ಯಾದಗಿರಿ: ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸರಬರಾಜು ಮೂಲಗಳ ಸ್ವಚ್ಛತೆಗೆ ಹಾಗೂ ಶುದ್ಧಗೊಳಿಸಲು ವಿಶೇಷ ಗಮನ ನೀಡುವಂತೆ ಸಂಬಂಸಿದ ಅಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದಶರ್ಿ ಮನೋಜ್ ಜೈನ್ ಸೂಚನೆ ನೀಡಿದ್ದಾರೆ.
ಮಂಗಳವಾರ ಸಂಜೆ ನಗರದ ಜಿಪಂ ಕಚೇರಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಗ್ರಾಮಾಂತರ ಹಾಗೂ ನಗರಗಳ ವ್ಯಾಪ್ತಿಯಲ್ಲಿ ನೀರು ಸರಬರಾಜು ಮೂಲಗಳ ಸ್ವಚ್ಛತೆಗೆ ಹಾಗೂ ಶುದ್ಧಗೊಳಿಸಲು ವಿಶೇಷ ಗಮನ ನೀಡಿಬೇಕು. 8 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ನಗರಾಭಿವೃದ್ಧಿ ಕೋಶದ ಯೋಜನೆ ನಿದರ್ೇಶಕರು ಪ್ರತಿನಿತ್ಯ ಭೇಟಿ ನೀಡಿ ಪರಿಶೀಲಿಸಬೇಕು. ಅನುದಾನ ಬಳಕೆ, ಅನುದಾನ ವೆಚ್ಚ ಹಾಗೂ ಬಾಕಿ ಅನುದಾನ ಬಗ್ಗೆ ಪರಿಶೀಲಿಸಬೇಕು. ಅದರಂತೆ ಗ್ರಾಮೀಣ ಭಾಗದಲ್ಲಿ ಪಿಡಿಓಗಳ ಮೂಲಕ ಪರಿಶೀಲನೆ ಆಗಬೇಕು, ನೋಡಲ್ ಅಕಾರಿಗಳು ಕೂಡ ವಿಶೇಷ ಗಮನ ನೀಡಬೇಕು ಎಂದರು.
ಕೆಕೆಆರ್ಡಿಬಿಯಿಂದ ಆರೋಗ್ಯ ಇಲಾಖೆಯ ವ್ಯಾಪ್ತಿಯ ಆಸ್ಪತ್ರೆಗಳಿಗೆ ಸಿಟಿ ಸ್ಕ್ಯಾನರ್ ನೀಡುತ್ತಿದ್ದು, ಇದರ ಸೂಕ್ತ ನಿರ್ವಹಣೆಗೆ 3 ವರ್ಷಗಳ ಕಾಲ ಟೆಕ್ನಿಕಲ್ ಅಸಿಸ್ಟಂಟ್ ನೀಡುವ ಕುರಿತಂತೆ ಪ್ರಸ್ತಾವನೆ ಸಿದ್ಧತ ಪಡಿಸಿ. ಜಿಲ್ಲೆಯ ಕಡೇಚೂರು ಭಾಗದಲ್ಲಿ ಜಿಟಿಟಿಸಿ ತರಬೇತಿಗೆ ಸೇರ ಬಯಸುವ ಅಲ್ಪಸಂಖ್ಯಾತರ ಮಕ್ಕಳ ತರಬೇತಿಗೆ ಬೇಕಾಗುವ ಶುಲ್ಕವನ್ನು ಸಕರ್ಾರದಿಂದ ಭರಿಸಲಾಗುವುದು. ಈ ಕುರಿತು ಸೂಕ್ತ ಮಾಹಿತಿ ಒದಗಿಸಲು ಹಾಗೂ ಕೈಗಾರಿಕೆ ಪ್ರದೇಶ ಅಭಿವೃದ್ಧಿ ವ್ಯಾಪ್ತಿಯ ನಿವೇಶನವನ್ನು ಅವಶ್ಯಕತೆ ಇರುವವರಿಗೆ ಮಾತ್ರ ಒದಗಿಸಬೇಕು ಎಂದು ಹೇಳಿದರು.ಶಹಾಪೂರ ಮತ್ತು ಸುರಪುರ ಮಧ್ಯ ಭಾಗದಲ್ಲಿ ಈ ಹಿಂದೆ ಮಂಜೂರಾಗಿದ್ದ ಚಿಲ್ಲಿಂಗ್ ಪ್ಲಾಂಟ್ ಬಗ್ಗೆ ಪರಿಶೀಲಿಸಬೇಕು. ಈ ಹಿಂದೆ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಯಲ್ಲಿ ಮಂಜೂರಾದ ಅನುದಾನ ಕುರಿತಂತೆ ಪರಿಶೀಲಿಸಬೇಕು. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರ, ಅಂಗನವಾಡಿ, ಶಾಲೆಗಳು, ವಸತಿ ಶಾಲೆಗಳಿಗೆ ಮೂಲ ಸೌಕರ್ಯಗಳ ಇರುವ ಬಗ್ಗೆ ಪರಿಶೀಲನೆ ವರದಿ ಸಲ್ಲಿಸಬೇಕು. ಅಲ್ಲದೆ, ಹತ್ತಿಕುಣಿ ಜಲಾಶಯ ವ್ಯಾಪ್ತಿಯ ಜಮೀನು ಅತಿಕ್ರಮಣದ ಬಗ್ಗೆ ಸಹಾಯಕ ಆಯುಕ್ತರು, ತಹಸೀಲ್ದಾರರು ನೆರವಾಗಬೇಕು ಎಂದು ತಿಳಿಸಿದರು.