????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಜಲಪಾತಕ್ಕೆ ಪ್ರವಾಸಿಗರ ಆಗಮನ; ಹಸಿರು ಹೊದಿಕೆ ಹೊದ್ದುಕೊಂಡಿರುವ ಮುತ್ಯಾಲಮಡು

ಆನೇಕಲ್: ತಾಲೂಕಿನಿಂದ 7 ಕಿ.ಮೀ. ದೂರದಲ್ಲಿರುವ ಮುತ್ಯಾಲಮಡು ಸಾರ್ವಜನಿಕರ ಪ್ರವೇಶಕ್ಕೆ ತೆರೆದುಕೊಂಡಿದ್ದು ಜಲಪಾತ ಈಗ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಪ್ರಕೃತಿಯ ಹಸಿರಿನ ಮಧ್ಯೆ ಜಿನುಗುವ ಜಲಧಾರೆ ನೋಡಲು ಪ್ರವಾಸಿಗರು ಬರತೊಡಗಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರವಾಸಿ ತಾಣಕ್ಕೆ ನಿರ್ಬಂಧ ಹೇರಲಾಗಿತ್ತು. ಕಳೆದ ಕೆಲ ದಿನಗಳಿಂದ ಮಳೆಯಾಗುತ್ತಿರುವುದರಿಂದ ಮುತ್ಯಾಲಮಡು ಸುತ್ತಮುತ್ತ ಗಿಡ-ಮರಗಳು ಚಿಗುರಿದ್ದು, ಹಸಿರು ಹೊದಿಕೆ ಹೊದಿಸಿದಂತೆ ಕಣ್ಮನ ಸೆಳೆಯುತ್ತಿದೆ.

ಮುತ್ಯಾಲಮಡುವಿನಲ್ಲಿ ಪ್ರಕೃತಿ ಸೌಂದರ್ಯ ಸವಿಯುವುದರ ಜತೆಗೆ ನೀರಿನಲ್ಲಿ ಆಟವನ್ನೂ ಆಡಬಹುದಾಗಿದೆ. 300 ಅಡಿ ಎತ್ತರದಿಂದ ಮುತ್ತಿನ ಹನಿಗಳಂತೆ ಕಾಣುವ ನೀರು ಪ್ರಪಾತಕ್ಕೆ ಜಿನುಗುವ ಕಾರಣದಿಂದ ಇದು ಮುತ್ಯಾಲಮಡು ಎಂದು ಪ್ರಸಿದ್ಧವಾಗಿದೆ. ವಾರಾಂತ್ಯದಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಇತ್ತೀಚೆಗೆ ತಾಣ ಅಭಿವೃದ್ಧಿಪಡಿಸಿದ್ದು, ಬೋಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಕೋತಿಗಳು ನೀರಿಗೆ ಧುಮುಕಿ ಆಟ ನೋಡುವುದು ಮುದ ನೀಡುತ್ತದೆ.

ಪ್ರವಾಸಿತಾಣ ಮುತ್ಯಾಲಮಡುವಿಗೆ ಬಂದರೆ ದಿನವೆಲ್ಲಾ ಕಳೆದು ನೀರಿನಲ್ಲಿ ಆಟ ಆಡಿ ಸಂತೋಷಪಡುತ್ತೇವೆ. ದಿವ್ಯಾ ಪ್ರವಾಸಿ ಆನೇಕಲ್ಲಿನವರಾದ ನಾವು ಆಗಾಗ ಮುತ್ಯಾಲಮಡುವಿಗೆ ಬರುತ್ತಿರುತ್ತೇವೆ. ಇಲ್ಲಿನ ಪ್ರಕೃತಿ ಸೌಂದರ್ಯದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪಾವನಿ, ಪ್ರವಾಸಿ ಬೆಂಗಳೂರಿಗೆ ಹತ್ತಿರ ಇರುವ ಪ್ರವಾಸಿ ತಾಣ ಇದಾಗಿರುವುದರಿಂದ ಯಾವಾಗ ಬೇಕಾದರೂ ಬರಬಹುದಾಗಿದೆ. ಈಗ ಜನಸಂಖ್ಯೆ ಕಡಿಮೆ ಇರುವುದರಿಂದ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕಂತಾಗಿದೆ. ಶಿವು, ಪ್ರವಾಸಿಗ