ಜಿಲ್ಲೆ

ಜಲಾಗಾರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ

ಕೊಪ್ಪಳ:ಕುಡಿವ ನೀರು ಸಂಗ್ರಹಗಾರರಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವಂತೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.


ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.


ತಾಲೂಕುವಾರು ಕುಡಿವ ನೀರು ಸಮಸ್ಯೆಗಳ ಬಗ್ಗೆ ನಿಯಮಿತವಾಗಿ ಸಭೆ ನಡೆಸಿ. ವಾರಕ್ಕೆ ಒಮ್ಮೆಯಾದರೂ ಗ್ರಾಪಂಗಳಲ್ಲಿನ ಪರಿಸ್ಥಿತಿ ಅವಲೋಕಿಸಿ. ನೀರಿನ ಸಂಗ್ರಹಗಾರಗಳನ್ನು ತಿಂಗಳಿಗೆ ಒಮ್ಮೆಯಾದರೂ ಸ್ವಚ್ಛಗೊಳಿಸಿ. ಸಮಸ್ಯೆ ಉಲ್ಬಣಗೊಂಡರೆ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಿ. ಗ್ರಾಪಂಗಳಿಗೆ ಈಗಾಗಲೇ ಎಫ್‌ಟಿಕೆ ಕಿಟ್ ಮತ್ತು ಎಚ್ ಟು ಎಸ್ ಕಿಟ್‌ಗಳನ್ನು ನೀಡಲಾಗಿದೆ. ಅವುಗಳನ್ನು ಬಳಸಿ ನೀರಿನ ಗುಣಮಟ್ಟ ಪರೀಕ್ಷಿಸಿ. ಯೋಗ್ಯ ನೀರನ್ನೇ ಕುಡಿಯಲು ಪೂರೈಸಿ.

ಯೋಗ್ಯವಿಲ್ಲದಿದ್ದಲ್ಲಿ ಅಂಥ ನೀರನ್ನು ಪೂರೈಸಬೇಡಿ. ನೀರಿನ ಮೇಲ್ತೊಟ್ಟಿಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಕುಡಿವ ನೀರಿನ ಪೈಪ್‌ನಲ್ಲಿ ಸೋರಿಕೆ ಕಂಡುಬಂದಲ್ಲಿ ತಕ್ಷಣ ಸರಿಪಡಿಸಿ. 24 ಗಂಟೆಯಲ್ಲಿ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ನಿರ್ದೇಶನ ನೀಡಿದರು. ಜಿಪಂ ಉಪ ಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ತಾಪಂ ಇಒಗಳು, ಗ್ರಾಮೀಣ ಕುಡಿವ ನೀರಿ ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳಿದ್ದರು.