ಜಲಾ ಕಾಳಪ್ಪ. 
ಜಿಲ್ಲೆ

ಜಲಾ ಕಾಳಪ್ಪಗೆ ಭೈರವಿ ಪ್ರಶಸ್ತಿ ಪ್ರದಾನ

ಅಭಿನಯ್ ಎಚ್.ಎಂ

ಸೋಮವಾರಪೇಟೆ: ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾಗಿದ್ದ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಅವರ 80ನೇ ಜಯಂತ್ಯುತ್ಸವ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಚುಂಚಾದ್ರಿ ಮಹಿಳಾ ಸಮಾವೇಶದಲ್ಲಿ ಹಾನಗಲ್ಲು ನಿವಾಸಿ ಹಿರಿಯ ಸಾಹಿತಿ ಜಲಾ ಕಾಳಪ್ಪ ಅವರಿಗೆ ಚುಂಚಾದ್ರಿ ಭೈರವಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಬಿಜಿಎಸ್ ಕಲಾ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾಸಂಸ್ಥಾನ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ, ಶ್ರೀ ಚೈತನ್ಯನಾಥ ಸ್ವಾಮೀಜಿ ಪ್ರಶಸ್ತಿ ಪ್ರದಾನ ಮಾಡಿದರು.