತಾಯಿಸಿದರು.